Apps For Farmers ಕೃಷಿ ಸಮಸ್ಯೆ ನಿವಾರಿಸುವ ಮಾಂತ್ರಿಕ ಕೈಪಿಡಿ

ಭಾರತ ಈಗಲೂ ಸಹ ವಾಣಿಜ್ಯದ ದೃಷ್ಟಿಯಿಂದ ಅತಿ ಹೆಚ್ಚು ಕೃಷಿಯನ್ನೇ(Agriculture) ಅವಲಂಬಿಸಿದೆ. ಆದ್ದರಿಂದ ತಂತ್ರಜ್ಞಾನದ(Apps For Farmers) ಪ್ರಗತಿಯು ಕೃಷಿಕರಿಗೆ ನೆರವಾಗುವಂತೆ ನಿಯೋಜಿಸಿ ಉತ್ಪಾದನೆ ಹೆಚ್ಚಿಸುವುದು ಮುಖ್ಯವಾಗಿದೆ. ಸರ್ಕಾರದ ಡಿಜಿಟಲ್‌ ಮಿಷನ್‌ ಹಲವು ಬಗೆಯ ಎಂಡ್ರಾಯ್ಡ್‌ ಆಪ್‌ಗಳನ್ನು ಲಾಂಚ್‌ ಮಾಡಿದೆ. ಇದು ತಳಹಂತದ ಕೃಷಿಕರಿಗೆ ಕೃಷಿ ಪದ್ಧತಿಯ ಮಾಹಿತಿ, ಪಾಲಸೀಗಳು, ಮತ್ತು ತಾಂತ್ರಿಕತೆಯ ಬಗ್ಗೆ ತಿಳಿಪಡಿಸುವುದಾಗಿದೆ. ಈ ಎಂಡ್ರಾಯ್ಡ್‌ ಆಪ್‌ಗಳ ಉದ್ದೇಶ ಇತ್ತೀಚಿನ ಕೃಷಿ ಕ್ಷೇತ್ರದಲ್ಲಾದ ಬದಲಾವಣೆಗಳು, ಉತ್ಪಾದನೆ ಹೆಚ್ಚಿಸಬಲ್ಲ ಹೊಸ ಕೃಷಿ ಸಲಕರಣೆಗಳ ತಾಂತ್ರಿಕತೆ ಮತ್ತು ಪದ್ಧತಿಗಳಂತಹ ಅವಶ್ಯಕ ಮಾಹಿತಿ ಒದಗಿಸುವುದಾಗಿದೆ. ರೈತರಿಗೆ ನೆರವಾಗುವ ಅಂತಹ 7 ಎಂಡ್ರಾಯ್ಡ್‌ ಆಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಅಥವಾ ಕೃಷಿಕರಿಗೆಂದೇ ಇರುವ ಸರ್ಕಾರದ ವೆಬ್‌ಸೈಟ್‌ mkisan.gov.inಗೆ ಭೇಟಿ ಕೊಡಬಹುದು ಕೃಷಿಕರಿಗೆ ನೆರವಾಗಬಲ್ಲ ಆಪ್‌ಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೀರಾ? ಹಾಗಾದರೆ ಇದನ್ನು ಓದಿ.

ಇದನ್ನೂ ಓದಿ: Agrifi App Farmers Loan : ಕೃಷಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಿದೆ ‘ಅಗ್ರಿ ಫೈ’ ಆ್ಯಪ್; ಸಾಲ ಪಡೆಯಲು ಏನು ಮಾಡಬೇಕು?

ಕೃಷಿಕರಿಗೆ ನೆರವಾಗಬಲ್ಲ ಎಂಡ್ರಾಯ್ಡ್‌ ಆಪ್‌ಗಳು:

