ದಿನಭವಿಷ್ಯ 23 ಡಿಸೆಂಬರ್‌ 2023 : ವೈಕುಂಠ ಏಕಾದಶಿ, ಸಿದ್ದಯೋಗ, ಶಿವಯೋಗದಿಂದ ಯಾವ ರಾಶಿಗೆ ಲಾಭ

Horoscope Today : ದಿನಭವಿಷ್ಯ 23  ಡಿಸೆಂಬರ್‌ 2023 ಶನಿವಾರ. ದ್ವಾದಶ ರಾಶಿಗಳ ಮೇಲೆ ಇಂದು ಭರಣಿ ನಕ್ಷತ್ರದ ಪ್ರಭಾವ ಇರುತ್ತದೆ. ವೈಕುಂಠ ಏಕಾದಶಿ (vaikunta ekadasi 2023)ಯಂದು ಹಲವು ರಾಶಿಗಳು ವಿಷ್ಣುವಿನ ಅನುಗ್ರಹಕ್ಕೆ ಪಾತ್ರವಾಗಲಿವೆ.

Horoscope Today : ದಿನಭವಿಷ್ಯ 23  ಡಿಸೆಂಬರ್‌ 2023 ಶನಿವಾರ. ದ್ವಾದಶ ರಾಶಿಗಳ ಮೇಲೆ ಇಂದು ಭರಣಿ ನಕ್ಷತ್ರದ ಪ್ರಭಾವ ಇರುತ್ತದೆ. ವೈಕುಂಠ ಏಕಾದಶಿ (vaikunta ekadasi 2023)ಯಂದು ಹಲವು ರಾಶಿಗಳು ವಿಷ್ಣುವಿನ ಅನುಗ್ರಹಕ್ಕೆ ಪಾತ್ರವಾಗಲಿವೆ. ಶಿವಯೋಗ, ಸಿದ್ದಯೋಗ ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಇಂದಿನ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವ್ಯವಹಾರದ ಹಿನ್ನೆಲೆಯಲ್ಲಿ ದೂರ ಪ್ರಯಾಣ. ಒಡಹುಟ್ಟಿದವರ ಜೊತೆಗೆ ದೂರ ಪ್ರಯಾಣ. ಕುಟುಂಬದಲ್ಲಿ ಮಕ್ಕಳು ನಿಮ್ಮ ಮುಂದೆ ಬೇಡಿಕೆ ಇಡಲಿದ್ದಾರೆ. ಆತುರದ ನಿರ್ಧಾರ ಕೈಗೊಳ್ಳಬೇಡಿ. ಕೆಲವು ಸಮಸ್ಯೆಗಳು ಉದ್ಬವಿಸುವ ಸಾಧ್ಯತೆಯಿದೆ.

ವೃಷಭರಾಶಿ ದಿನಭವಿಷ್ಯ
ಆರ್ಥಿಕವಾಗಿ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರ ಜೊತೆಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸದ ನಿಮಿತ್ತ ದೂರ ಪ್ರಯಾಣ ಸಾಧ್ಯತೆ. ವ್ಯವಹಾರದ ಕಡೆಗೆ ಹೆಚ್ಚಿನ ಗಮನ ಹರಿಸಿ.

ಮಿಥುನರಾಶಿ ದಿನಭವಿಷ್ಯ
ಉದ್ಯೋಗದಲ್ಲಿ ಭಡ್ತಿ ದೊರೆಯುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಆಸಕ್ತಿ ಮೂಡಲಿದೆ. ಆಸ್ತಿ ಸಂಬಂಧಿಸಿದ ವ್ಯವಹಾರಗಳ ಬಗ್ಗೆ ಹಿರಿಯ ಸದಸ್ಯರ ಜೊತೆಗೆ ಮಾತುಕತೆ ನಡೆಸುವಿರಿ. ಹಿರಿಯರ ಸಲಹೆಯನ್ನು ಪಾಲಿಸಿ.

