ಆರೋಗ್ಯ ಕರ್ನಾಟಕದತ್ತ ಮಹತ್ವದ ಹೆಜ್ಜೆ : ನಾಳೆ ರಾಜ್ಯದಲ್ಲಿ ವಿವಿಧ ಆರೋಗ್ಯ ಕಾರ್ಯಕ್ರಮಗಳಿಗೆ ಚಾಲನೆ

ಬೆಂಗಳೂರು : (Implementation of various health programs) ಆರೋಗ್ಯ ಕರ್ನಾಟಕದತ್ತ ರಾಜ್ಯ ಸರಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಈ ನಿಟ್ಟಿನಲ್ಲಿ ಒಂದಲ್ಲ ಒಂದು ನೋತನ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಜನತೆಯ ಸದೃಢ ಆರೋಗ್ಯಕ್ಕೆ ಸರಕಾರ ಮುಂದಾಗಿದೆ. ಈ ಬೆನ್ನಲ್ಲೇ ನಾಳೆ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿರುವಂತಹ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಸಚಿವ ಡಾ. ಮನ್ಸುಖ್‌ ಮಾಂಡವೀಯಾ ಅವರು ಈ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಸರಕಾರ ನೂತನವಾಗಿ ಜಾರಿಗೊಳಿಸಿರುವ ಮಹಿಳೆಯರ ಆರೋಗ್ಯ ಸೇವೆಗಳ ಹೊಚ್ಚ ಹೊಸ ಅಧ್ಯಾಯವೆಂದೇ ಪರಿಗಣಿಸಿರುವ ಆಯುಷ್ಮತಿ ಕ್ಲಿನಿಕ್‌, ನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಾಗಿ ಜಾರಿಗೊಳಿಸಿರುವ ನಮ್ಮ ಕ್ಲಿನಿಕ್‌, ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರ ಚಿಕಿತ್ಸಾ ಯೋಜನೆ, ಡಯಾಬಿಟಿಸ್‌, ಆಯುಷ್ಮಾನ್‌ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ- ಆರೋಗ್ಯ ಕರ್ನಾಟಕ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.

ಆಯುಷ್ಮತಿ ಕ್ಲಿನಿಕ್‌ :
ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮಹಿಳಾ ಆರೋಗ್ಯ ಸೇವೆಗಳ ಹೊಚ್ಚ ಹೊಸ ಅಧ್ಯಾಯವೇ ಆಯುಷ್ಮತಿ ಕ್ಲಿನಿಕ್.‌ ರಾಜ್ಯಾದ್ಯಂತ ಆಯ್ದ 128 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳಿಗೆ / ಮಹಿಳೆಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್‌ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ಮಹಿಳೆಯರಿಗೋಸ್ಕರ ರೂಪುಗೊಂಡ ಈ ಕ್ಲಿನಿಕ್‌ ನಲ್ಲಿ ಉಚಿತವಾಗಿ ಉಚಿತವಾಗಿ ವೈದ್ಯರ ಸೇವೆ, ಆಪ್ತ ಸಮಾಲೋಚನೆ, ಲ್ಯಾಬ್‌ ಹುದ್ದೆಗಳು, ಔಷದಿ, ಯೋಗ ಮತ್ತು ಧ್ಯಾನ ಹಾಗೂ ಇನ್ನೀತರ ಸೇವೆಗಳು ಲಭ್ಯವಿರುತ್ತದೆ.

ಮೂರನೇ ಹಂತದ ನಮ್ಮ ಕ್ಲಿನಿಕ್‌ ಯೋಜನೆ :
ಮೂರನೇ ಹಂತದ ನಮ್ಮ ಕ್ಲಿನಿಕ್‌ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಇದರಲ್ಲಿ ಹನ್ನೆರಡು ಬಗೆಯ ಆರೋಗ್ಯ ಸೇವೆಗಳ ಪ್ಯಾಕೇಜ್‌ ಗಳನ್ನು ನೀಡಲಾಗುತ್ತಿದೆ. ಉಚಿತ ಪ್ರಯೋಗ ಶಾಲಾ ಸೇವೆಗಳು, ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧಗಳು, ಟೆಲಿ ಸಮಾಲೋಚನೆ, ಕ್ಷೇಮ ಚಟುವಟಿಕೆಗಳು ಲಭ್ಯವಿದೆ. ನಗರ ಪ್ರದೇಶಗಳಲ್ಲೂ ವಾಸಿಸುವ ಬಡ, ದುರ್ಬಲ ವರ್ಗ, ವಲಸೆ ಬರುವ ಜನರಿಗೆ ಪ್ರತಿ 15,000-20,000 ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ ಕಾರ್ಯ ನಿರ್ವಹಿಸಲಿದೆ.

