Hijab Judgement ವಿರುದ್ಧ ಸುಪ್ರೀಂ ಮೊರೆ ಹೋಗಲು ಚಿಂತನೆ: ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ

ಹಿಜಾಬ್ (Hijab) ವಿಚಾರದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು ಅದರ ಬಗ್ಗೆ ಇಂದು ಹೈ ಕೋರ್ಟ್‌ ತೀರ್ಪು(Hijab Judgement) ನೀಡಿದೆ. ಈ ತೀರ್ಪಿನ ಕುರಿತಂತೆ ಧರ್ಮದ ಮುಖಂಡರ ಜತೆ ಚರ್ಚೆ ನಡೆಯಲಿದೆ. ಎಲ್ಲರೂ ಶಾಂತರೀತಿಯಲ್ಲಿ ಇರುವಂತೆ ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ ಕೋರಿಕೊಂಡಿದ್ದಾರೆ. ಹಿಜಾಬ್‌ ವಿಚಾರದಲ್ಲಿ ಹೈ ಕೋರ್ಟ್ ತೀರ್ಪು ನೀಡಿದ್ದು, ಆ ಬಗ್ಗೆ ಸುಪ್ರೀಂ ಮೊರೆ ಹೋಗಲು ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಈ ವಿಚಾರದಂತೆ ಶಾಂತಿ ಸೌಹಾರ್ದಯುತವಾಗಿ ವರ್ತನೆ ಮಾಡುವಂತೆ ಅವರು ಎಲ್ಲರಿಗೂ ಕೋರಿಕೊಂಡರು.

ಹೈಕೋರ್ಟ್ ತೀರ್ಪಿನ ನಂತರ ನಾವು ಕಾನೂನಾತ್ಮಕವಾಗಿ ನಮ್ಮ ಹಕ್ಕನ್ನು ಪಡೆದು ಕೊಳ್ಳುತ್ತೇವೆ ಎಂದು ಹೇಳಿದರು. ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆ ಅನ್ನುವುದು ಗೊತ್ತಿಲ್ಲ. ಮೂರು ಮಂದಿಯ ಜಡ್ಜ್ ನಲ್ಲಿ ಒಬ್ಬರು ಮುಸ್ಲಿಂ ಜಡ್ಜ್ ಕೂಡ ಇದ್ದರು. ಕುರಾನ್ ನಲ್ಲಿ ಹಿಜಾಬ್ ಮಹಿಳೆಯರಿಗೆ ಕಡ್ಡಾಯ ಎಂದು ಸ್ಪಷ್ಟವಾಗಿ ತಿಳಿಸಿದೆ, ಆದರೆ ಕುರಾನ್ ನ ಆದೇಶ ಕಡ್ಡಾಯವಲ್ಲ ಎಂದು ಹೇಳಿದ್ದು ಎಷ್ಟು ಸರಿ ಅನ್ನುವುದೇ ಪ್ರಶ್ನೆಯಾಗಿದೆ.
ಹಿಜಾಬ್‌ ಇಸ್ಲಾಂಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳಿದ್ದು ಸರಿಯಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಧ್ಯಮಗಳಿಗೂ ಕಿವಿ ಮಾತು ಹೇಳಿದ ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ ಕೋರ್ಟ್ ತೀರ್ಪಿನ ಮಾತನ್ನು ಮಾತ್ರ ಪ್ರಸಾರ ಮಾಡುವಂತೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: Hijab Karnataka : ಹೈಕೋರ್ಟ್‌ ಐತಿಹಾಸಿಕ ತೀರ್ಪು, ಶಾಲೆಗಳಲ್ಲಿ ಹಿಜಾಬ್‌ ನಿಷೇಧ : ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ

