SSC Recruitment 2022 : ಸ್ಟೆನೋಗ್ರಾಫರ್ ಗ್ರೇಡ್ ‘C’ ಮತ್ತು ‘D’ ಹುದ್ದೆಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್‌ 5 ಅರ್ಜಿ ಸಲ್ಲಿಸಲು ಕೊನೆದಿನ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು/ಸಂಸ್ಥೆಗಳಿಗೆ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಸ್ಟೆನೋಗ್ರಾಫರ್ ಗ್ರೇಡ್ ‘ಡಿ’ ಹುದ್ದೆಗಳ ನೇಮಕಾತಿಗಾಗಿ ಓಪನ್ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸ್ಟೆನೋಗ್ರಫಿಯಲ್ಲಿ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುಬಹುದಾಗಿದೆ. ಹೆಚ್ಚಿನ ವಿವಿರಗಳು ಹೀಗಿವೆ.

ದಿನಾಂಕ 20 ಆಗಸ್ಟ್ 2022 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು 05 ಸೆಪ್ಟೆಂಬರ್ 2022 ಆಗಿದೆ.

ಹುದ್ದೆಯ ವಿವರಗಳು:
ಪೋಸ್ಟ್ ಹೆಸರು- ಸ್ಟೆನೋಗ್ರಾಫರ್ ಗ್ರೇಡ್ C/D

ಶೈಕ್ಷಣಿಕ ಅರ್ಹತೆ:
ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಯಲ್ಲಿ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಸ್ಟೆನೋಗ್ರಾಫರ್ ಗ್ರೇಡ್ ಡಿ ಟ್ರಾನಸ್ಕ್ರಿಪ್ಷನ್‌:
ಇಂಗ್ಲೀಷ್: 50 ನಿಮಿಷಗಳು | ಹಿಂದಿ 65 ನಿಮಿಷಗಳು

ಸ್ಟೆನೋಗ್ರಾಫರ್ ಗ್ರೇಡ್ ಸಿ ಟ್ರಾನಸ್ಕ್ರಿಪ್ಷನ್‌:
ಇಂಗ್ಲೀಷ್: 40 ನಿಮಿಷಗಳು | ಹಿಂದಿ 55 ನಿಮಿಷಗಳು

ವಯಸ್ಸಿನ ಮಿತಿ:
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: ಗ್ರೇಡ್ D ಗೆ 27 ವರ್ಷಗಳು
ಗರಿಷ್ಠ ವಯಸ್ಸು: ಗ್ರೇಡ್ C ಗೆ 30 ವರ್ಷಗಳು

ಸ್ಟಾಫ್ ಸೆಲೆಕ್ಷನ್ ಕಮಿಷನ್ SSC ಸ್ಟೆನೋಗ್ರಾಫರ್ ಪರೀಕ್ಷಾ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ / OBC / EWS: 100/-
SC / ST: 0/- (ಇಲ್ಲ)
ಎಲ್ಲಾ ವರ್ಗದ ಮಹಿಳೆ: 0/- (ವಿನಾಯಿತಿ)

ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇ-ಚಲನ್ ಆಫ್‌ಲೈನ್ ಶುಲ್ಕ ಮೋಡ್ ಮೂಲಕ ಮಾತ್ರ ಪಾವತಿಸಿಬಹುದಾಗಿದೆ.

SSC ನೇಮಕಾತಿ 2022: ಅರ್ಜಿ ಸಲ್ಲಿಸುವುದು ಹೇಗೆ :

ಮೊದಲಿಗೆ, https://ssc.nic.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಮುಖಪುಟದಲ್ಲಿ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಎಚ್ಚರಿಕೆಯಿಂದ ಓದಿ.
ಎಚ್ಚರಿಕೆಯಿಂದ ಓದಿದ ನಂತರ ಮುಖಪುಟದಲ್ಲಿ ನೋಂದಣಿಗಾಗಿ “ಈಗ ನೋಂದಾಯಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ.
ನೋಂದಣಿಯ ನಂತರ “ಅನ್ವಯಿಸು” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ಸ್ಟೆನೋ ‘ಸಿ’ & ‘ಡಿ’ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಅನ್ವಯಿಸಿ
ಹೊಸ ಟ್ಯಾಬ್ ತೆರೆಯುತ್ತದೆ ನಂತರ ತಂದೆಯ ಹೆಸರು, ತಾಯಿಯ ಹೆಸರು, ವಿಳಾಸ ಇತ್ಯಾದಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಸಲ್ಲಿಸುವ ಮೊದಲು ಅರ್ಜಿ ಶುಲ್ಕವನ್ನು ಪಾವತಿಸಿ.
ಸಲ್ಲಿಸಿದ ನಂತರ ಅರ್ಜಿ ನಮೂನೆಯನ್ನು ಪ್ರಿಂಟ್‌ ಮಾಡಿ.

ಇದನ್ನೂ ಓದಿ : Sony HT-S400 : ಭಾರತದಲ್ಲಿ ಬಿಡುಗಡೆಯಾದ ಸೊನಿ HT-S400 ಸೌಂಡ್‌ಬಾರ್‌ : ವೈರ್‌ಲೆಸ್‌ ಸಬ್‌ವೂಫರ್‌, 330W ಆಡಿಯೋ ಔಟ್‌ಪುಟ್‌, ಬ್ಲೂಟೂತ್‌ ಇದರ ವಿಶೇಷತೆ

ಇದನ್ನೂ ಓದಿ : SSC CPO recruitment 2022 : ಪದವೀಧರರಿಗೆ ಉದ್ಯೋಗಾವಕಾಶ, 4300 ಹುದ್ದೆಗೆ ಅರ್ಜಿ ಆಹ್ವಾನ

(SSC Recruitment 2022 for stenographer grade c and d check the details)

Comments are closed.