Hijab Controversy History : ಉಡುಪಿಯಿಂದ ಹೈಕೋರ್ಟ್ ವರೆಗೆ: ಇಲ್ಲಿದೆ ಹಿಜಾಬ್ ವಿವಾದದ ವಿವರ

ಬೆಂಗಳೂರು : ( Hijab Controversy History) ಕೃಷ್ಣ ನಗರೀ ಉಡುಪಿಯಲ್ಲಿ ಆರು ವಿದ್ಯಾರ್ಥಿನಿಯರು ಆರಂಭಿಸಿದ ಹಿಜಾಬ್ ವಿವಾದ ರಾಜ್ಯದಾದ್ಯಂತ ವಿಸ್ತರಿಸಿ ಶಾಲಾ ಕಾಲೇಜುಗಳಿಗೆ ಪೊಲೀಸರು, ರಾಜಕಾರಣಿಗಳು, ಕಾನೂನು ಎಂಟ್ರಿಯಾಗುವಂತೆ ಮಾಡಿತು. ಮಾತ್ರವಲ್ಲ ಹಿಜಾಬ್ ಗೆ ಕೇಸರಿ ಶಾಲು ಉತ್ತರ ಎಂಬ ಅಲೆಯೊಂದು ಸೃಷ್ಟಿಯಾಗಿ ವಿವಾದ ಮತ್ತಷ್ಟು ಉಲ್ಬಣಿಸಿತು. ಕಾಲೇಜಿನಿಂದ ಹೈಕೋರ್ಟ್ ಅಂಗಳಕ್ಕೆ ತಲುಪಿದ ಹಿಜಾಬ್ ವಿವಾದ ನಿಧಾನಕ್ಕೆ ರಾಜಕೀಯ ಸ್ವರೂಪವನ್ನು ಪಡೆದು ಕೊಂಡು ಪಕ್ಷಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು.

ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ (Hijab Controversy History) ಸದ್ಯ ಹೈಕೋರ್ಟ್ ತೀರ್ಪಿನೊಂದಿಗೆ ಕೊನೆಯಾಗುವ ಭರವಸೆ ಮೂಡಿದೆ. ಹಾಗಾದ್ರೇ ಇದುವರೆಗೂ ಹಿಜಾಬ್ ಪ್ರಕರಣದಲ್ಲಿ ಏನೆಲ್ಲ ಬೆಳವಣಿಗೆಗಳಾಯ್ತು ಎಂಬುದನ್ನು ಗಮನಿಸೋದಾದರೇ,

  • ಹಿಜಾಬ್ ಧರಿಸಲು ಅವಕಾಶ ಕೋರಿ ಜ.31ಕ್ಕೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಯ್ತು.
  • ಉಡುಪಿ ಮೂಲದ ವಿಧ್ಯಾರ್ಥಿನಿಯರಿಂದ ರಿಟ್ ಅರ್ಜಿ
  • ಫೆ.3 ರಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಅರ್ಜಿ ವಿಚಾರಣೆ
  • ಮೂರು ದಿನಗಳ ಕಾಲ ಏಕಸದಸ್ಯ ಪೀಠದಿಂದ ವಿಚಾರಣೆ
  • ಬಳಿಕೆ ಫೆ. 9ರಂದು ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ
  • ಫೆ,10 ರಂದು ವಿಸ್ತೃತ ಪೀಠದಿಂದ ಯಾವುದೇ ಧಾರ್ಮಿಕ ಗುರುತು ಧರಿಸಿ ಶಾಲೆ, ಕಾಲೇಜುಗಳಿಗೆ ತೆರಳದಂತೆ ಮೌಖಿಕ ಆದೇಶ
  • ಫೆ.11 ರಂದು ಧಾರ್ಮಿಕ ಗುರುತು ಧರಿಸದಂತೆ ಹೈಕೋರ್ಟ್ ನಿಂದ ಮಧ್ಯಂತರ ಆದೇಶ
  • ನಂತರ 11 ದಿನಗಳ ಕಾಲ ಅರ್ಜಿದಾರರು, ಮಧ್ಯಂತರ ಅರ್ಜಿದಾರರ ವಾದ ಮಂಡನೆ
  • ಸರ್ಕಾರದ ಪರ ಅಡ್ವೊಕೇಟ್ ಜನರಲ್ ರಿಂದ ಸುಧೀರ್ಘ ವಾದ
  • ಅರ್ಜಿದಾರರ ಪರ ದೇವದತ್ ಕಾಮತ್, ರವಿವರ್ಮ ಕುಮಾರ್ ಸೇರಿ ಹಿರಿಯ ವಕೀಲರ ವಾದ
  • ಸರ್ಕಾರದ ಆದೇಶ, ಸಿಡಿಸಿ ನಿಯಮಾವಳಿಗಳ ಬಗ್ಗೆ ವಾದ ಮಂಡನೆ
  • ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿ ಆದೇಶ
  • ಫೆ.25 ರಂದು ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್
  • ಮಾರ್ಚ್ 15ಕ್ಕೆ ಹಿಜಬ್ ವಿವಾದದ ಅಂತಿಮ ಆದೇಶ ಬರೋದು ಬಹುತೇಕ ಖಚಿತವಾಗಿದ್ದು,

ಬೆಳಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರನ್ನು ಒಳಗೊಂಡ ವಿಸ್ತ್ರತ ಪೀಠದಿಂದ ಅಂತಿಮ ಆದೇಶ ಹೊರಬೀಳಲಿದೆ. ವಿವಾದ (Hijab Controversy History) ಕರ್ನಾಟಕದಲ್ಲಿ ಆರಂಭ ಗೊಂಡಿದ್ದರೂ ದೇಶದ ಗಮನ ಸೆಳೆದಿದೆ. ಹೀಗಾಗಿ ನಾಳೆ ದೇಶದ ಚಿತ್ತ ಕರ್ನಾಟಕದ ಹೈಕೋರ್ಟ್ ನತ್ತ ನೆಟ್ಟಿದ್ದು, ಹೈಕೋರ್ಟ್ ತೀರ್ಪು ಮಹತ್ವದ ಮೈಲಿಗಲ್ಲಾಗುವ ಭರವಸೆ ಮೂಡಿಸಿದೆ.

ಇದನ್ನೂ ಓದಿ : ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ : ಬೆಂಗಳೂರಲ್ಲಿ 1 ವಾರ ನಿಷೇದಾಜ್ಞೆ, ರಾಜ್ಯದಾದ್ಯಂತ ಹೈಅಲರ್ಟ್

ಇದನ್ನೂ ಓದಿ : ಹಿಜಾಬ್ ತೀರ್ಪು ಹಿನ್ನೆಲೆ : ಮಾರ್ಚ್ 15 ರಂದು ಉಡುಪಿ, ದ.ಕ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

( hijab controversy History Udupi to Karnataka High Court )

Comments are closed.