Jenavac JE vaccine: ಮೆದುಳು ಜ್ವರ ಲಸಿಕೆ ಪಡೆದ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮಧುಗಿರಿ: (Jenavac JE vaccine) ಜೆನವ್ಯಾಕ್‌ ಜೆಇ ಲಸಿಕೆ ವಿತರಣಾ ಅಭಿಯಾನದ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುತ್ತಿದ್ದು, ಮೆದುಳು ಜ್ವರ ಲಸಿಕೆ ಪಡೆದ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಕೋಲಾರದ ಮಧುಗಿರಿ ಶಾಲೆಯೊಂದರಲ್ಲಿ ನಡೆದಿದೆ.

ಮಕ್ಕಳಲ್ಲಿ ಹರಡುತ್ತಿರುವ ಮೆದುಳು ಜ್ವರ (Jenavac JE vaccine) ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯು ಒಂದರಿಂದ ಹದಿನೈದು ವರ್ಷದೊಳಗಿನ ಮಕ್ಕಳಿಗೆ ಜೆನವ್ಯಾಕ್‌ ಜೆಇ ಲಸಿಕೆ ವಿತರಣಾ ಅಭಿಯಾನವನ್ನು ಸೋಮವಾರದಿಂದ ಹಮ್ಮಿಕೊಂಡಿದೆ. ಸೋಮವಾರದಿಂದ ಲಸಿಕಾ ವಿತರಣಾ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲಾ ಶಾಲೆಗಳಲ್ಲಿ ಅಭಿಯಾನಗಳು ನಡೆಯುತ್ತಿದೆ. ಇದೇ ರೀತಿ ಮಧುಗಿರಿಯ ಎಮ್‌ ಜಿ ಎಮ್‌ ಶಾಲೆಯ ಮಕ್ಕಳಿಗೂ ಮೆದುಳು ಜ್ವರದ ಲಸಿಕೆ ನೀಡಲಾಗಿತ್ತು.

ಆದರೆ ಲಸಿಕೆ ನೀಡಿದ ಕೆಲವೇ ಸಮಯಗಳಲ್ಲಿ ಲಸಿಕೆ ಪಡೆದ ಒಂಬತ್ತು ಮಕ್ಕಳು ಅಸ್ವಸ್ಥರಾಗಿದ್ದು, ಮಕ್ಕಳನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರದ ಮಧುಗಿರಿ ಆಸ್ಪತ್ರೆಯಲ್ಲಿ ಅಸ್ವಸ್ಥರಾಗಿರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಡಿಸೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದ್ದು, ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್ ಎನ್‍ಸೆಫಲೈಟಿಸ್ ಪಿಡುಗು ಗುರುತಿಸಲಾಗಿದೆ.

ಇದನ್ನೂ ಓದಿ : Stunt Master death: ಸಿನಿಮಾ ಶೂಟಿಂಗ್ ವೇಳೆ ಮತ್ತೊಂದು ದುರಂತ; ಕ್ರೇನ್ ನಿಂದ 20 ಅಡಿ ಕೆಳಗೆ ಬಿದ್ದು ಸಾಹಸ ನಿರ್ದೇಶಕ ದುರ್ಮರಣ

ಇದನ್ನೂ ಓದಿ : Mumbai Crime news: ವಿಕೃತಿ ಮೆರೆದ ಕಾಮುಕರು: ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

(Jenavac JE vaccine) In the background of the Jenavac JE vaccine distribution campaign, children are being vaccinated in schools, and an incident has taken place in a Madhugiri school in Kolar where the children who received the brain fever vaccine are sick.

Comments are closed.