Kranti Movie Dharani Song Release : ಕ್ರಾಂತಿ ಸಿನಿಮಾದ “ಧರಣಿ” ಹಾಡಿನ ಸೀಕ್ರೆಟ್‌ ಬಿಚ್ಚಿಟ್ಟ ದರ್ಶನ್‌ ತೂಗುದೀಪ್

ಸ್ಯಾಂಡಲ್‌ವುಡ್‌ ಈ ವರ್ಷ ಸ್ಟಾರ್‌ ನಟರಾದ ಯಶ್‌, ರಕ್ಷಿತ್‌ ಶೆಟ್ಟಿ, ಪುನೀತ್‌ ರಾಜ್‌ಕುಮಾರ್‌, ಕಿಚ್ಚ ಸುದೀಪ್‌ ಶಿವರಾಜ್‌ಕುಮಾರ್‌ ಹಾಗೂ ರಿಷಬ್‌ ಶೆಟ್ಟಿ ಅಭಿನಯದ ಸಿನಿಮಾಗಳು ತೆರೆ ಕಂಡಿದ್ದು, ಸಿನಿಪ್ರೇಕ್ಷರರು ಈ ಎಲ್ಲಾ ಸ್ಟಾರ್‌ ನಟ (Darshan Thoogudeepa) ಸಿನಿಮಾಗಳನ್ನು ಸಿನಿಮಂದಿರದಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗೆ ಕನ್ನಡ ಚಿತ್ರರಂಗದ ಹೆಚ್ಚಿನ ನಟರ ಸಿನಿಮಾ ಈ ವರ್ಷ ಬಿಡುಗಡೆಯಾಗಿದ್ದು, ಸಿನಿರಂಗದ ಪ್ರಮುಖ ಪಿಲ್ಲರ್‌ಗಳಲ್ಲಿ ಒಬ್ಬರಾದ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಸಿನಿಮಾ ಮಾತ್ರ ತೆರೆ ಕಾಣದಿರುವುದು ಕೊಂಚ ಬೇಸರದ ಸಂಗತಿಯಾಗಿದೆ.

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ (Darshan Thoogudeepa) ದರ್ಶನ್‌ ಹಾಗೂ ವಿ. ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಮೂಡಿಬಂದ ಕ್ರಾಂತಿ ಸಿನಿಮಾ ಈ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತವೇ ಸಿನಿಮಂದಿರಗಳಿಗೆ ಲಗ್ಗೆ ಇಡಬೇಕಿತ್ತು. ಆದರೆ ಈ ಸಿನಿಮಾದ ಕೆಲಸಗಳು ಬಾಕಿ ಉಳಿದಿದ್ದ ಕಾರಣ ಈ ವರ್ಷ ಕ್ರಾಂತಿ ಸಿನಿಮಾ ತೆರೆ ಮೇಲೆ ಕಾಣುವ ಅವಕಾಶ ಇರುವುದಿಲ್ಲ. ಈ ಸಿನಿಮಾ ಮುಂಬುರುವ ಜನವರಿ ತಿಂಗಳಲ್ಲಿ ಗಣ ರಾಜ್ಯೋತ್ಸವದ ಪ್ರಯುಕ್ತ ತೆರೆ ಕಾಣಲಿದೆ.

“ಕಾಂತ್ರಿ” ಸಿನಿಮಾದ ಬಿಡುಗಡೆ ದಿನಾಂಕ ಹತ್ತಿವಾಗುತ್ತಿರುವ ಹಿನ್ನಲೆಯಲ್ಲಿ ಸಿನಿತಂಡ ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದು, ಸಿನಿಮಾದ ಮೊದಲ ಹಾಡು ಬಿಡುಗಡೆಗೊಳ್ಳುವ ಡೇಟ್‌ನ್ನು ಸಹ ಘೋಷಿಸಿದೆ. ಕಾಂತ್ರಿ ಸಿನಿಮಾದ “ಧರಣಿ” ಎಂಬ ಥೀಮ್‌ ಸಾಂಗ್‌ನ್ನು ಇದೇ ಡಿಸೆಂಬರ್‌ ೧೦ರಂದು ಬಿಡುಗಡೆ ಮಾಡುವುದಾಗಿ ಸಿನಿತಂಡ ಘೋಷಿಸಿದ್ದು, ಸದ್ಯ ಎಲ್ಲರ ಗಮನ ಈ ಹಾಡಿನ ಮೇಲೆ ಇದೆ. ಈ ಸಿನಿಮಾದ ಟೀಸರ್‌ ಹೊರತುಪಡಿಸಿ ಬೇರೆ ಯಾವ ಅಂಶವನ್ನು ಹಂಚಿಕೊಳ್ಳದ ಸಿನಿತಂಡ ಈ ಸಿನಿಮಾದ ಈ ಹಾಡು ಹೇಗೆ ಇದೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ.

