ಭಾರತದ ಪ್ರಖ್ಯಾತ ನರರೋಗ ತಜ್ಞ, ಉಡುಪಿಯ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಎ. ರಾಜಾ ನಿಧನ

Adarsh ​​Hospital Udupi Dr. A Raja died : ಉಡುಪಿ : ಆದರ್ಶ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಎ. ರಾಜಾ ಆವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73  ವರ್ಷ ವಯಸ್ಸಾಗಿತ್ತು. ಇಂದು ಮಣಿಪಾಲದ ರಾಜೀವ ನಗರದಲ್ಲಿರುವ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.

Adarsh ​​Hospital Udupi Dr. A Raja died : ಉಡುಪಿ : ಆದರ್ಶ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಎ. ರಾಜಾ ಆವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73  ವರ್ಷ ವಯಸ್ಸಾಗಿತ್ತು. ಇಂದು ಮಣಿಪಾಲದ ರಾಜೀವ ನಗರದಲ್ಲಿರುವ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಭಾರತದ ಪ್ರಮುಖ ನರರೋಗ ತಜ್ಞರಲ್ಲಿ ಡಾ.ಎ.ರಾಜಾ ಅವರು ಕೂಡ ಒಬ್ಬರಾಗಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಉಡುಪಿ ಆದರ್ಶ ಆಸ್ಪತ್ರೆ, 2.30 ರಿಂದ ಮಣಿಪಾಲದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಜೂನ್‌ 17 ರಂದು ಅಂತ್ಯಕ್ರೀಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಪ್ರೊ. ಎ. ರಾಜಾ ಅವರು ಭಾರತದ ಪ್ರಖ್ಯಾತ ಮತ್ತು ಪ್ರಸಿದ್ಧ ನರಶಸ್ತ್ರಚಿಕಿತ್ಸಕರಲ್ಲಿ ಒಬ್ಬರು. 1967 ರಿಂದ 1972ರ ವರೆಗೆ ಎಂಬಿಬಿಎಸ್‌ ಶಿಕ್ಷಣವನ್ನು ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡಿದ್ದರು. ನಂತರ 974 ರಿಂದ 1979 ರವರೆಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ನೇರ ನರಶಸ್ತ್ರಚಿಕಿತ್ಸೆಯ I ಬ್ಯಾಚ್ ನಲ್ಲಿ ಎಂಎಸ್‌ ಶಿಕ್ಷಣವನ್ನು ಪೂರೈಸಿದ್ದರು.

India's Famous neurologist doctor of Adarsh __Hospital Udupi Dr. A Raja died
Image Credit to Original Source

ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದ ಡಾ.ಎ.ರಾಜಾ ಅವರು 13 ಜೂನ್ 1979 ರಿಂದ ಜುಲೈ 11, 1980 ರವರೆಗೆ ಉಪನ್ಯಾಸಕರಾಗಿ. 12 ಜುಲೈ 1980 ರಿಂದ 12 ಜೂನ್ 1982 ಸಹಾಯಕ ಪ್ರಾಧ್ಯಾಪಕರಾಗಿ. 1 ಜುಲೈ 1983 ರಿಂದ 12 ಜೂನ್ 1986ರ ವರೆಗೆ ಅಸೋಸಿಯೇಟ್ ಪ್ರೊಫೆಸರ್ ಹಾಗೂ 13ನೇ ಜೂನ್ 1986 ರಿಂದ 21ನೇ ಆಗಸ್ಟ್ 2010ರ ವರೆಗೆ ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Fatty Liver Day: ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಜೂ.13 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿದ್ಯಾರ್ಥಿಗಳಿಗೆ ನರಶಸ್ತ್ರಚಿಕಿತ್ಸೆಯ ಶಿಕ್ಷಣವನ್ನು ಪೂರೈಸಿದ್ದು, ಅನೇಕ ವಿದ್ಯಾರ್ಥಿಗಳಿಗೆ ಎಚ್‌ಡಿ ಮಾರ್ಗದರ್ಶಿಯಾಗಿದ ಕೆಲಸ ಮಾಡಿದ್ದಾರೆ. SCIMCT, AIIMS ಸೇರಿದಂತೆ ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಪರೀಕ್ಷಕರಾಗಿದ್ದಾರೆ. ಅಲ್ಲದೇ ಡಾ.ಎ ರಾಜಾ ಅವರ ಲೇಖನಗಳು 24 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ : KSRTC Bus : ಎಬಿವಿಪಿ ಹೋರಾಟಕ್ಕೆ ಜಯ : ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್

2010ರ ಆಗಸ್ಟ್ ನಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸಾ ವಿಭಾಗ, ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ಸಲಹೆಗಾರರಾಗಿ ಸೇರಿದ ಡಾ.ಎ.ರಾಜಾ ಅವರು ಮಣಿಪಾಲದ ರಾಷ್ಟ್ರೀಯ ನರವಿಜ್ಞಾನ ಮಿಷನ್‌ನ ಅಧ್ಯಕ್ಷರಾಗಿದ್ದಾರೆ. ಅವರು NSI ಯ ಅಜೀವ ಸದಸ್ಯ. ಅವರು ISCVS ನ ಸಂಸ್ಥಾಪಕ ಖಜಾಂಚಿ ಮತ್ತು ನಂತರ 2007 ರಲ್ಲಿ ISCVS ನ ಅಧ್ಯಕ್ಷರಾಗಿ,NSI ಯ ಕರಾವಳಿ ಅಧ್ಯಾಯದ ಸಂಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಅನ್ನ ತಿನ್ನೋದ್ರಿಂದ ಇಷ್ಟೇ ಅಲ್ಲಾ ಸಮಸ್ಯೆ ಇದೆಯಾ !!! ಅನ್ನದಿಂದ ರೋಗವೋ, ಅನಾರೋಗ್ಯವೋ ?

ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ರಾಷ್ಟ್ರೀಯ ನ್ಯೂರೋ ಸೈನ್ಸ್ ಮಿಷನ್ ಇಂಡಿಯಾವನ್ನು ಆರಂಭಿಸಿದರು. ಕ್ರೇನಿಯೊಫಾಗಸ್ ಅವಳಿ ಬೇರ್ಪಡಿಕೆ ಶಸ್ತ್ರಚಿಕಿತ್ಸೆ – 2004 ರಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ, ಡಾ. ಮುರಳೀಧರ ಪೈ ಅವರೊಂದಿಗೆ ಪ್ರೊ. ಎ. ರಾಜಾ ಅವರು ಶಸ್ತ್ರಚಿಕಿತ್ಸೆ ನಡೆಸಿದರು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮೈಕ್ರೋಸ್ಕೋಪ್ ಅನ್ನು ಪರಿಚಯಿಸಿದ ಮೊದಲ ನರಶಸ್ತ್ರಚಿಕಿತ್ಸಕ ಎನಿಸಿ ಕೊಂಡಿದ್ದಾರೆ.

India’s Famous neurologist doctor of Adarsh ​​Hospital Udupi Dr. A Raja died

Comments are closed.