Hijab ban Cancel : ಉಡುಪಿ ಸರ್ಕಾರಿ ಕಾಲೇಜನಿಂದ ಆರಂಭಿಸಿ ರಾಷ್ಟ್ರ ಮಟ್ಟದವರೆಗೆ ಸುದ್ದಿಯಾಗಿದ್ದ ಹಾಗೂ ನ್ಯಾಯಾಲಯದ ಆದೇಶದ ಬಳಿಕ ತಣ್ಣಗಾಗಿದ್ದ ಹಿಜಾಬ್ ವಿವಾದ ಈಗ ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯದಲ್ಲಿ ಹಿಜಾಬ್ ನಿಷೇಧ (Hijab ban ) ಹಿಂಪಡೆಯೋದಾಗಿ ಘೋಷಿಸುವ ಮೂಲಕ ಸಿಎಂ ಸಿದ್ಧರಾಮಯ್ಯ ಹೊಸತೊಂದು ವಿವಾದ ಹುಟ್ಟುಹಾಕಿದ್ದಾರೆ.
ತಮ್ಮ ತವರು ಮೈಸೂರು ಜಿಲ್ಲಾ ಪ್ರವಾಸದಲ್ಲಿರೋ ಸಿಎಂ ಸಿದ್ಧರಾಮಯ್ಯ ಹಿಜಾಬ್ ಹಿಂಪಡೆಯೋದಾಗಿ ಘೋಷಿಸಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಕಾವಲಂದೆ ಗ್ರಾಮದಲ್ಲಿ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಊಟ ಮತ್ತು ಉಡುಪು ಅವರವರ ಇಷ್ಟ. ಅದಕ್ಕೆ ನಾನ್ಯಾಕೆ ಅಡ್ಡಿ ಬರಲಿ ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ನೋ ಹಿಜಾಬ್. ಹಿಜಾಬ್ ಆದೇಶ ಹಿಂಪಡೆಯುತ್ತೇವೆ. ಎಲ್ಲರೂ ಹಿಜಾಬ್ ಹಾಕಿಕೊಂಡು ಹೋಗಬಹುದು. ಉಡುಪು ಮತ್ತು ಊಟ ನಿಮಗೆ ಸೇರಿದ್ದು, ನೀನು ಯಾವ್ ಡ್ರೆಸ್ ಹಾಕಿಕೊಳ್ಳೋತ್ತಿಯೋ ಹಾಕಿಕೋ, ಏನು ಊಟ ಮಾಡುತ್ತಿಯೋ ಮಾಡು. ನಿನ್ನ ಊಟ ನಿನ್ನ ಹಕ್ಕು ನನ್ನ ಊಟ ನನ್ನ ಹಕ್ಕು.ಮತಕ್ಕಾಗಿ ಇಂಥ ವಿಚಾರಗಳಲ್ಲಿ ರಾಜಕಾರಣ ಮಾಡುವುದು ತಪ್ಪು ಎಂದಿದ್ದಾರೆ.
ಇದನ್ನೂ ಓದಿ : LPG EKYC : ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ
ಮಾತ್ರವಲ್ಲ ಬಟ್ಟೆ,ಉಡುಪು, ಜಾತಿ ಆಧಾರದ ಮೇಲ್ ಜನರನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಹೀಗಾಗಿ ನಾನು ಹಿಜಾಬ್ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ. ನೀವು ನಮ್ಮೊಂದಿಗಿರಿ ಎಂದು ಸಿದ್ಧ ರಾಮಯ್ಯ ನೆರೆದವರಲ್ಲಿ ಮನವಿ ಮಾಡಿದ್ದಾರೆ. ಸಿದ್ಧರಾಮಯ್ಯನವರ ಹೇಳಿಕೆ ಕ್ಷಣಾರ್ಧ ದಲ್ಲಿ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಇದನ್ನೂ ಓದಿ : ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್ : ಆನ್ಲೈನ್, ಆಫ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ಆ ಮೂಲಕ ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಹೇರಿದ ನಿಷೇಧವನ್ನು ಹಿಂಪಡೆದಿದೆ. ಹಿಜಾಬ್ ಹಿಂಪಡೆಯುವ ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಆದೇಶ ರಾಜ್ಯದಲ್ಲಿ ಹೊಸತೊಂದು ವಿವಾದ ಹುಟ್ಟುಹಾಕಿದ್ದು, ಬಿಜೆಪಿ ಈ ಆದೇಶದ ವಿರುದ್ಧ ಉಗ್ರ ಹೋರಾಟ ಮಾಡುವ ನೀರಿಕ್ಷೆ ಇದೆ.

ಕಾಂಗ್ರೆಸ್ ನ ಮೂಲ ಆಧಾರವೇ ಅಲ್ಪಸಂಖ್ಯಾತ ಮತಗಳು. ಹೀಗಾಗಿ ಮತದಾರರನ್ನು ಓಲೈಸಲು ಸರ್ಕಾರ ಮುಂದಾಗಿದೆ ಎಂಬ ಮಾತು ಬಿಜೆಪಿ ವಲಯದಿಂದ ಕೇಳಿಬಂದಿದೆ. ಅಲ್ಲದೇ ಈಗಾಗಲೇ ಸಿಎಂ ಸಿದ್ಧರಾಮಯ್ಯನವರು ಬರ ಪರಿಹಾರ ಕೇಳಲು ಪ್ರವೈಟ್ ಜೆಟ್ ನಲ್ಲಿ ಹೋದ ವಿಚಾರಕ್ಕೆ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಕೊರೊನಾ ನಡುವೆ ಇಯರ್ ಎಂಡ್, ಕ್ರಿಸ್‌ಮಸ್ ರಜೆ: ಪ್ರವಾಸಿಗರಿಂದ್ಲೇ ಬೆಂಗಳೂರಿಗೆ ಸೋಂಕು ಉಲ್ಬಣಿಸುವ ಭೀತಿ
ಇದರ ಬೆನ್ನಲ್ಲೇ ಈಗ ಸಿದ್ಧರಾಮಯ್ಯ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ಕೈಗೆ ಹೊಸ ಅಸ್ತ್ರ ನೀಡಿದಂತಾಗಿದ್ದು ಹಿಜಾಬ್ ನಿಷೇಧ ಆದೇಶ ಹಿಂಪಡೆದರ ಬಗ್ಗೆ ಬಿಜೆಪಿ ಬೀದಿಗಿಳಿಯೋ ಸಾಧ್ಯತೆ ಇದೆ.
Hijab ban Cancel in Karnataka schools and colleges: Karnataka Chief Minister Siddaramaiah announcement