ola cabs : 64 ರೂಪಾಯಿ ಮೋಸ ಮಾಡಿದಕ್ಕೆ ಓಲಾ ಕಂಪೆನಿಗೆ ದಂಡ ;  ಕೇಸ್‌ ಹಾಕಿದವನಿಗೆ  ಸಿಕ್ಕಿದ ಪರಿಹಾರ ಎಷ್ಟು ಗೊತ್ತಾ ?

ಮುಂಬೈ : ಸಾಮಾನ್ಯವಾಗಿ ಸಿಟಿಯಲ್ಲಿ ಇದ್ದವರು ಒಮ್ಮೆ ಆದ್ರೂ ಓಡಾಡೋಕೆ  ಒಲಾ ( Ola Cabs ), ವೂಬರ್‌  ನಂತಹ ಸಾರಿಗೆ ವ್ಯವಸ್ಥೆಯನ್ನು ಬಳಸಿಯೇ ಇರುತ್ತೀರಿ. ಕೆಲವರಿಗಂತು ಕ್ಯಾಬ್‌ ಸರ್ವೀಸ್‌  ದಿನದ ಓಡಾಡಕ್ಕೆ  ಬೇಕಾಗಬಹುದು. ಆನ್‌ ಲೈನ್‌ ಪೇಮೆಂಟ್‌ ಬಂದ ಮೇಲಂತು ಇದರಲ್ಲಿ ಓಡಾಡೋದು ತುಂಬಾನೇ ಸುಲಭ ವಾಗಿದೆ. ಆದ್ರೆ ಕೆಲವೊಂದು ಸಲ ಈ ಕ್ಯಾಬ್‌ ಕಂಪೆನಿಗಳು  ಜನರನ್ನು ಯಾಮಾರಿಸುತ್ತವೆ. ಬುಕ್‌  ಮಾಡೋವಾಗ ಒಂದು ರೇಟ್‌ ತೋರಿಸಿದ್ರೆ ಇಳಿವಾಗಲೇ ಒಂದು ರೇಟ್‌ ತೋರಿಸುತ್ತೆ. ನಾವು ಅದನ್ನು ತುಂಬಾ ಸೀರಿಯಸ್‌ ಆಗಿ ತೆಗೋಳೋದು ಕಡಿಮೆ. ಆದ್ರೆ ಇಲ್ಲೊಬ್ಬ ಓಲಾ  ಸರ್ವೀಸ್‌ ನ ಮೋಸಕ್ಕೆ ತಕ್ಕ ಪಾಠ ಕಲಿಸಿದ್ದಾನೆ.

ಮುಂಬಯಿನ  ಶ್ರೇಯನ್‌ ಎಂಬವರು 2021 ರಲ್ಲಿ ತಮ್ಮ ಕುಟುಂಬ ಜೊತೆ  ಕಂಡಿವಾಲಿಯಿಂದ ಕಾಲಾಚೌಕಿಗೆ ಹೋಗಲು  ಓಲಾ ಕ್ಯಾಬ್‌ ಬುಕ್‌ ಮಾಡಿದ್ರು.  ಬುಕ್‌  ಮಾಡೋವಾಗ  ಒಂದು ರೈಡ್‌ ನ ಬೆಲೆ 372 ಅಂತ  ಆಪ್‌ ನಲ್ಲಿ ತೋರಿಸಲಾಗಿತ್ತು. ಆದ್ರೆ ರೈಡ್‌  ಮುಗಿಸಿದಾಗ ಇದರ ಬೆಲೆ 424ಕ್ಕೆ ಏರಿಕೆಯಾಗಿತ್ತು. ಅಂದ್ರೆ ಬಿಲ್‌ ನಲ್ಲಿ 64 ರೂಪಾಯಿ ಏರಿಕೆಯಾಗಿತ್ತು. ಎಲ್ಲರಂತೆ  ಶ್ರೇಯಸ್‌ ಕೂಡಾ ಬಿಲ್‌ ಪೇ ಮಾಡಿದ್ದಾರೆ. ನಂತರ ಈ ಕುರಿತಂತೆ  ಓಲಾ ಕಸ್ಟಮರ್‌ ಕೇರ್‌ ಗೆ ಕಾಲ್‌ ಮಾಡಿದ್ದಾರೆ.  ಆದ್ರೆ  ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ  ಕನ್ಸೂಮರ್‌ ಕೋರ್ಟ್‌ ಗೆ  ದೂರು ನೀಡಿದ್ದಾರೆ. ಇಷ್ಟು ಚಿಕ್ಕ ಮೊತ್ತಕ್ಕೆ ದೂರು ನೀಡದಂತೆ ಶ್ರೇಯಸ್‌ ಗೆ ಮನೆಯವರು ಒತ್ತಾಯಿಸಿದ್ರಂತೆ ಆದ್ರೆ  ಖುದ್ದು ವಕೀಲನಾಗಿರು ಇವರು ಇದಕ್ಕೆ ನಿರಾಕರಿಸಿ ದೂರು ನೀಡಿದ್ದಾರೆ