  1. ಕಿಸಾನ್‌ ಸುವಿಧಾ:
    ಹೆಸರೇ ಸೂಚಿಸುವಂತೆ ಇದು ಕೃಷಿಕರಿಗೆ ನೆರವಾಗುವ ಆಪ್‌ ಆಗಿದೆ. ಇದರಲ್ಲಿ ಕೃಷಿಯ ಇತ್ತೀಚಿನ ಮಾಹಿತಿಗಳು, ಹವಾಮಾನ, ಮಾರುಕಟ್ಟೆ, ಡೀಲರ್‌ಗಳು, ದರ ಹೀಗೆ ಮುಂತಾದ ವಿಷಯಗಳು ಇದರಲ್ಲಿರುತ್ತದೆ. ಈ ಆಪ್‌ ಅನ್ನು ಕೃಷಿ ಮತ್ತು ಸಹಕಾರ ಇಲಾಖೆ ಮತ್ತು ಕೃಷಿ ಮತ್ತು ರೈತರ ಸಚಿವಾಲಯಗಳು ಸೇರೆ ನಿರ್ಮಿಸಿವೆ.
  2. ಪೂಸಾ ಕೃಷಿ :
    ಈ ಆಪ್‌ನ ಗುರಿ ರೈತರಿಗೆ ಅವರ ಕೃಷಿ ಭೂಮಿ ಸಂಬಂದಿತ ಪ್ರಶ್ನೆಗಳಿಗೆ ಸರಳ ಉತ್ತರಗಳನ್ನು ಹುಡುಕಲು ನೆರವಾಗುವುದಾಗಿದೆ. ಇದು ಹವಾಮಾನ, ವಿವಿಧ ಬಗೆಯ ಬೆಳೆಗಳು ಮತ್ತು ಪ್ರಮಾಣಗಳ ವಿವಿರ ತಿಳಿಸುವುದಾಗಿದೆ.
  3. ಎಮ್‌ಕಿಸಾನ್‌ ಅಪ್ಲಿಕೇಶನ್‌:
    ಈ ಅಪ್ಲಿಕೇಶನ್‌ ಕೃಷಿಕರಿಗಾಗಿ ತಜ್ಞರು ಮತ್ತು ಸರಕಾರದ ಅಧಿಕಾರಿಗಳು ರೈತರು ಮತ್ತು ಮಧ್ಯವರ್ತಿಗಳ ಮಾಹಿತಿಗಳನ್ನು ಶೇರ್‌ ಮಾಡುವುದಾಗಿದೆ. ಈ ಆಪ್‌ನ ಉತ್ತಮ ಭಾಗವೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟನೆಗಳ ಮತ್ತು ಅದರ ಮಿತ್ರ ವಲಯಗಳು ಕೃಷಿಯ ಮಾಹಿತಿಗಳನ್ನು SMS ಗಳ ಮೂಲಕ ಅವರದೇ ಮಾತೃ ಭಾಷೆಯಲ್ಲಿ ಸಲಹೆಕೊಡುವುದಾಗಿದೆ.
  4. ಶೇತ್ಕಾರಿ ಮಸಿಕ್‌ ಆಪ್‌:
    ಇದು ಕೃಷಿ ಕ್ಷೇತ್ರದ ಜನಪ್ರಿಯ ಪತ್ರಿಕೆಯಗಿದ್ದು ಇಂಟರ್‌ನೆಟ್‌ನ ಸಂಪರ್ಕವಿಲ್ಲದೆಯೇ ಮಾಹಿತಿ ಒದಗಿಸುವ ಆಪ್‌ ಆಗಿದೆ. ಇದನ್ನು ಮಹಾರಾಷ್ಟ್ರದ ಕೃಷಿ ಇಲಾಖೆಯಿಂದ ಪಬ್ಲಿಷ್‌ ಆಗುತ್ತದೆ. ಈ ಪತ್ರಿಕೆಯು ಹೊಸ ಬೆಳೆ ತಂತ್ರಜ್ಞಾನ, ಕೀಟನಾಶಕ ಮತ್ತು ರೋಗಗಳ ನಿರ್ವಹಣೆ, ಸಾವಯವ ಕೃಷಿ, ಕೃಷಿ ಪದ್ಧತಿ, ನೀರವಾರಿ ಹೀಗೆ ಹಲವು ವಿಷಯಗಳ ಮಾಹಿತಿ ಒದಗಿಸುತ್ತದೆ.
  5. ಫಾರ್ಮ–ಓ–ಪೇಡಾ ಆಪ್‌:
    ಈ ಆಪ್‌ ಗುಜರಾತ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದೆ. ಈ ಆಪ್‌ನಲ್ಲಿ ಮಣ್ಣುಗಳಿಗೆ ಅನುಗುಣವಾಗಿ ಬೆಳೆಯುವ ಬೆಳೆ, ಕಾಲ ಮುಂತಾದ ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟವರು ಸಹಾಯವಾಗುವ ಮಾಹಿತಿಗಳು ಸಿಗುತ್ತವೆ.
  6. ಕಾರ್ಪ್ ಇನ್ಶ್ಯರೆನ್ಸ್‌ ಆಪ್‌:
    ಇದು ಕೃಷಿ ಅಷ್ಟೇ ಅಲ್ಲ, ಅವರ ಇನ್ಶ್ಯರೆನ್ಸ್‌ ಕಂತುಗಳ ಲೆಕ್ಕ ಒದಗಿಸಲು ಸಹಾಯ ಮಾಡುತ್ತದೆ. ಈ ಆಪ್‌ನಲ್ಲಿ ಬೆಳೆಗಳ ಮೇಲಿನ ಕೃಷಿ ಜಾಗದ ಭಾಗ, ಮೊತ್ತ ಮತ್ತು ಸಾಲದ ಮೊತ್ತ ಇವುಗಳ ಇನ್ಶ್ಯರೆನ್ಸ್‌ ಗಳ ಮಾಹಿತಿ ಒದಗಿಸುತ್ತದೆ.
  7. ಅಗ್ರಿ ಮಾರ್ಕೆಟ್‌ ಆಪ್‌:
    ಇದು 50 ಕಿಲೋಮೀಟರ್‌ ಒಳಗಿನ ಕೃಷಿ ಮಾರುಕಟ್ಟೆಯಲ್ಲಿರುವ ಬೆಳೆಗಳ ದರವನ್ನು ತಳಿಸುವ ಮೊಬೈಲ್‌ ಆಪ್‌ ಆಗಿದೆ. ಅಗ್ರಿಮಾರ್ಕೆಟ್‌ ಆಪ್‌ ಜಿಪಿಸ್‌ ಸೌಲಭ್ಯ ಹೊಂದಿದ್ದು ಇದು ರೈತರ ಲೊಕೇಶನ್‌ ಟ್ರಾಕ್‌ ಮಾಡುವುದರಿಂದ ಖರೀದಿ ಮತ್ತು ಮಾರಾಟಕ್ಕೆ ಸಮೀಪದ ಸರಿಯಾದ ನಿಖರ ಮಾರುಕಟ್ಟೆಯ ಮಾಹಿತಿ ನೀಡುವುದು. ಆದಗ್ಯೂ ಈ ಆಪ್‌ ನಿಂದ ರೈತರು ಜಿಪಿಎಸ್‌ ಸೌಲಭ್ಯವಿಲ್ಲದೇಯೂ ಮಾರುಕಟ್ಟೆಯ ದರ ತಿಳಿಯಬಹುದಾಗಿದೆ.

ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು

(Apps for Farmers must Know these Agriculture related App for better crops and products)

Comments are closed.