funeral of Minister Umesh Katti : ದೀಕ್ಷೆ ಪಡೆದಿದ್ದ ಉಮೇಶ್​ ಕತ್ತಿ ಅಂತ್ಯಕ್ರಿಯೆ ವೇಳೆ ನಡೆಯಲಿದೆ ಈ ಎಲ್ಲ ಶಾಸ್ತ್ರ : ನಿಡಸೋಸಿ ಸ್ವಾಮೀಜಿ ಮಾಹಿತಿ

ಬೆಳಗಾವಿ : funeral of Minister Umesh Katti : ನಿನ್ನೆ ಹೃದಯಾಘಾತದಿಂದ ಮೃತಪಟ್ಟ ಸಚಿವ ಉಮೇಶ್​ ಕತ್ತಿ ಅಂತಿಮ ದರ್ಶನವನ್ನು ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಇಲ್ಲಿಂದ ಉಮೇಶ್​ ಕತ್ತಿ ಪಾರ್ಥಿವ ಶರೀರ ಅವರ ನಿವಾಸದ ಕಡೆಗೆ ತೆರಳಿದ್ದು ಇಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ನಡೆಯಲಿದೆ. ಇಲ್ಲಿಂದ ಉಮೇಶ್​ ಕತ್ತಿ ತೋಟದ ಮನೆಯಲ್ಲಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.


ಸಚಿವ ಉಮೇಶ್​ ಕತ್ತಿಯನ್ನು ಸಮಾಧಿ ಮಾಡುವ ಸ್ಥಳಕ್ಕೆ ನಿಡಸೋಶಿ ಶ್ರೀಗಳು ಖುದ್ದಾಗಿ ಭೇಟಿ ನೀಡಿದ್ದಾರೆ. ಸಮಾಧಿ ಗುಂಡಿಯನ್ನು ಅವರ ತಂದೆ ತಾಯಿ ಸಮಾಧಿಗೆ ಸರಿಯಾಗಿ ಬರುವಂತೆ ಟೇಪ್​​ನಲ್ಲಿ ಅಳತೆ ಮಾಡಲಾಗಿದ್ದು ಶ್ರೀಗಳ ನೇತೃತ್ವದಲ್ಲಿ ಗುಂಡಿಯನ್ನು ತೋಡಲಾಗಿದೆ. ಇಟ್ಟಿಗೆ ಹಾಗೂ ಸಿಮೆಂಟ್​​ನಿಂದ ಸಮಾಧಿ ಗುಂಡಿಯನ್ನು ನಿರ್ಮಾಣ ಮಾಡಲಾಗಿದೆ.


ಬೆಳಗ್ಗೆ ಉಮೇಶ್​ ಕತ್ತಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಲು ಗುಂಡಿ ತೋಡಲು ಮುಂದಾದ ಸಂದರ್ಭದಲ್ಲಿ ಕೆಲಸಗಾರರಿಗೆ ತೀವ್ರ ಕಷ್ಟ ಎದುರಾಗಿದೆ. ಗುಂಡಿ ತಡೆದಷ್ಟು ಅಂತರ್ಜಲದ ಸೆಲೆ ಉಕ್ಕಿದ್ದು ಗುಂಡಿ ತೋಡಲು ಕಷ್ಟವಾಗಿದೆ. ಜಮೀನು ಹೆಚ್ಚು ಫಲವತ್ತಾಗಿದ್ದ ಹಿನ್ನೆಲೆಯಲ್ಲಿ ನೀರು ಜಿನುಗಲು ಆರಂಭಿಸಿದೆ. 9 ಅಡಿ ಉದ್ದ ಹಾಗೂ 7 ಅಡಿ ಆಳಕ್ಕೆ ಸಮಾಧಿಯನ್ನು ತೋಡಲಾಗಿದೆ.


ಬೆಲ್ಲದ ಬಾಗೇವಾಡಿಯ ಸಚಿವ ಉಮೇಶ್​ ಕತ್ತಿ ತೋಟದ ಮನೆಯಲ್ಲಿ ಅವರ ತಂದೆ ತಾಯಿ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಮಹಾ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ.

ಅಂತ್ಯಕ್ರಿಯೆಗೆ ನಿಗದಿ ಮಾಡಲಾದ ಸ್ಥಳದಲ್ಲಿ ಸ್ವಾಮೀಜಿಗಳ ಪಾದಪೂಜೆಯನ್ನು ಮಾಡಿ ಬಳಿಕ ಭೂಮಿ ಪೂಜೆ ಮಾಡಲಾಗಿದೆ. ಉಮೇಶ್​ ಕತ್ತಿ ಅಂತ್ಯಕ್ರಿಯೆ ಕುರಿತಂತೆ ನಿಡಸೋಸಿ ಸ್ವಾಮೀಜಿಗಳು ಕೆಲ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಉಮೇಶ್ ಕತ್ತಿಯವರು ದೀಕ್ಷೆಯನ್ನು ಪಡೆದಿದ್ದಾರೆ ಹೀಗಾಗಿ ಅವರ ಅಂತ್ಯಸಂಸ್ಕಾರದಲ್ಲಿ ಹಲವಾರು ಆಚರಣೆಗಳನ್ನು ಮಾಡಬೇಕು.ಅವರ ಮರಣರ ನಂತರ ಪಾದದ ಅಳತೆಯನ್ನು ತೆಗೆದುಕೊಂಡು ಅದರ ಅಳತೆಯಂತೆ ಗುಂಡಿ ತೆಗೆಯಲಾಗಿದೆ.ಮೃಹದೇಹಕ್ಕೆ ನವ ಧ್ಯಾನ, ನವಚಕ್ರ ಪೂಜೆಯನ್ನು ಮಾಡಲಾಗುತ್ತದೆ.ಇದಾದ ಮೇಲೆ ಗುಂಡಿಯ ಮಧ್ಯ ಭಾಗದಲ್ಲಿ ಪಾರ್ಥಿವ ಶರೀರವನ್ನಿರಿಸಿ ಮತ್ತೆ ಪೂಜೆ ‌ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ : umesh katti : ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಆದೇಶ ಹೊರಡಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : bjp janostava postpone : ಉಮೇಶ್​ ಕತ್ತಿ ನಿಧನ : ಬಿಜೆಪಿ ಜನೋತ್ಸವ ಕಾರ್ಯಕ್ರಮ ಸೆ.11ಕ್ಕೆ ಮುಂದೂಡಿಕೆ

Information about the funeral of Minister Umesh Katti

Comments are closed.