ಹಿಜಾಬ್‌, ಹಲಾಲ್‌ ಬೆನ್ನಲ್ಲೇ ಧರ್ಮದಂಗಲ್: ಜಾತ್ರೆಗಳಲ್ಲಿ ಹಿಂದೂಗಳಿಷ್ಟೇ ವ್ಯಾಪಾರಕ್ಕೆ ಅವಕಾಶ : ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಬೆಂಗಳೂರು : ಕಳೆದ ಕೆಲವು ತಿಂಗಳಿನಿಂದ ತಣ್ಣಗಾಗಿದ್ದ ಧರ್ಮದಂಗಲ್ (Dharma Dangal) ಇದೀಗ ಮತ್ತೆ ಶುರುವಾಗಿದೆ. ಜಾತ್ರೆಗಳು ಆರಂಭಗೊಳ್ಳುತ್ತಿದ್ದಂತೆಯೇ ಹಿಂದೂ ಜನಜಾಗೃತಿ ಸಮಿತಿ ಜಾತ್ರೆಯಲ್ಲಿ ಹಿಂದೂಗಳಿಗಷ್ಟೇ ಅವಕಾಶವನ್ನು ನೀಡುವಂತೆ ಆಗ್ರಹಿಸಿದೆ. ಕಡಲೆಕಾಯಿ ಪರಿಷೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನು ನೀಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ (Hindu Jana Jagruti Samiti demands) ಅಧ್ಯಕ್ಷ ಮೋಹನ್ ಗೌಡ ಆರೋಪಿಸಿದ್ದಾರೆ.

ರಾಜ್ಯದಾದ್ಯಂತ ಕೆಲವೇ ದಿನಗಳಲ್ಲಿ ಜಾತ್ರೆಗಳು ಆರಂಭವಾಗಲಿವೆ. ಹಿಂದೂ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರವೇ ವ್ಯಾಪಾರಕ್ಕೆ ಅವಕಾಶವನ್ನು ನೀಡಬೇಕು. ಆದರೆ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನು ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಅವರು ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸರಕಾರಕ್ಕೆ ಮನವಿಯನ್ನು ಮಾಡಿದ್ದಾರೆ.

ಇದನ್ನೂ ಓದಿ : Voter Id Case: ವೋಟರ್‌ ಐಡಿ ಅಕ್ರಮ ಪ್ರಕರಣ : ಚಿಲುಮೆ ಸಂಸ್ಥೆಯ ಇಬ್ಬರು ಅರೆಸ್ಟ್, ಅಕ್ರಮದಲ್ಲಿ ಶಾಸಕರು -ಸಚಿವರ ಹೆಸರು

ಹಿಜಾಬ್ ವಿವಾದದ ಬೆನ್ನಲ್ಲೇ ರಾಜ್ಯದಲ್ಲಿ ಹಲಾಲ್ ವಿವಾದ ಏರ್ಪಟ್ಟಿತ್ತು. ನಂತರದಲ್ಲಿ ಹಿಂದೂ ಧರ್ಮೀಯರ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆಯಲ್ಲಿ ಹಿಂದೂಯೇತರರಿಗೆ ಅವಕಾಶ ನೀಡಬಾರದು ಎಂದು ಕಳೆದ ವರ್ಷವೂ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೇ ಬಹುತೇಕ ದೇವಾಲಯಗಳಲ್ಲಿಯೂ ಅನ್ಯಧರ್ಮೀಯರ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿತ್ತು. ಸ್ವಲ್ಪ ಸಮಯದ ನಂತರ ವಿವಾದ ತಣ್ಣಗಾಗಿತ್ತು. ಆದ್ರೀಗ ಮತ್ತೆ ಧರ್ಮದಂಗಲ್ ಶುರುವಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಾಗಿರುವ ಶಿರಸಿಯ ಮಾರಿಕಾಂಬಾ ದೇವಸ್ಥಾನ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಿತ್ತು.ಅರೆಬರೆ ಬಟ್ಟೆಯನ್ನು ಧರಿಸಿ ದೇವಸ್ಥಾನಗಳ ಪ್ರವೇಶಕ್ಕೆ ಅವಕಾಶವನ್ನು ಭಕ್ತರಿಗೆ ನೀಡಬಾರದು ಎಂದು ಆಗ್ರಹಿಸಿತ್ತು.

English news Click here

ಇದನ್ನೂ ಓದಿ : ಧರ್ಮಸ್ಥಳ ಬಳಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, 7 ಮಂದಿ ಗಂಭೀರ

ಇದನ್ನೂ ಓದಿ : ಮಾದಕ ವ್ಯಸನ, ಅನೈತಿಕ ಸಂಬಂಧ : ಪತ್ನಿಯನ್ನೇ ಕೊಲೆಗೈದು ದೇಹವನ್ನು ತುಂಡರಿಸಿದ ಪತಿ

Hijab, Halal after Dharma Dangal Only Hindus allowed to do business in festivals Hindu Jana Jagruti Samiti demands

Comments are closed.