Big Breaking : ಕರ್ನಾಟಕ ವಿಧಾನಸಭಾ ಚುನಾವಣೆ : ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಪ್ರಕಟ, ಯಾರಿಗೆಲ್ಲಾ ಟಿಕೆಟ್‌

ನವದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka assembly election 2023) ಸಂಬಂಧಿಸಿದಂತೆ ಬಿಜೆಪಿ ಕೊನೆಗೂ ತನ್ನ 189 ಅಭ್ಯರ್ಥಿಗಳ ಪಟ್ಟಿಯನ್ನು (BJP candidate list) ಪ್ರಕಟಿಸಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಮೊದಲ ಹಂತದಲ್ಲಿ ಒಟ್ಟು 189 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಉಳಿದ 35 ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಪ್ರಕಟಿಸಲಿದೆ.

೩೧ ಜಿಲ್ಲೆಗಳಲ್ಲಿನ ಒಟ್ಟು ೩೫ ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ, ಗ್ರಾಮ ಮಟ್ಟದ ಮುಖಂಡರ ಸಭೆಯನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೆಳ ಹಂತದ ಶಿಫಾರಸ್ಸುಗಳ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ನಾಲ್ಕೈದು ದಿನಗಳ ಕಾಲ ಬೆಂಗಳೂರಿನಲ್ಲಿ ಸಭೆಯನ್ನು ನಡೆಸಿ, ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಹಲವು ಅಳೆದು ತೂಗಿ ಅಭರ್ಥಿಗಳ ಆಯ್ಕೆ ಮಾಡಿದೆ. ಬಹುತೇಕ ಹಾಲಿ ಶಾಸಕರಿಗೆ ಈ ಬಾರಿ ಕೋಕ್‌ ನೀಡಲಾಗಿದೆ. ಇನ್ನು ಗುಜರಾತ್‌ ಮಾದರಿಯನ್ನೇ ಕರ್ನಾಟಕದಲ್ಲೂ ಜಾರಿಗೆ ತರಲಾಗಿದ್ದು, ಬಹುತೇಕ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ರಾಜ್ಯದಲ್ಲಿ ಒಟ್ಟು 52 ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಕಣಕ್ಕೆ ಇಳಿಸಲಾಗಿದೆ. ಹಿಂದುಳಿದ ವರ್ಗಕ್ಕೆ ೩32, ಎಸ್.ಸಿ. 30, ಎಸ್‌.ಟಿ 16 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. 9 ವೈದ್ಯರು, 1 ಐಎಎಸ್‌ ಹಾಗೂ 1 ಐಪಿಎಸ್‌ ಅಧಿಕಾರಿ, ಮೂವರು ಸರಕಾರಿ ಉದ್ಯೋಗಿಗಳು, 5 ವಕೀಲರು, 8ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಈ ಬಾರಿಯ ಚುನಾವಣೆಯಲ್ಲಿ ಅವಕಾಶ ನೀಡಲಾಗಿದೆ.

ವಿಧಾನಸಭಾ ಚುನಾವಣೆ ಘೋಷಣೆಯಾಗಿ ಹಲವು ದಿನಗಳು ಕಳೆದಿದ್ದರೂ ಕೂಡ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿತ್ತು. ಕೊನೆಗೂ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಂತೆಯೇ ಬಿಜೆಪಿ ಹೈಕಮಾಂಡ್‌ ಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆಗೆ ಮುನ್ನವೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಾವಣಗೆರೆಯ ಎಸ್.ಎ.ರವೀಂದ್ರನಾಥ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಚುನಾವಣಾ ಉಪ ಉಸ್ತುವಾರಿ ಅಣ್ಣಾಮಲೈ, ಮನ್ಸುಕ್‌ ಮಾಂಡವೀಯ ಉಪಸ್ಥಿತರಿದ್ದರು.

BJP candidate list : ಯಾರಿಗೆಲ್ಲಾ ಟಿಕೆಟ್‌ ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್‌ :

