CJI NV Ramana : ಇಂದು ಸಿಜೆಐ ಎನ್​.ವಿ ರಮಣ ನಿವೃತ್ತಿ : ಸುಪ್ರೀಂ ಕೋರ್ಟ್​ನ ಕಾರ್ಯ ಪ್ರಕ್ರಿಯೆಗಳು ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೇರ ಪ್ರಸಾರ

CJI NV Ramana :ಸುಪ್ರೀಂ ಕೋರ್ಟ್​ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ 2021ರ ಏಪ್ರಿಲ್​ 24ರಂದು ಅಧಿಕಾರವನ್ನು ವಹಿಸಿಕೊಂಡಿದ್ದ ಸಿಜೆಐ ಎನ್​.ವಿ ರಮಣ ಇಂದು ದೇಶದ ಅತ್ಯುನ್ನತ ನ್ಯಾಯಾಂಗ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದಲಿದ್ದಾರೆ. ಒಂದು ವರ್ಷ ನಾಲ್ಕು ತಿಂಗಳುಗಳ ಕಾಲ ದೇಶದ ಈ ಅತ್ಯುನ್ನತ ಹುದ್ದೆಯನ್ನು ನಿಭಾಯಿಸಿರುವ ಎನ್​.ವಿ ರಮಣ ಹಲವು ಐತಿಹಾಸಿಕ ಪ್ರಕರಣಗಳಲ್ಲಿ ತೀರ್ಪನ್ನು ನೀಡಿದ್ದಾರೆ.


ನ್ಯಾಯಮೂರ್ತಿ ಎನ್​.ವಿ ರಮಣ ನಿವೃತ್ತಿ ಬಳಿಕ ಈ ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್​ ಉಮೇಶ್​ ಲಲಿತ್​ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಸುಪ್ರೀಂ ಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಯು.ಯು ಲಲಿತ್​ ದೇಶದ ಮುಂದಿನ ಮುಖ್ಯ ನ್ಯಾಯಮೂರ್ತಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಸ್ಟ್​ 10ರಂದು ಘೋಷಣೆ ಮಾಡಿದ್ದರು. ನಾಳೆ ಯು.ಯು ಲಲಿತ್​​ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಸಿಜೆಐ ಎನ್​.ವಿ ರಮಣ ತಮ್ಮ ಒಂದು ವರ್ಷ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ಪೆಗಾಸಿಸ್​ ಹಗರಣ, ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೀಪ, ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್​ ಸರ್ಕಾರದಿಂದ ಪರಿಹಾರ ಹಾಗೂ ಸುಪ್ರೀಂ ಕೋರ್ಟ್​ನ ಹಿಂದಿನ ಮರುಪರಿಶೀಲನಾ ಅರ್ಜಿ, ಪಿಎಂಎಲ್​ಎ ತೀರ್ಪು ಸೇರಿದಂತೆ ಸಾಕಷ್ಟು ಐತಿಹಾಸಿಕ ಪ್ರಕರಣಗಳಲ್ಲಿ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಇಂದು ಎನ್​.ವಿ ರಮಣ ಸಿಜೆಐ ಆಗಿ ತಮ್ಮ ಕೊನೆಯ ದಿನದ ಸೇವೆಯನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಇಂದು ರಮಣ ನೀಡುವ ತೀರ್ಪು ಲೈವ್​ ಸ್ಟ್ರೀಮ್​ ಆಗಲಿದೆ. ಇದೇ ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಸಿಜೆಐ ಕೋರ್ಟ್​ನ ತೀರ್ಪು ಲೈವ್​ ಸ್ಟ್ರೀಮ್​ ಕಾಣಲಿದೆ. ನಿರ್ಗಮಿತ ಸಿಜೆಐ ಹಾಗೂ ನೂತನ ಸಿಜೆಐ ಇಂದು ನ್ಯಾಯಪೀಠವನ್ನು ಹಂಚಿಕೊಳ್ಳಲಿದ್ದಾರೆ.

ಸಿಜೆಐ ಆಗಿ ನೇಮಕಗೊಳ್ಳುವುದಕ್ಕಿಂತ ಮೊದಲು ಎನ್​.ವಿ ರಮಣ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ದೆಹಲಿ ಹೈಕೋರ್ಟ್ ಹಾಗೂ ಆಂಧ್ರಪ್ರದೇಶ ಹೈಕೋರ್ಟ್ನಲ್ಲಿಯೂ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.


ಇನ್ನು ದೇಶದ ಮುಖ್ಯ ನ್ಯಾಯಮೂರ್ತಿ ಎಂಬ ಸ್ಥಾನವನ್ನು ಹೊರತುಪಡಿಸಿ ಎನ್​.ವಿ ರಮಣ ಸಮಾಜದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಮುಕ್ತವಾಗಿ ಧ್ವನಿ ಎತ್ತುವ ಮೂಲಕ ಸುದ್ದಿಯಲ್ಲಿದ್ದಾರೆ. ದೇಶದಲ್ಲಿ ನ್ಯಾಯಾಂಗ ಹಿನ್ನಡೆಯಾಗಿರಬಹುದು ಅಥವಾ ನಿವೃತ್ತ ನ್ಯಾಯಾಧೀಶರ ಸುರಕ್ಷತೆ ಹಾಗೂ ಭದ್ರತೆಯ ವಿಚಾರವಾಗಿರಬಹುದು.ರಮಣ ಈ ಎಲ್ಲಾ ವಿಚಾರಗಳ ಬಗ್ಗೆ ನಿಖರವಾಗಿ ಮಾತನಾಡಿದ್ದಾರೆ. ನಿವೃತ್ತಿ ಹೊಂದುವ ಅಥವಾ ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಈ ದೇಶದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಸಿಜೆಐ ಎನ್​.ವಿ ರಮಣ ಗುಡುಗಿದ್ದರು.

ಇದನ್ನು ಓದಿ : Helping Hands Kundapura : ನೆಲ್ಲಿಕಟ್ಟೆಯ ಗುಡಿಬೆಟ್ಟು ಅಜ್ಜಿಯ ಕನಸನ್ನು ನನಸು ಮಾಡಿದ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ

ಇದನ್ನೂ ಓದಿ : Sheldon Jackson: “ನನ್ನ ವಯಸ್ಸು 35, 75 ಅಲ್ಲ” ಅವಕಾಶ ಸಿಗದಿದ್ದಕ್ಕೆ ಬಿಸಿಸಿಐ ವಿರುದ್ಧ ಆಕ್ರೋಶ ಹೊರ ಹಾಕಿದ ಕ್ರಿಕೆಟರ್

CJI NV Ramana set to retire today, SC to live-stream proceedings for the first time in history

Comments are closed.