IT Raid in Karnataka : ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆಯೇ ಐಟಿ ದಾಳಿ : 600 ಅಧಿಕಾರಿಗಳಿಂದ ಪರಿಶೀಲನೆ

ಬೆಂಗಳೂರು : ರಾಜ್ಯದಲ್ಲಿ ಬೆಳಂಬೆಳಗ್ಗೆಯೇ ಐಟಿ ಅಧಿಕಾರಿಗಳು ( IT Raid in Karnataka) ದಾಳಿ ನಡೆಸಿದ್ದಾರೆ. ರಾಜ್ಯದ ಸುಮಾರು 30 ಕಡೆಗಳಲ್ಲಿ 600 ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಗೋವಾ ಹಾಗೂ ಕರ್ನಾಟಕ ವಿಭಾಗದ ಐಟಿ ಅಧಿಕಾರಿಗಳ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ನಾಲ್ವರು ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಎಂಬೆಸ್ಸಿ ಅಪಾರ್ಟ್‌ಮೆಂಟ್‌ನ ೬೦೨ ಮನೆಯ ಮೇಲೆ ದಾಳಿಯನ್ನು ನಡೆಸಲಾಗಿದೆ. ಈ ಮನೆ ಉದ್ಯಮಿ ನರಪತ್‌ ಸಿಂಗ್‌ ಚರೋಡಿ ಎಂಬವರಿಗೆ ಸೇರಿದ್ದಾಗಿದೆ. ನಾಲ್ವರು ಅಧಿಕಾರಿಗಳ ತಂಡದಿಂದ ಮನೆಯಲ್ಲಿ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಈ ವೇಳೆಯಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಆದಾಯ ಮರೆಮಾಚಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವುದನನು ಪತ್ತೆ ಮಾಡಿ ದಾಳಿ ನಡೆಸಲಾಗಿದೆ. ಮನೆಗಳ ಮೇಲೆ ಸರ್ಚ್ ವಾರೆಂಟ್ ತಂದು ದಾಳಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಸದಾಶಿವನಗರ, ಜಿಗಣಿ, ಮಾರತ್ ಹಳ್ಳಿ, ಕನ್ನಿಂಗ್ ಹ್ಯಾಮ್‌ ರಸ್ತೆ ಸೇರಿದಂತೆ ಅನೇಕ‌ ಕಡೆ ದಾಳಿ ನಡೆಸಲಾಗಿದೆ. ಈಗಾಗಲೇ ಲೆಕ್ಕ ಪತ್ರಗಳ ಶೋಧನೆಯನ್ನು ಐಟಿ ಅಧಿಕಾರಿಗಳು ನಡೆಸಿದ್ದಾರೆ.

ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

IT Raid in Karnataka 600 Officers

Comments are closed.