Chocolate Face Mask : ಸೌಂದರ್ಯವನ್ನು ವೃದ್ದಿಸುತ್ತೆ ಚಾಕೋಲೆಟ್ ಫೇಸ್‌ ಮಾಸ್ಕ್‌

ಚಾಕೋಲೆಟ್‌ ಅಂದ್ರೆ ಹೆಣ್ಣು ಮಕ್ಕಳು ಬಹುವಾಗಿ ಇಷ್ಟ ಪಡ್ತಾರೆ. ಆದರೆ ಚಾಕೋಲೆಟ್‌ ಕೇವಲ ತಿನ್ನೋದಕ್ಕೆ ಮಾತ್ರವಲ್ಲ ಸೌಂದರ್ಯ ವೃದ್ದಿಸಲು ಉಪಯೋಗಿಸುತ್ತಾರೆ. ಹೌದು ಚಾಕೋಲೆಟ್ ಅನ್ನು ಫೇಸ್‌ ಮಾಸ್ಕ್‌ (Chocolate Face Mask) ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಅದರ ಜೊತೆಗೆ ಮುಖ ಫ್ರೇಶ್‌ ಆಗಿ ಕಾಣಿತ್ತದೆ. ಈ ಚೋಕಲೇಟ್‌ ಫೇಸ್‌ ಮಾಸ್ಕ್‌ ಅನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.

ಚೋಕಲೇಟ್‌ ಫೇಸ್‌ ಮಾಸ್ಕ್‌ (Chocolate Face Mask) ತಯಾರಿಸಲು ಬೇಕಾಗುವ ಸಾಮಾಗ್ರಿಗಳು : 4 ಪೀಸ್‌ ಚೋಕಲೇಟ್‌ (ಡಾರ್ಕ್‌ ಚೋಕಲೇಟ್‌ ಆದ್ರೇ ಉತ್ತಮ), ಯಾವುದೇ ರೀತಿಯ ಆಲವೇರ ಜಲ್‌, ಅರಶಿನ ಪೌಡರ್‌ ಇಷ್ಟನ್ನು ಮೋದಲಿಗೆ ರೆಡಿಮಾಡಿ ಇಟ್ಟು ಕೊಳ್ಳಿ.

ಇದನ್ನೂ ಓದಿ: ಇನ್ನೇನು ಶುರುವಾಯ್ತು ಚಳಿಗಾಲ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ

ಚೋಕಲೇಟ್‌ ಫೇಸ್‌ ಮಾಸ್ಕ್‌ (Chocolate Face Mask) ತಯಾರಿಸುವ ವಿಧಾನ

ಮೊದಲಿಗೆ ಚೋಕಲೇಟ್‌ ಅನ್ನು ಮೆಲ್ಟ್‌ ಮಾಡಿಕೊಳ್ಳ ಬೇಕು. ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರು ಇಟ್ಟುಕೊಂಡು ನಂತರ ಆ ಬಿಸಿನೀರಿನ ಮೇಲೆ ಚೋಕಲೇಟ್‌ ಬೌಲ್‌ ಅನ್ನು ಇಡಬೇಕು ಆ ನೀರಿನ ಟ್ಸೀಮ್‌ ಅಲ್ಲಿ ಚೋಕಲೇಟ್‌ ಮೆಲ್ಟ್‌ ಆಗಬೇಕು. ಡೈರೆಕ್ಟ್‌ ಆಗಿ ಸ್ಟಾವ್‌ ಮೇಲೆನ ಇಡಬಾರದು.

ಚೋಕಲೇಟ್‌ ಮೆಲ್ಟ್‌ ಆದ ನಂತರ ಅದಕ್ಕೆ 1 ಟೇಬಲ್‌ ಸ್ಪೂನ್‌ ಅಲುವೇರ ಜಲ್‌ ಹಾಕಿ ನಂತರ 1 ಟೇಬಲ್‌ ಸ್ಪೂನ್‌ ಅರಶಿನ ಹಾಕಿ ಕೊಂಡು 3 ಅನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಇದನ್ನು ಮುಖ ಪೂರ್ತಿ ಕ್ಲೀನ್‌ ಆಗಿ ಹಚ್ಚಿಕೊಳ್ಳಬೇಕು. ನಂತರ ಇದನ್ನು 20 ನಿಮಿಷ ಬಿಟ್ಟು ಮುಖವನ್ನು ತೋಳೆದುಕೊಳ್ಳಿ.

ಇದನ್ನೂ ಓದಿ: Beauty tips : ಮೃದುವಾದ, ಕೆಂಪಾದ ಸುಂದರ ತುಟಿ ನಿಮ್ಮದಾಗಬೇಕಾ ? ಈ ಟಿಪ್ಸ್‌ ಫಾಲೋ ಮಾಡಿ

ಚೋಕಲೇಟ್‌ ಫೇಸ್‌ ಮಾಸ್ಕ್‌ ಅನ್ನು ತೊಳೆಯುವಾಗ ಮುಖವನ್ನು ಯಾವುದೇ ರೀತಿಯಾ ಫೇಸ್‌ ವಾಶ್‌ ಆಗಲಿ ಸೋಪ್‌ ನಿಂದ ಆಗಲಿ ತೊಳೆಯಬೇಡಿ. ಬರಿ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಅಲ್ಲದೇ ಡ್ರೈ ಸ್ಕಿನ್‌ ಇರುವವರು ಈ ಚೋಕಲೇಟ್‌ ಫೇಸ್‌ ಮಾಸ್ಕ್‌ ಉಪಯೋಗಿಸಿದರೆ ಸ್ಕಿನ್‌ ಮೃದುವಾಗಿ ಸುಂದರವಾಗಿ ಕಾಣುತ್ತದೆ.

(Chocolate Face Mask To Enhance Beauty)

Comments are closed.