(Diwali Bonus):ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗೆ ದೀಪಾವಳಿ ಬಂಪರ್; ಮಾಸಿಕ 500 ರೂ.ಮೋಟಾರು ಭತ್ಯೆ ಘೋಷಣೆ

ಉತ್ತರ ಪ್ರದೇಶ: (Diwali Bonus): ಉತ್ತರ ಪ್ರದೇಶ ಸರ್ಕಾರವು ಅಲ್ಲಿನ ಪೊಲೀಸ್ ಸಿಬ್ಬಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಪೊಲೀಸ್ ಸಿಬ್ಬಂದಿಗೆ ಮಾಸಿಕ 500 ರೂ. ಮೋಟಾರು ಭತ್ಯೆಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಗೆ ಈ ಮಾಸಿಕ ಭತ್ಯೆ ಅನ್ವಯವಾಗುತ್ತದೆ.

ಈ ಬಗ್ಗೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಅವರು, ಈ ಹಿಂದೆ ಪೊಲೀಸ್ ಸಿಬ್ಬಂದಿಗೆ ಮಾಸಿಕ 200 ರೂ. ಸೈಕಲ್ ಭತ್ಯೆ ಸಿಗುತ್ತಿತ್ತು. ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರದಿಂದ ಪೊಲೀಸರಿಗೆ ನೀಡಲಾಗುವ 200 ರೂ.ಗಳ ಸೈಕಲ್ ಭತ್ಯೆಯನ್ನು ಮಾಸಿಕ 500 ರೂ.ಗಳಿಗೆ ಮೋಟಾರು ಭತ್ಯೆಯನ್ನಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಯನ್ನು ಇ-ಪಿಂಚಣಿ ಪೋರ್ಟಲ್‍ನೊಂದಿಗೆ ಸಂಪರ್ಕಿಸುತ್ತದೆ ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸರ್ಕಾರದ ಮಟ್ಟದಲ್ಲಿ ಅನುಮೋದಿಸಲಾದ 5 ಲಕ್ಷ ರೂ. ಮೊತ್ತದವರೆಗಿನ ವೈದ್ಯಕೀಯ ಬಿಲ್ ತೆರವುಗೊಳಿಸುತ್ತಾರೆ ಎಂದು ಸಿಎಂ ಆದಿತ್ಯನಾಥ್ ಮಾಹಿತಿ ನೀಡಿದರು. ಅಲ್ಲದೇ ಕಾನ್‍ಸ್ಟೇಬಲ್, ಹೆಡ್ ಕಾನ್‍ಸ್ಟೇಬಲ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‍ಸ್ಟೇಬಲ್ ಗಳ ಹೆಡ್ ಕಾನ್‍ಸ್ಟೇಬಲ್‍ಗಳಿಗೆ ವಾರ್ಷಿಕ 2 ಸಾವಿರ ರೂ. ದೂರವಾಣಿ (ಫೋನ್) ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.

ಇನ್ನು ಇದೇ ವೇಳೆ ಅತ್ಯಂತ ಕಠಿಣ ಸಮಯದಲ್ಲಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಪೊಲೀಸರ ಕಾರ್ಯವನ್ನು ಸಿಎಂ ಯೋಗಿ ಆದಿತ್ಯನಾಥ್ ಶ್ಲಾಘಿಸಿದರು. ಪೊಲೀಸರ ಗುಣಗಾನ ಮಾಡಿದ ಸಿಎಂ 2019ರಲ್ಲಿ ನಡೆದ ಲೋಕಸಭೆ ಚುನಾವಣೆ, ಕುಂಭಮೇಳದ ಸಮಯದಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಪ್ರಶಂಸಿದರು. ಅಲ್ಲದೇ ಇದೇ ವರ್ಷ ನಡೆದ ವಿಧಾನಸಭೆ ಚುನಾವಣೆ ಹಾಗೂ ಅದಕ್ಕೂ ಮೊದಲು ನಡೆದ ಪಂಚಾಯತ್ ಚುನಾವಣೆಗಳು ಶಾಂತಿಯುತವಾಗಿ ನಡೆಯುವಲ್ಲಿ ಸಹಕರಿಸಿದ ಪೊಲೀಸರ ಶ್ರಮವನ್ನು ಹೊಗಳಿದ ಯೋಗಿ ಆದಿತ್ಯನಾಥ್, ಕೋವಿಡ್ ಸಂದರ್ಭದಲ್ಲಿಯೂ ಪೊಲೀಸರ ಕಾರ್ಯ ಮಾನವೀಯತೆಯ ಸೇವೆಗೆ ಒಂದು ಉತ್ತಮ ಉದಾಹರಣೆ ಆಗಿದೆ ಎಂದರು.

ಇದನ್ನೂ ಓದಿ: KMF Recruitment 2022 : ಕೆಎಂಎಫ್ 487 ಡೆಪ್ಯೂಟಿ ಡೈರೆಕ್ಟರ್, ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ: Kushinagar : ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರನ್ನು ನಿಲ್ಲಿಸಿ ನಮಾಜ್ : ವಿಡಿಯೋ ವೈರಲ್

Diwali bonus: UP Govt Announces Monthly Motorcycle Allowance Of Rs. 500 For Police

Comments are closed.