ಕಾಂತ್ರಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿರುವ ನಟ ದರ್ಶನ್‌ ಯುಟ್ಯೂಬ್‌ ಚಾನೆಲ್‌ ಒಂದು ನಡೆಸಿದ ಸಂದರ್ಶನವೊಂದರಲ್ಲಿ “ಧರಣಿ” ಹಾಡಿನ ಬಗ್ಗೆ ತಿಳಿಸಿದ್ದಾರೆ.” ಕ್ರಾಂತಿ ಸಿನಿಮಾದ ಧರಣಿ ಹಾಡಿನಲ್ಲಿ ಸ್ನೇಹದ ಬಗ್ಗೆ ಹೇಳುತ್ತೇವೆ. ಹಾಗೂ ಸರಕಾರಿ ಶಾಲೆಗಳ ವಿಶೇಷತೆ ಏನು ಹಾಗೂ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳುತ್ತೇವೆ. ಒಟ್ಟಿನಲ್ಲಿ ಗೂಸ್‌ಬಂಪ್ಸ್‌ ಬರುವಂತಹ ಹಾಡು ಇದು ಆಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Rishab Shetty visits Anegudde: ಆನೆಗುಡ್ಡೆಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ದಂಪತಿ: ವಿನಾಯಕನ ಸನ್ನಿಧಾನದಲ್ಲಿ ವಿಶೇಷ ಪೂಜೆ

ಇದನ್ನೂ ಓದಿ : Stunt Master death: ಸಿನಿಮಾ ಶೂಟಿಂಗ್ ವೇಳೆ ಮತ್ತೊಂದು ದುರಂತ; ಕ್ರೇನ್ ನಿಂದ 20 ಅಡಿ ಕೆಳಗೆ ಬಿದ್ದು ಸಾಹಸ ನಿರ್ದೇಶಕ ದುರ್ಮರಣ

ಇದನ್ನೂ ಓದಿ : Hansika Motwani-Sohael Khaturiya Wedding : ಹನ್ಸಿಕಾ ಸೊಹೈಲ್‌ ಕಥುರಿಯಾ ವಿವಾಹ ಸಂಭ್ರಮ : ದಂಪತಿಗಳ ಮೊದಲ ಫೋಟೋ ವೈರಲ್

ಕ್ರಾಂತಿ ಸಿನಿಮಾದ ಈ ಹಾಡನ್ನು ಡಿಸೆಂಬರ್‌ ೧೦ರಂದು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿನಿತಂಡ ತಿಳಿಸಿದೆ. ಈ ಹಾಡ್ನು ವಿ. ಹರಿಕೃಷ್ಣ ಸಾರಥ್ಯದಲ್ಲಿ “ಡಿ ಬೀಟ್ಸ್‌ ಮ್ಯೂಸಿಕ್”‌ ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿತಂಡ ಈಗಾಗಲೇ ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಘೋಷಿಸಿಗೊಂಡಿದ್ದು, ಸದ್ಯ ಬಿಡುಗಡೆಗೊಳ್ಳುವ ಹಾಡನ್ನು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡ್ತಾರಾ ಅಥವಾ ಇತರೆ ಭಾಷೆಗಳಲ್ಲಿ ಬಿಡುಗಡೆ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Kranti Movie Dharani Song Release: Darshan Thoogudeep revealed the secret of Kranti Movie Dharani song

Comments are closed.