 ಈ ಕುರಿತಂತೆ ಮೊಕ್ಕದ್ದಮೆ ನಡೆಸಿದ ಕನ್ಸೂಮರ್‌ ಫೋರಂ ಶ್ರೇಯಸ್‌ ಗೆ 15 ಸಾವಿರ ರೂಪಾಯಿ ಪರಿಹಾರ ನೀಡಿ ಆದೇಶ ನೀಡಿದೆ. ಇದರಲ್ಲಿ 5 ಸಾವಿರ ರೂಪಾಯಿ  ಕೇಸ್‌ ದಾಖಲಿಸಿದ ಖರ್ಚಿಗೆ ಹಾಗೂ 10 ಸಾವಿರ ರೂಪಾಯಿಯನ್ನು ಪರಿಹಾರವಾಗಿ ಕಂಪೆನಿ ನೀಡುವಂತೆ ಆದೇಶಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಯಸ್‌ “ ನನಗೆ 64 ರೂಪಾಯಿ ಹಣ ಮುಖ್ಯವಾಗಿರಲಿಲ್ಲ. ಬದಲಾಗಿ  ಓಲಾ  ಕಂಪೆನಿ  ಈ ರೀತಿಯ ಮೋಸ ಮಾಡುವ ಮುನ್ನ ಎಚ್ಚೆತ್ತುಕೊಳ್ಳಬೇಕು ಅನ್ನೋ ಕಾರಣಕ್ಕೆ  ಈ ರೀತಿ ದೂರು ದಾಖಲಿಸಿದೆ. ಈಗ ಅದು ಯಶಸ್ವಿ ಆಗಿದೆ” ಎಂದ್ರು.

ಇನ್ನು ಶ್ರೇಯಸ್‌ ಪ್ರಕಾರ ಪ್ರತಿ ದಿನ ಈ ಆಪ್‌ ಗಳಲ್ಲಿ 100 ಕ್ಕಿಂತ  ಹೆಚ್ಚಿನ ಮಂದಿಗೆ  ಹೆಚ್ಚಿನ ಹಣ ಕೊಡುವ ಪರಿಸ್ಥಿತಿ ಒದಗುತ್ತೆ. ಇದರಿಂದ ಕಂಪೆನಿಗೆ ಸಾಕಷ್ಟು ಲಾಭ ಆಗುತ್ತೆ. ಆದ್ರೆ ಯಾರಿಗೂ ಇದರ ಬಗ್ಗೆ ಮಾಹಿತಿ ಇರೋದಿಲ್ಲ. ಇನ್ನದರೂ  ಈ ಓಲಾ ಆಪ್‌ ನ ಸಾಫ್ಟ್‌ವೇರ್‌ ನಲ್ಲಿ ಬದಲಾವಣೆಯಾಗ ಬೇಕಾಗಿದೆ ಎಂಬುದು ಅವರ ಅಭಿಪ್ರಾಯ . ಇನ್ನಾದ್ರೂ ಈ ಕಂಪೆನಿಗಳು ಎಚ್ಚೆತ್ತುಕೊಳ್ಳಲಿ.

ಇದನ್ನೂ ಓದಿ : ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನುಬದ್ಧವೇ, ಅಲ್ಲವೇ? ಸುಪ್ರೀಂ ಪ್ರಶ್ನೆ

ಇದನ್ನೂ ಓದಿ:16 ಕೀಮೋ ಥೆರಪಿ ಬಳಿಕವೂ ಕುಗ್ಗದ ಉತ್ಸಾಹ; ಮತ್ತೆ ಸಿನೆಮಾ ರಂಗಕ್ಕೆ ಕಾಲಿಡುವ ಸೂಚನೆ ನೀಡಿದ ಹಂಸ ನಂದಿನಿ

Mumbai Ola Cabs Company fined for frauding Rs.64 case filed by a lawyer

Comments are closed.