Onam 2022 : ಕೇರಳದ ಜನಪ್ರಿಯ ಸುಗ್ಗಿ ಹಬ್ಬ ಓಣಂ : ಏನಿದರ ವಿಶೇಷತೆ ?

ಕೇರಳದ ಪ್ರಮುಖ ಹಬ್ಬವಾದ ಓಣಂ (Onam 2022), ಭಗವಾನ್‌ ವಿಷ್ಣುವಿನ ವಾಮನ ಅವತಾರ ಮತ್ತು ರಾಜ ಮಹಾಬಲಿಯ ಪುನರಾಗಮನವನ್ನು ಗೌರವಿಸುವ ಆಚರಣೆಯಾಗಿದೆ. 10 ದಿನಗಳ ಕಾಲ ಆಚರಿಸುವ ಓಣಂ ಅಥಮ್‌ನಿಂದ ಪ್ರಾರಂಭವಾಗುತ್ತದೆ. ಇದು ಮಹಾಬಲಿ ಹಿಂದಿರುಗುವ ಹಿಂದಿನ ದಿನ ಈ ಅಥಮ್‌ ಆಗಸ್ಟ್‌ 30 ರಂದು ಆಚರಿಸಲ್ಪಟ್ಟಿತ್ತು. ಈ ವರ್ಷ ತಿರುವೋಣಂ ಅನ್ನು ಸೆಪ್ಟೆಂಬರ್‌ 8 ರಂದು ಆಚರಿಸಲಾಗುತ್ತಿದೆ.

ಓಣಂ ಹಬ್ಬವು ಮಲಯಾಳಂ ಕ್ಯಾಲೆಂಡರ್‌ನ ಚಿಂಗಂ ತಿಂಗಳಲ್ಲಿ ಬರುವ ಸುಗ್ಗಿಯ ಹಬ್ಬವಾಗಿದೆ. ಅಸುರ ರಾಜ ಮಹಾಬಲಿ. ಅವನ ಆಳ್ವಿಕೆಯಲ್ಲಿ ಭೂಮಿಯು ಸಮೃದ್ಧವಾಗಿದ್ದು, ಎಲ್ಲೆಡೆ ಸುಖ ಶಾಂತಿ ನೆಲೆಸಿತ್ತು. ಎಲ್ಲಾ ಜನರನ್ನು ಸಮಾನವಾಗಿ ಪರಿಗಣಿಸಲಾಗುತ್ತಿತ್ತು. ವಿಷ್ಣು ತನ್ನ ಆರನೇ ಅವತಾರದಲ್ಲಿ ವಾಮನ ರೂಪ ತಾಳಿ ಮಹಾಬಲಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದನು. ಆದರೆ ರಾಜನು ತನ್ನ ಪ್ರೀತಿಯ ಪ್ರಜೆಗಳನ್ನು ವರ್ಷಕ್ಕೊಮ್ಮೆ ಭೇಟಿಯಾಗುವ ಕೋರಿಕೆ ಇಟ್ಟನು. ಅದರ ಪ್ರಕಾರ ಮಹಾಬಲಿಯು ಭೇಟಿ ನೀಡುವ ಸಮಯವೇ ಓಣಂ ಎಂದು ಕೇರಳದ ಜನರು ನಂಬುತ್ತಾರೆ ಮತ್ತು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.

ಓಣಂನ ಅತ್ಯಂತ ಪ್ರಮುಖ ದಿನವಾದ ತಿರುವೋಣಂ ಅನ್ನು ಮಲಯಾಳಿಗಳು ಬೆಳಿಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡುವುದರ ಮೂಲಕ ಆಚರಿಸಲು ಪ್ರಾರಂಭಿಸುತ್ತಾರೆ. ಚಂದದ ರಂಗೋಲಿಗಳಿಂದ ಮನೆಯನ್ನು ಸಿಂಗರಿಸುತ್ತಾರೆ. ಹೊಸ ಬಟ್ಟೆ ಧರಿಸಿ, ರುಚಿಯಾದ ಬಗಬಗೆಯ ಅಡುಗೆ ಮಾಡಿ, ಭವ್ಯವಾದ ಬಾಳೆಎಲೆಯ ಔತಣ ನೀಡುತ್ತಾರೆ. ಈ ಹಬ್ಬದ ಇನ್ನೊಂದು ಪ್ರಮುಖ ವಿಶೇಷವೆಂದರೆ ಬೋಟ್‌ ರೇಸ್‌. ಇದನ್ನು ನೋಡಲೆಂದೇ ವಿಶ್ವದ ನಾನಾ ಭಾಗಗಳಿಂದ ಜನರು ಬರುತ್ತಾರೆ. ಆನೆಯ ಮೆರವಣಿಗೆ ಈ ಹಬ್ಬದ ಇನ್ನೊಂದು ಆಕರ್ಷಣೆ. ಆನೆಗಳಿಗೆ ವಿಶೇಷವಾದ ಅಲಂಕಾರ ಮಾಡಿ ಮೆರವಣಿಗೆ ಮಾಡುತ್ತಾರೆ.

ಇದನ್ನೂ ಓದಿ : Anjeer Benefits : ಅಂಜೂರ : ಈ ಒಣ ಹಣ್ಣು ನಿಮ್ಮ ದೇಹದ ತೂಕ ಕಾಪಾಡಲು ಬಹಳ ಪ್ರಯೋಜನಕಾರಿ

ಇದನ್ನೂ ಓದಿ : Hop OXO : ಭಾರತದಲ್ಲಿ ಬಿಡುಗಡೆಯಾದ ಹಾಪ್‌OXO ಎಲೆಕ್ಟ್ರಿಕಲ್‌ ಮೋಟಾರ್‌ಸೈಕಲ್‌ : ಫುಲ್‌ ಚಾರ್ಜ್‌ ಮಾಡಲು ಸಾಕು ಕೇವಲ 4 ಗಂಟೆ

ಇದನ್ನೂ ಓದಿ : Teacher recruitment scam : ಸಿದ್ಧರಾಮಯ್ಯ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಹಗರಣ : 11 ಶಿಕ್ಷಕರನ್ನು ವಶಕ್ಕೆ ಪಡೆದ ಸಿಐಡಿ

(Onam 2022 Kerala’s traditional harvest festival)

Comments are closed.