ಡಯಾಲಿಸಿಸ್‌ :
ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್‌ ಪ್ರೋಗ್ರಾಂ ಕೈಗೆಟುಕುವ ಡಯಾಲಿಸಿಸ್‌ ಸೇವೆಗಳನ್ನು ಒದಗಿಸುವ ಮೂಲಕ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಡಯಾಲಿಸಿಸ್‌ ಕೇರ್‌ ಭಾಗದಲ್ಲಿ ಅಸ್ತಿತ್ವದಲ್ಲಿರುವ ಖಾಸಗಿ ವಲಯದ ಲಭ್ಯವಿರುವ ಸಾಮರ್ಥ್ಯದಿಂದ ಲಾಭ ಪಡೆಯಲು ಡಯಾಲಿಸಿಸ್‌ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ.

ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರ ಚಿಕಿತ್ಸಾ ಯೋಜನೆ :
ಶ್ರವಣದೋಷ ಮುಕ್ತ ಕರ್ನಾಟಕ ನಿರ್ಮಿಸಿರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ರಾಜ್ಯದ ಆರು ವರ್ಷದೊಳಗಿನ ಎರಡು ಕಿವಿಗಳ ಗಂಭೀರ ಶ್ರವಣದೋಷವುಳ್ಳ 510 ಹುಟ್ಟು ಕಿವುಡು ಮಕ್ಕಳಿಗೆ 6.27 ಲಕ್ಷದ ಶಸ್ತ್ರಚಿಕಿತ್ಸಾ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ. ಆರು ವರ್ಷದೊಳಗಿನ ಶ್ರವಣ ದೋಷವುಳ್ಳ ಮಕ್ಕಳಿಗೆ ನುರಿತ ತಜ್ಞವೈದ್ಯರುಗಳಿಂದ ಉಚಿತವಾಗಿ ಪರೀಕ್ಷೆ ತಪಾಸಣೆ, ಶ್ರವಣ ಸಾಧನ, ಶಸ್ತ್ರ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಂತರದ ಆಡಿಟರಿ ಹರ್ಬಲ್‌ ಥೆರಫಿ ಸೇವೆಯನ್ನು ನೋಂದಾಯಿತ ಭಾಷಾ ಚಿಕಿತ್ಸಾ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು.

ಇದನ್ನೂ ಓದಿ : Toy train service: ಪುಟಾಣಿ ಎಕ್ಸ್‌ಪ್ರೆಸ್: ಬೆಂಗಳೂರಿನಲ್ಲಿ ಟಾಯ್ ಟ್ರೈನ್ ಸೇವೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಆಯುಷ್ಮಾನ್‌ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ- ಆರೋಗ್ಯ ಕರ್ನಾಟಕ ಯೋಜನೆ :
ಈ ಯೋಜನೆಯಡಿ ಬಿಪಿಎಲ್‌ ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಟ ಐದು ಲಕ್ಷಗಳವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಲಭ್ಯವಿದೆ. ಈ ಮೂಲಕ ಬಿಪಿಎಲ್‌ ಕುಟುಂಬಕ್ಕೆ ಪಾವತಿ ಆಧಾರದ ಮೇಲೆ ಶೇ. 10 ರಷ್ಟು ಚಿಕಿತ್ಸಾ ವೆಚ್ಚ ಸರಕಾರದಿಂದಲೇ ಪಾವತಿಯಾಗುತ್ತದೆ.

Implementation of various health programs: An important step towards health Karnataka: Tomorrow various health programs will be launched in the state

Comments are closed.