Hijab Row Valentine Day : ಹೈಕೋರ್ಟಲ್ಲಿ ಹಿಜಾಬ್: ಫೆಬ್ರವರಿ 14ರ ವಾದ ಪ್ರತಿವಾದದ ಅಂಶಗಳು ಇಲ್ಲಿವೆ

ತರಗತಿಯಲ್ಲೂ ಹಿಜಾಬ್ ಧರಿಸಿಯೇ (Hijab Row) ಕೂರಬೇಕೆಂದು ಕರ್ನಾಟಕ ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪ್ರಕರಣ ಇಂದು (ಫೆಬ್ರವರಿ 14) ನಡೆಯಿತು. (Hijab Row Valentine Day) ಜೊತೆಗೆ ಕೆಲವು ಪ್ರಮುಖ ವಿಚಾರಗಳು ವಾದ ಪ್ರತಿವಾದದಲ್ಲಿ ಹೊರಹೊಮ್ಮಿದವು. ಇಂದಿನ ವಿಚಾರಣೆಯ ಅಂತ್ಯಕ್ಕೆ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಫೆಬ್ರವರಿ 15ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ದೇವದತ್ ಕಾಮತ್, ವಕೀಲ ಮೊಹಮ್ಮದ್ ತಾಹೀರ್, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ್ ನಾವದಗಿ ಹಾಗೂ ಇತರರು ವಾದ ಮಂಡನೆ ಮಾಡಿದರು.

ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ. ಜೊತೆಗೆ ಸಮವಸ್ತ್ರ, ಹಿಜಾಬ್ ಧರಿಸುವ ಬಗ್ಗೆ ಸರ್ಕಾರದ ಆದೇಶಗಳು, ಶಾಸಕರ ಆದೇಶಗಳು ಸಹ ಹಿಜಾಬ್ ನಿರ್ಬಂಧ ಮಾಡುವ ಅಧಿಕಾರವನ್ನು ಹೊಂದಿಲ್ಲ ಎಂದು ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲರು ವಾದ ಮಂಡಿಸಿದರು. ಅಲ್ಲದೇ ಯೂಟ್ಯೂಬ್‌ನಲ್ಲಿ ವಿಚಾರಣೆಯ ಲೈವ್ ಪ್ರಸಾರವಾಗುತ್ತಿದ್ದು ಇದು ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಮೇಲೆ ಪರಿಣಾಮ ಬೀಡಬಹುದಾದ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಈಕುರಿತು ಸಹ ಗಮನಹರಿಸ ಬೇಕು ಎಂದು ಅರ್ಜಿದಾರರ ಪರ ವಕೀಲರಾದ ರವಿವರ್ಮಕುಮಾರ್ ವಾದ ಮಂಡಿಸಿದರು. ಈ ವಾದವನ್ನು ಸಹ ಪರಿಗಣಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

ಈಮುನ್ನ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಏನಾಗಿತ್ತು?
ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ತ್ರಿ ಸದಸ್ಯ ಪೀಠ ವಿಚಾರಣೆಯನ್ನು(Hijab controversy hearing postponement) ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ. ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚನೆಯನ್ನು ನೀಡಿದೆ. ಆದರೆ ಅಂತಿಮ ಆದೇಶದವರೆಗೆ ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಉಡುಗೆಗಳನ್ನು ತೊಡುವಂತಿಲ್ಲ ಎನ್ನುವ ಮೂಲಕ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ಇದನ್ನೂ ಓದಿ: Hijab controversy hearing postponement : ಹಿಜಾಬ್‌ ವಿವಾದ ವಿಚಾರಣೆ ಮುಂದೂಡಿಕೆ : ಅಂತಿಮ ಆದೇಶದವರೆಗೂ ಹಿಜಾಬ್‌, ಕೇಸರಿ ಧರಿಸುವಂತಿಲ್ಲ

ಇದನ್ನೂ ಓದಿ : ನಿಮ್ಮ ಸಂಗಾತಿಗೆ ನೀಡಬಹುದಾದ ಉಡುಗೊರೆಗಳ ಐಡಿಯಾ ಇಲ್ಲಿದೆ!

(Hijab Row Valentine Day hearing Karnataka High Court adjourns hearing for tomorrow)

Comments are closed.