ಬೆಂಗಳೂರು : state guidelines : ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಏರಿಕೆ ಆಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ ಹಾಗೂ ನ್ಯೂಜಿಲೆಂಡ್ಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮ ಕೈಗೊಂಡಿದೆ . ಮಂಗಳೂರು ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ರ್ಯಾಪಿಡ್ ಟೆಸ್ಟಿಂಗ್, ಥರ್ಮಲ್ ಸ್ಕ್ರೀನಿಂಗ್ಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವು ಸೂಚನೆ ನೀಡಿದೆ.
ಜಪಾನ್ ಹಾಗೂ ಥೈಲ್ಯಾಂಡ್ನಿಂದ ಬೆಂಗಳೂರಿಗೆ ನೇರ ವಿಮಾನ ಸಂಪರ್ಕವಿದೆ , ಹೀಗಾಗಿ ಮುಖ್ಯವಾಗಿ ಜಪಾನ್ ಹಾಗೂ ಥೈಲ್ಯಾಂಡ್ನಿಂದ ಬರುವ ಪ್ರಯಾಣಿಕರನ್ನೇ ಗುರಿಯಾಗಿಟ್ಟುಕ್ಕೊಂಡು ಮಾರ್ಗಸೂಚಿಗಳನ್ನು ರಾಜ್ಯ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದೆ. ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಮಾರ್ಗಸೂಚಿಗಳ ಕಡ್ಡಾಯ ಪಾಲನೆಗೆ ಆದೇಶಿಸಲಾಗಿದೆ. ವಿದೇಶಗಳಿಂದ ಬರುವ ಪ್ರಯಾಣಿಕರಿಂದ ಸೋಂಕು ಹರಡುವ ಅಪಾಯ ಹೆಚ್ಚಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಸೋಂಕನ್ನು ತಡೆಯಲು ಸರ್ಕಾರ ಪ್ಲಾನ್ ಮಾಡಿದೆ.
ಜಪಾನ್ ಹಾಗೂ ಥೈಲ್ಯಾಂಡ್ನಿಂದ ರಾಜ್ಯದ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿರಲಿದೆ.ಇದರ ಜೊತೆಯಲ್ಲಿ ಈ ಎರಡು ದೇಶಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಟೆಲಿ ಮಾನಿಟರಿಂಗ್ಗೆ ಹಾಜರಾಗಬೇಕು ಕೊರೊನಾ ಲಕ್ಷಣ ಹೊಂದಿರುವ ಪ್ರಯಾಣಿಕರ ಸ್ವಾಬ್ಗಳನ್ನು ವಿಮಾನ ನಿಲ್ದಾಣದಲ್ಲಿರುವ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಪರೀಕ್ಷಾ ವರದಿಯು ಪಾಸಿಟಿವ್ ಬಂದಲ್ಲಿ ಜಿನೋಮ್ ಸಿಕ್ವೆನ್ಸಿಂಗ್ಗೆ ಕಳಿಸುವ ಮೂಲಕ ಸೋಂಕಿನ ತಳಿಯನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡಲಾಗುತ್ತದೆ.
ಇದನ್ನು ಓದಿ : acid attack : ಆಸಿಡ್ ಪ್ರೇಮಿ ನಾಗೇಶ್ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ
ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು
increase in covid 19 cases in the state guidelines issued by the government fo international travelers