ಕರ್ಕಾಟಕರಾಶಿ ದಿನಭವಿಷ್ಯ
ವಿರೋಧಿಗಳಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಖರ್ಚು ವೆಚ್ಚಗಳ ಮೇಲೆ ನಿಯಂತ್ರಣ ಹೇರಿ. ಆದಾಯಕ್ಕಿಂತ ಅಧಿಕ ಖರ್ಚು ಮಾಡಬೇಡಿ. ಪಾಲುದಾರರ ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಎದುರಿಸುವಿರಿ. ದೂರ ಪ್ರಯಾಣವು ನಿಮಗೆ ಲಾಭದಾಯಕವಾಗಿ ಇರಲಿದೆ.

ಸಿಂಹರಾಶಿ ದಿನಭವಿಷ್ಯ
ಪಡೆದುಕೊಂಡ ಸಾಲ ಮರುಪಾವತಿ ಮಾಡುವಲ್ಲಿ ಯಶಸ್ವಿ ಆಗುತ್ತೀರಿ. ಹಣಕಾಸಿಗೆ ಸಂಬಂಧಿಸಿದಂತೆ ಯಾರಿಂದಲೂ ಸುಲಭವಾಗಿ ಸಹಾಯವನ್ನು ಪಡೆಯಲಿದ್ದೀರಿ. ಯಾವುದೇ ಕಾರಣಕ್ಕೂ ವಿರೋಧಿಗಳ ಮಾತಿನಿಂದ ಪ್ರಭಾವಿತರಾಗಬೇಡಿ. ವ್ಯಾಪಾರಿಗಳಿಗೆ ಹೊಸ ಆದಾಯದ ಮೂಗಳು ಗೋಚರಿಸಲಿದೆ.

ಇದನ್ನೂ ಓದಿ : ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ವಾಪಾಸ್‌ : ಸಿಎಂ ಸಿದ್ದರಾಮಯ್ಯ ಘೋಷಣೆ

ಕನ್ಯಾರಾಶಿ ದಿನಭವಿಷ್ಯ
ಶತ್ರುಗಳು ಇಂದು ಬಲಶಾಲಿ ಆಗಿರುತ್ತಾರೆ ಅನ್ನೋದು ನೆನಪಿನಲ್ಲಿರಲಿ. ಕೌಟುಂಬಿಕ ವ್ಯವಹಾರ ನಡೆಸುವವರು ತಂದೆಯ ಸಹಕಾರವನ್ನು ಪಡೆದುಕೊಳ್ಳಿ. ಎಚ್ಚರ ತಪ್ಪಿದ್ರೆ ಆರ್ಥಿಕ ನಷ್ಟಕ್ಕೆ ಕಾರಣವಾಗಲಿದೆ. ಯಾವುದೇ ಒಪ್ಪಂದವನ್ನು ಇಂದೇ ಕೊನೆಗಾಣಿಸಬೇಡಿ.

ತುಲಾರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯಕ್ಕೆ ತೆರಳುವ ಸಾಧ್ಯತೆಯಿದೆ. ಧಾರ್ಮಿಕ ಚಟುವಟಿಕೆಯಲ್ಲಿನ ಹೂಡಿಕೆ ಭವಿಷ್ಯದಲ್ಲಿ ಲಾಭವನ್ನು ತಂದುಕೊಡಲಿದೆ. ಪೂರ್ವಜರ ಆಸ್ತಿಯಲ್ಲಿ ವಿವಾದ ಇಂದು ಬಗೆ ಹರಿಯಲಿದೆ. ದೂರ ಪ್ರಯಾಣದಿಂದ ಅಧಿಕ ಲಾಭ.