ಹಿಜಾಬ್‌ ತೀರ್ಪಿಗೆ ಸಿಎಂ ಬೊಮ್ಮಾಯಿ ಅವರ ಪ್ರತಿಕ್ರಿಯೆ:
ಹಿಜಾಬ್‌ ತೀರ್ಪಿನ ಹಿನ್ನೆಲೆ ಸಿಎಂ ಬೊಮ್ಮಾಯಿ ತಮ್ಮ ಹೇಳಿಕೆ ನೀಡಿದರು. ಸಮವಸ್ತ್ರದ ಕುರಿತು ನ್ಯಾಯಾಲಯ ಒಳ್ಳೆಯ ತೀರ್ಪು ನೀಡಿದೆ. ಇದು ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಪ್ರಶ್ನೆಯಾಗಿದೆ. ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದು ಯಾವುದೂ ಇಲ್ಲ. ಎಲ್ಲರೂ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು.
ಎಲ್ಲರೂ ಈ ತೀರ್ಪಿಗೆ ಸಹಕಾರ ಕೊಟ್ಟು ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಅವರು ಪ್ರತಿಕ್ರಿಯಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ಈ ತೀರ್ಪಿನ ಅನ್ವಯ ಶಿಕ್ಷಣ ಕೂಡಲು ಎಲ್ಲರು ಸಹಕಾರ ನೀಡಬೇಕು. ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು ಮತ್ತು ತರಗತಿಗಳನ್ನು ಬಹಿಷ್ಕಾರ ಮಾಡದೆ, ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಟ್ಟು ನಿಟ್ಟಾಗಿ ಜಾರಿ ಮಾಡಿದ್ದೇವೆ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಗೃಹ ಇಲಾಖೆಯಿಂದ ತಕ್ಕ ಪಾಠ ಆಗಲಿದೆ ಎಂದು ಕಾನೂನು ಕದಡುವವರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆಯನ್ನು ನೀಡಿದರು.

ಶಿಕ್ಷಣ ಸಚಿವ ಬಿಸಿ ನಾಗೇಶ್‌ ಅವರ ಪ್ರತಿಕ್ರಿಯೆ:
ಹಿಜಾಬ್ ನಿಷೇಧಿಸಿ ಹೈ ಕೋರ್ಟ್ ನೀಡಿದ ತೀರ್ಪು ಹಿನ್ನೆಲೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಇದೊಂದು ಐತಿಹಾಸಿಕ ತೀರ್ಪು ಎಂದು ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಅವರು, ಇದೊಂದು ಐತಿಹಾಸಿಕ ತೀರ್ಪು ಈ ನೆಲದ ಕಾನೂನೇ ಅಂತಿಮ ಎಂದು ಹೇಳಿದರು.

ವಿಜಯೋತ್ಸವ, ಸಂಭ್ರಮಾಚರಣೆ ಮಾಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ ಬಿಜೆಪಿ:

ಹಿಜಾಬ್ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಈ ವಿಚಾರವಾಗಿ ರಾಜ್ಯದ ಜನತೆ ಹಾಗು ತನ್ನ ಕಾರ್ಯಕರ್ತರಲ್ಲಿ ಬಿಜೆಪಿ ಪಕ್ಷ ಕೆಲವು ಮನವಿಯನ್ನು ಮಾಡಿದೆ.

ಹಿಜಾಬ್ ತೀರ್ಪು ಕುರಿತು ಯಾವುದೇ ಪ್ರತಿಭಟನೆಯನ್ನು ಮಾಡಬಾರದು. ಜೊತೆಗೆ ಪ್ರತಿಕ್ರಿಯಾತ್ಮಕ ಪತ್ರಿಕೆ ಹೇಳಿಕೆಗಳನ್ನು ನೀಡಬೇಡಿ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದೆ

ಸಾಕಷ್ಟು ವಿವಾದವನ್ನು ಹುಟ್ಟುಹಾಕಿದ್ದ ಹಿಜಾಬ್ ಕುರಿತು ಎಲ್ಲವನ್ನು ಕೂಲಂಕುಷವಾಗಿ ಗಮನಿಸಿ ಹೈಕೋರ್ಟ್ ತೀರ್ಪು ನೀಡಿದ್ದು ಎಲ್ಲರು ನ್ಯಾಯಾಲಯದ ಆದೇಶವನ್ನು ಶಾಂತವಾಗಿ ಸ್ವೀಕರಿಸಬೇಕು ಎಂದು ಮನವಿ ಮಾಡಿದೆ.

‘ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಪ್ರಕಟವಾಗಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲ ಕಾರ್ಯಕರ್ತರು ಅತ್ಯಂತ ಸಮಚಿತ್ತದಿಂದ ಸ್ವೀಕರಿಸಬೇಕು. ಯಾವುದೇ ಅನಗತ್ಯ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ವಿಜಯೋತ್ಸವ, ಮೆರವಣಿಗೆ, ಮಾಡಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Hijab Controversy History : ಉಡುಪಿಯಿಂದ ಹೈಕೋರ್ಟ್ ವರೆಗೆ: ಇಲ್ಲಿದೆ ಹಿಜಾಬ್ ವಿವಾದದ ವಿವರ

(Hijab opinion After the High Court Decision Saadi CM Education Minister Opinion And BJP)

Comments are closed.