Hijab Row Karnataka High Court : ಹಿಜಾಬ್ ಸಂಘರ್ಷ; ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ; ವಾದ ಪ್ರತಿವಾದದ ಅಂಶಗಳು ಇಲ್ಲಿವೆ

Karnataka Hijab Row Updates February 15: ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಹಿಜಾಬ್ ಧರಿಸಿ ತರಗತಿಯಲ್ಲಿ ಕೂರುವ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 16, ಬುಧವಾರಕ್ಕೆ ಮುಂಡೂಡಿಕೆ ಮಾಡಲಾಗಿದೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನಲ್ಲಿ ವಾದ ಮಂಡನೆಗೆ ಹಲವು ವಕೀಲರು ಹಕ್ಕು ಮಂಡನೆ ಮಾಡಿದರು. ಮಧ್ಯಂತರ ಆದೇಶವನ್ನು ಮುಂದುವರೆಸಬಾರದು ಎಂದು ವಕೀಲ ದೇವದತ್ ಕಾಮತ್ ವಾದವನ್ನು ಕೋರ್ಟ್ ಇಂದು ಒಪ್ಪದೇ ಧಾರ್ಮಿಕ ಬಟ್ಟೆ ತೊಟ್ಟು ತರಗತಿಯಲ್ಲಿ ಕೂರಬಾರದು ಎಂಬ ಮಧ್ಯಂತರ ಆದೇಶಕ್ಕೆ ತಡೆ ನೀಡಲಿಲ್ಲ. ಧಾರ್ಮಿಕ ಹಕ್ಕನ್ನು ವಿದ್ಯಾರ್ಥಿನಿ ಬಳಸಿದರೆ ತಪ್ಪೇನ? ಹಿಜಾಬ್ ಧರಿಸಿದ ವಿದ್ಯಾರ್ಥಿನಿಯನ್ನು ಅಮಾನತು ಮಾಡಬಾರದು. ಮುಸ್ಲಿ ಸಮುದಾತವನ್ನು ಅಲ್ಪಸಂಖ್ಯಾತರೆಂದು ಸಂವಿಧಾನದ 29ನೇ ವಿಧಿ ರಕ್ಷಿಸುತ್ತದೆ. ಹಿಂದೂ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸಿದರೆ ತಪ್ಪು ಮಾಡಿದಂತಾಗುತ್ತದೆ ಎಂದು ವಕೀಲ ದೇವದತ್ ಕಾಮತ್ ವಾದಿಸಿದರು.

ಸಮವಸ್ತ್ರ ಜಾರಿ ಅಧಿಕಾರವನ್ನು ಕಾಲೇಜು ಅಭಿವೃದ್ದಿ ಸಮಿತಿಗೆ ಸದ್ಯ ಜಾರಿಯಲ್ಲಿರುವ ಕಾಯ್ದೆಯಡಿ ನೀಡಲು ಅಧಿಕಾರವಿಲ್ಲ ಎಂದು ಹೇಳಿದ ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಿದೆ ಫೆಬ್ರವರಿ 16, ಬುಧವಾರದಂದು ಮಧ್ಯಾಹ್ನ 2.30ಕ್ಕೆ ವಾದಮಂಡನೆ ಮುಂದುವರಿಸುವಂತೆ ಕರ್ನಾಟಕ ಹೈಕೋರ್ಟ್ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಆರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ತಮ್ಮ ಧಾರ್ಮಿಕ ಹಕ್ಕು. ಅದನ್ನು ತರಗತಿಯಲ್ಲೂ ಧರಿಸಲು ಅವಕಾಶ ನೀಡಬೇಕೆಂದು ವಾದಿಸಿದ್ದರು. ಇದಕ್ಕೆ ಅವಕಾಶ ನೀಡದ ಕಾಲೇಜು ಅಡಳಿತ ಮಂಡಳಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಮೊದಲು ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಬಳಿಕ ಇದಕ್ಕೆ ವಿಸ್ಕೃತ ಪೀಠವೇ ಸೂಕ್ತವೆಂದು ಅಭಿಪ್ರಾಯಿಸಿತ್ತು.

ಇದನ್ನೂ ಓದಿ: Good News: ಸಾಯುತ್ತಿದ್ದ 70 ವರ್ಷದ ಆಲದಮರಕ್ಕೆ ಮರುಜೀವ! ಪರಿಸರ ಪ್ರಿಯರಿಂದ ಆಲದಮರದ ಸ್ಥಳಾಂತರ

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3

(Hijab Row Karnataka High Court hearing continue on Wednesday tomorrow

Comments are closed.