ರಾಯಚೂರು:Bharat Jodo Yatra : ದೇಶದಲ್ಲಿ ಮೋದಿ ಅಲೆ ಹೆಚ್ಚಾಗುತ್ತಿದ್ದಂತೆಯೇ ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಸಾಕಷ್ಟು ಕಳೆದುಕೊಂಡಿದೆ. ಹೀಗಾಗಿ ದೇಶದಲ್ಲಿ ಹೇಗಾದರೂ ಮಾಡಿ ತನ್ನ ಪಾರುಪತ್ಯವನ್ನು ಮತ್ತೊಮ್ಮೆ ಹುಟ್ಟು ಹಾಕಬೇಕು ಅಂತಾ ಕಾಂಗ್ರೆಸ್ ಪಕ್ಷವು ಇನ್ನಿಲ್ಲದ ಕಸರತ್ತನ್ನು ಆರಂಭಿಸಿದೆ. ದೇಶದ ಜನತೆಗೆ ಇನ್ನಷ್ಟು ಹತ್ತಿರವಾಗಬೇಕು , ಅವರ ಮನಸ್ಸನ್ನು ಮತ್ತೊಮ್ಮೆ ಗೆಲ್ಲಬೇಕು ಅಂತಾ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನ ಮಾಡ್ತಿದೆ. ಸದ್ಯ ರಾಯಚೂರಿನಲ್ಲಿರುವ ಭಾರತ್ ಜೋಡೋ ಪಾದಯಾತ್ರೆಯು ತೆಲಂಗಾಣವನ್ನು ಪ್ರವೇಶಿಸಲಿದೆ. ಈಗಾಗಲೇ 46 ದಿನಗಳ ಕಾಲ ಪಾದಯಾತ್ರೆ ಕೈಗೊಂಡವರು ರಾಹುಲ್ ಗಾಂಧಿ ಜೊತೆಯಲ್ಲಿ ಸಾವಿರಕ್ಕೂ ಅಧಿಕ ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದವರ ದಿನಚರಿ ಹೇಗಿರಬಹುದು ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿದ್ದಿರಬಹುದು. ಈ ಬಗ್ಗೆ ಸ್ವತಃ ಪಾದಯಾತ್ರೆಯಲ್ಲಿ ಭಾಗಿಯಾದ ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ಪಾದಯಾತ್ರಿಗಳು ನೀಡಿರುವ ಮಾಹಿತಿಯ ಪ್ರಕಾರ ಬೆಳಗ್ಗೆ ನಾಲ್ಕು ಮೂವತ್ತಕ್ಕೆ ಎದ್ದು ಸ್ನಾನ ಸೇರಿದಂತೆ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳಬೇಕು. ಇದಾಗಿ ಒಂದು ಗಂಟೆಯ ಬಳಿಕ ಬೆಳಗ್ಗಿನ ಉಪಹಾರ ಸೇವಿಸಿ ಸೇವಾದಳ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುತ್ತೆ. ರಾಹುಲ್ ಗಾಂಧಿ ಬೆಳಗ್ಗೆ ಆರು ಗಂಟೆಗೆ ಪಾದಯಾತ್ರೆಯನ್ನು ಆರಂಭಿಸುತ್ತಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ವಿಜೇಂದ್ರ ಸಿಂಗ್ ಮೆಹ್ಲಾವತ್, ಆರಂಭದಲ್ಲಿ ನಮಗೆ ಪಾದಯಾತ್ರೆ ಮಾಡುವುದು ತುಂಬಾನೇ ಕಷ್ಟ ಎನಿಸಿತ್ತು. ಆದರೆ ಈಗ ನಡೆದು ನಡೆದು ರೂಢಿ ಆಗಿದೆ. ಅತ್ಯಂತ ಉತ್ಸಾಹದಿಂದ ನಾವು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೇವೆ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ವಿಜೇಂದ್ರ ಸಿಂಗ್ ರಾಜಸ್ಥಾನ ಮೂಲದವರಾಗಿದ್ದಾರೆ.
ಅನೇಕರು ರಾಹುಲ್ ಗಾಂಧಿ ಬಗ್ಗೆ ತಪ್ಪಾದ ಅಭಿಪ್ರಾಯಗಳನ್ನು ಹುಟ್ಟು ಹಾಕ್ತಿದ್ದಾರೆ. ಅವರು ಭಾರತ್ ಯಾತ್ರಿಗಳ ಜೊತೆಯಲ್ಲಿ ನಿತ್ಯ ಸಂವಾದ ನಡೆಸುತ್ತಾರೆ, ನಮ್ಮೊಂದಿಗೆ ಭೋಜನ ಮಾಡುತ್ತಾರೆ. ತುಂಬಾ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾರೆ , ಆದರೂ ಅವರ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ವಿಜೇಂದ್ರ ಸಿಂಗ್ ಮೆಹ್ಲಾವತ್ ಹೇಳಿದ್ದಾರೆ.
ಇದನ್ನು ಓದಿ : Exclusive : ಟೀಮ್ ಇಂಡಿಯಾ ವಿಶ್ವಕಪ್ ಪಡೆಯಲ್ಲಿ ಮೂವರು ಕನ್ನಡಿಗರು, ಒಬ್ಬ ರಾಹುಲ್, ಇನ್ನೊಬ್ಬ ದ್ರಾವಿಡ್, ಮೂರನೆಯವರು ಯಾರು?
ಇದನ್ನೂ ಓದಿ : MCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ
Here is information about the daily routine of hikers participating in the Bharat Jodo Yatra