ಶಿಗ್ಗಾವಿ : ಬಸವರಾಜ್‌ ಬೊಮ್ಮಾಯಿ

Karnataka Election 2023 Congress 124 constituency ticket announced 1

ನಿಪ್ಪಾಣಿ : ಶಶಿಕಲಾ ಜೊಲ್ಲೆ

ಚಿಕ್ಕೋಡಿ : ಮಹೇಶ್ ಕತ್ತಿ

ಅಥಣಿ : ಮಹೇಶ್‌ ಕುಮಟಳ್ಳಿ

ಕುಡಚಿ : ಪಿ.ರಾಜೀವ್‌

ಕಾಗವಾಡ : ಶ್ರೀಮಂತ ಪಾಟೀಲ್

ರಾಯಭಾಗ್‌ : ಧುರ್ಯೋದನ ಐಹೊಳೆ

ಅರಭಾವಿ : ಬಾಲಚಂದ್ರ ಜಾರಕಿಹೊಳಿ

ಗೋಕಾಕ್‌ : ರಮೇಶ್‌ ಜಾರಕಿಹೊಳಿ

ಬಿಜಾಪುರ ನಗರ : ಬಸವನಗೌಡ ಪಾಟೀಲ್‌ ಯತ್ನಾಳ್‌

ಸಿಂಧಗಿ : ರಮೇಶ್‌ ಹೊಸನೂರ್‌

ಜೇವರ್ಗಿ : ಶಿವಾನಂದಗೋಳ ಪಾಟೀಲ್‌

ಸುರಪುರ : ರಾಜುಗೌಡ

ಮುಧೋಳ ; ಗೋವಿಂದ ಕಾರಜೋಳ

ಸವದತ್ತಿ : ರತ್ನಾ ಮಾಮನಿ

ಸಿಂದಗಿ ; ರಮೇಶ್‌ ಭೂಸನೂರ

ಕಲಬುರಗಿ ದಕ್ಷಿಣ : ‌

ಕಾರವಾರ : ರೂಪಾ ಸಂತೋಷ್‌ ನಾಯಕ್‌

ಶಿರಸಿ : ವಿಶ್ವೇಶ್ವರ ಹೆಗಡೆ

ಯಲ್ಲಾಪುರ : ಶಿವರಾಮ್‌ ಹೆಬ್ಬಾರ್‌

ರಾಣಿಬೆನ್ನೂರು : ಅರುಣ್‌ ಕುಮಾರ್‌ ಪೂಜಾರ್‌

ನರಗುಂದ : ಸಿಸಿ ಪಾಟೀಲ್‌

ರಾಮಚೂರು : ಶಿವರಾಜ್‌ ಪಾಟೀಲ್‌

ಕಂಪ್ಲಿ : ಸಿದ್ದಾರ್ಥ್‌ ಸಿಂಗ್‌

ಅಫ್ಜಲ್ ಫುರ್ – ಮಾಲಿಕಯ್ಯ ಗುತ್ತೇದಾರ್

ಜೇವರ್ಗಿ- ಶಿವಾನಂದ ಗೌಡ ಪಾಟೀಲ್

ಚಿತ್ರದುರ್ಗ : ತಿಪ್ಪಾರೆಡ್ಡಿ

ಹೊಸದುರ್ಗ : ಲಿಂಗಮೂರ್ತಿ

ಹೊನ್ನಾಳಿ : ಎಂ.ಪಿ.ರೇಣುಕಾಚಾರ್ಯ

Karnataka Election 2023 Congress 124 constituency ticket announced 1

ಕುಂದಾಪುರ : ಕಿರಣ್‌ ಕುಮಾರ್‌ ಕೊಡ್ಗಿ

ಉಡುಪಿ : ಯಶಪಾಲ್‌ ಸುವರ್ಣ

ಕಾಪು : ಗುರ್ಮೆ ಸುರೇಶ್‌ ಶೆಟ್ಟಿ

ಶೃಂಗೇರಿ : ಡಿ.ಎನ್.ಜೀವರಾಜ್‌

ಚಿಕ್ಕಮಗಳೂರು : ಸಿ.ಟಿ.ರವಿ

ಕಡೂರು : ಕೆ.ಎಸ್.ಪ್ರಕಾಶ್‌

ಕಾರ್ಕಳ : ಸುನಿಲ್‌ ಕುಮಾರ್‌

ಶಿಕಾರಿಪುರ : ಬಿ.ವೈ.ವಿಜಯೇಂದ್ರ

Karnataka Election 2023 Congress 124 constituency ticket announced 1

ತೀರ್ಥಹಳ್ಳಿ : ಆರಗ ಜ್ಞಾನೇಂದ್ರ

ಸಾಗರ : ಹರತಾಳು ಹಾಲಪ್ಪ

ಶಿವಮೊಗ್ಗ ಗ್ರಾಮೀಣ : ಅಶೋಕ್‌ ನಾಯ್ಕ

Karnataka Election 2023 Congress 124 constituency ticket announced 5

ಚಿಕ್ಕನಾಯಕನಹಳ್ಳಿ : ಮಾಧುಸ್ವಾಮಿ

Karnataka Election 2023 Congress 124 constituency ticket announced 1

ಇದನ್ನೂ ಓದಿ : Jagadish Shettar : ಚುನಾವಣಾ ಟಿಕೆಟ್‌ ಮಿಸ್‌, ಹೈಕಮಾಂಡ್‌ಗೆ ಸಡ್ಡು ಹೊಡೆದ ಜಗದೀಶ್‌ ಶೆಟ್ಟರ್‌

ಇದನ್ನೂ ಓದಿ : KS Eshwarappa retirement : ಚುನಾವಣಾ ರಾಜಕೀಯಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ

Comments are closed.