ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್‌ ಬ್ಲಾಕ್‌ ಮೇಲ್‌ : ರಮೇಶ್‌ ಜಾರಕಿಹೊಳಿ ಆರೋಪ

ಬೆಳಗಾವಿ : ಕರ್ನಾಟಕ ಚುನಾವಣೆಯ ಹೊತ್ತಲ್ಲೇ ಸಿಡಿ ವಿಚಾರ ಮತ್ತೊಮ್ಮೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಮಂಗಳವಾರ ರಾತ್ರಿ 12.30 ಕ್ಕೆ ಕರೆ ಮಾಡಿ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ (Ramesh Jarkiholi) ಅವರು ಗಂಭೀರ ಆರೋಪ ಮಾಡಿದ್ದಾರೆ.

ಗೋಕಾಕ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಯಾವುದೇ ಕಾರಣಕ್ಕೂ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ದ ಚುನಾವಣೆಯಲ್ಲಿ ಕೆಲಸ ಮಾಡದಂತೆ ಡಿಕೆ ಶಿವಕುಮಾರ್‌ ತನಗೆ ತಾಕೀತು ಮಾಡಿದ್ದಾರೆ. ಒಂದೊಮ್ಮೆ ಕೆಲಸ ಮಾಡಿದ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಬಿಡು ಮಗನೆ ನಾನು ಗಟ್ಟಿಯಾಗಿದ್ದೇನಿ. ಯಾವುದೇ ಕಾರಣಕ್ಕೂ ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಹಿಂದೆ ಸರಿಯುವುದಿಲ್ಲ ಎಂದ ಅವರು, ಬಿಜೆಪಿ ನನ್ನ ಮೇಲೆ ವಿಶ್ವಾಸ ಇಟ್ಟಿದೆ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ರಮೇಶ್‌ ಜಾರಕಿಹೊಳಿ (Ramesh Jarkiholi) ಆಗ್ರಹಿಸಿದ್ದಾರೆ.

ಡಿಕೆ ಶಿವಕುಮಾರ್‌ ದಯವಿಟ್ಟು ವಿಷಕನ್ಯೆಯಿಂದ ಹೊರಬರುವುದು ಬಹಳ ಒಳಿತು. ಡಿಕೆ ಶಿವಕುಮಾರ್‌ (DK Shivakumar) ಮೊದಲು ಒಳ್ಳೆಯವನಿದ್ದ. ಆದೆ ಈಗ ಯಾಕೆ ಹೀಗೆ ಮಾಡುತ್ತಿದ್ದಾನೆ ಎಂದು ನನಗೆ ಗೊತ್ತಿಲ್ಲ. ವಿಷಕನ್ಯೆಯಿಂದ ಹೊರಗೆ ಬಾರದೇ ಇದ್ರೆ ಅವನು ಅಂತ್ಯವಾಗುತ್ತಾನ. ಡಿಕೆ ಶಿವಕುಮಾರ್‌ ಈಗ ಮಾತ್ರವಲ್ಲ ಮುಂದೆ ಸಂಪುಟ ರಚನೆಯ ವೇಳೆಯಲ್ಲಿಯೂ ತನಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಾನೆ. ಹೀಗಾಗಿ ಒಂದು ತಿಂಗಳ ಅವಧಿಯಲ್ಲಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನೊಂದೆಡೆಯಲ್ಲಿ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿರುಗೇಟು ನೀಡಿದ್ದಾರೆ. ರಮೇಶ್‌ ಜಾರಕಿಹೊಳಿ ಅವರಿಗೆ ತಲೆ ಕೆಟ್ಟಿದೆ. ಉದ್ದಟತನ ಬಿಟ್ಟು ಮರ್ಯಾದೆಯಿಂದ ಮಾತನಾಡಬೇಕು. ಬೆಳಗಾವಿ, ಗೋಕಾಕ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಕಾಂಗ್ರೆಸ್‌ ಗೆಲ್ಲುತ್ತೆ ಅಂತಾ ಹುಟ್ಟು ಹಿಡಿದವರ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್‌ ಅವರು ರಮೇಶ್‌ ಜಾರಕಿಹೊಳಿ ಅವರಿಗೆ ಕರೆ ಮಾಡಿದ್ದೇ ಆದ್ರೆ ಸ್ಕ್ರೀನ್‌ ಶಾಟ್‌ ಅಥವಾ ಕಾಲ್‌ ರೆಕಾರ್ಡ್‌ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಕಾರಿನ ಮೇಲೆ ಕಲ್ಲು ತೂರಾಟ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : Karnataka exit poll 2023 : ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ? ಯಾವ ಪಕ್ಷಕ್ಕೆ ಅಧಿಕಾರ ?

Ramesh Jarkiholi DK Shivakumar : Karnataka Assembly Election 2023 Ramesh Jarkiholi Claims Threatened By DK Shivakumar About CD Release

Comments are closed.