Horoscope Today 23 December 2023 Zodiac Sign vaikunta ekadasi 2023
Image Credit to Original Source

ವೃಶ್ಚಿಕರಾಶಿ ದಿನಭವಿಷ್ಯ
ವಿದೇಶಕ್ಕೆ ತೆರಳುವ ಅವಕಾಶ ನಿಮ್ಮದಾಗಲಿದೆ. ಅನಿರೀಕ್ಷಿತವಾಗಿ ದೊಡ್ಡ ಆರ್ಥಿಕ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮ ಪ್ರಗತಿಯನ್ನು ಕಂಡು ಶತ್ರುಗಳು ಹೆದರುತ್ತಾರೆ.. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಪಡೆಯುವುದು ತೀರಾ ಮುಖ್ಯ.

ಇದನ್ನೂ ಓದಿ: ಮಹಿಳೆಯರ ಹೆಲ್ಪ್ ಡೆಸ್ಕ್ ರದ್ದು : 250 ಆಪ್ತ ಸಮಾಲೋಚಕಿಯರಿಗೆ ಸಂಕಷ್ಟ

ಧನಸ್ಸುರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅತ್ಯಗತ್ಯ. ಸಂಗಾತಿಯ ಜೊತೆಗೆ ಇಂದು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ಶಿಕ್ಷಣದ ವಿಚಾರದಲ್ಲಿ ಆಸಕ್ತಿ ಮೂಡಲಿದೆ. ವಿದೇಶಿ ಪ್ರಯಾಣದ ಅವಕಾಶವೂ ಇದೆ.

ಮಕರರಾಶಿ ದಿನಭವಿಷ್ಯ
ತಂದೆಯೊಂದಿಗೆ ಪ್ರಮುಖ ವಿಚಾರವನ್ನು ಹಂಚಿಕೊಳ್ಳುವಿರಿ. ಮಾನಸಿಕ ಸಮಸ್ಯೆಗಳಿಗೆ ಇಂದು ಮುಕ್ತಿ ದೊರೆಯಲಿದೆ. ಉದ್ಯೋಗಿಗಳು ಕಚೇರಿಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತೀರಿ. ಹಣವನ್ನು ಹೂಡಿಕೆ ಮಾಡಿದ್ರೆ ಲಾಭಕ್ಕಾಗಿ ಕಾಯಬೇಕಾಗುತ್ತದೆ.

ಕುಂಭರಾಶಿ ದಿನಭವಿಷ್ಯ
ತಾಯಿಯ ಮನೆಯ ಕಡೆಯಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಶತ್ರುಗಳು ನಿಮಗೆ ಇಂದು ತೊಂದರೆಯನ್ನು ಕೊಡುತ್ತಾರೆ. ಹೆತ್ತವರ ಸೇವೆ ಮಾಡುವುದರಿಂದ ಹಲವು ರೀತಿಯಲ್ಲಿ ಅನುಕೂಲಗಳಿವೆ.

ಇದನ್ನೂ ಓದಿ : ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್‌ : ಆನ್ಲೈನ್‌, ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

ಮೀನರಾಶಿ ದಿನಭವಿಷ್ಯ
ಮಕ್ಕಳ ಸಮಸ್ಯೆಗೆ ಕುಟುಂಬದ ಸದಸ್ಯರ ಸಹಕಾರ ಪಡೆಯುವಿರಿ. ಬಾಲ್ಯದ ಕ್ಷಣಗಳು ನಿಮ್ಮನ್ನು ಕಾಡಲಿದೆ. ಅವಿವಾಹಿತರಿಗೆ ಇರುವ ವೈವಾಹಿಕ ಅಡೆತಡೆಗಳು ನಿವಾರಣೆ ಆಗಲಿದೆ. ಸ್ನೇಹಿತರು ನಿಮಗೆ ಇಂದು ಆರ್ಥಿಕವಾಗಿ ಸಹಾಯವನ್ನು ಮಾಡಲಿದ್ದಾರೆ. ದೂರದ ಬಂಧುಗಳ ಭೇಟಿಯಿಂದ ಅನುಕೂಲ.

Horoscope Today 23 December 2023 Zodiac Sign vaikunta ekadasi 2023

Comments are closed.