ಕರಾವಳಿಯಲ್ಲಿ ವರುಣನ ಆರ್ಭಟ : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಹಲವೆಡೆ ನಿನ್ನೆ ಸಂಜೆಯ ವೇಳೆಗೆ ಗುಡುಗು ಮಿಂಚಿನೊಂದಿಗೆ ಭಾರೀ ಮಳೆ (Karnataka Rains) ಸುರಿದಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿ ಜನರಿಗೆ ಮಳೆ ತಂಪೆರೆದಿದೆ. ಕರ್ನಾಟಕ ಕರಾವಳಿಯ ಹಲವೆಡೆ ಮಳೆ ಸುರಿದಿರುವುದರಿಂದ ಕರಾವಳಿಗರು ಸಂತಸಗೊಂಡಿದ್ದಾರೆ. ರೈತರು ಬಿತ್ತನೆ ಕಾರ್ಯವನ್ನು ಆರಂಭಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತದ ಪರಿಣಾಮ ರಾಜ್ಯದ ಹಲವೆಡೆ ಸೈಕ್ಲೋನ್‌ ಭೀತಿ ಕೂಡ ಕಾಡುತ್ತಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

Karnataka Rains : ಎಲ್ಲೆಲ್ಲಿ ಮಳೆಯಾಗಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮತ್ತು ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳಬಾಡಿನ ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ರಾಣೆಬೆನ್ನೂರು, ಹಳಿಯಾಳ, ಆಳಂದ, ಬಾಳೆಹೊನ್ನೂರು, ಶಿವನಿ, ಎನ್‌ಆರ್‌ಪುರ, ಚನ್ನರಾಯಪಟ್ಟಣ, ಹುಂಚದಕಟ್ಟೆ, ಟಿ ನರಸೀಪುರ, ಮಂಠಾಳ, ಶಿಗ್ಗಾಂವ್, ರಬಕವಿ, ಭಾಲ್ಕಿ, ಅಣ್ಣಿಗೆರೆ, ಚಿಕ್ಕಮಗಳೂರು, ಕೊಳ್ಳೇಗಾಲ, ಭಾಗಮಂಡಲ, ಲಕ್ಷ್ಮೇಶ್ವರ, ಗದಗ, ಕಳಸ, ಅಜ್ಜಂಪುರ, ಆನವಟ್ಟಿ, ಪೊನ್ನಂಪೇಟೆ, ಬೆಳ್ಳೂರು, ತಿಪಟೂರು, ಬಂಡೀಪುರ, ಶಿವಮೊಗ್ಗ, ಚಾಮರಾಜನಗರ, ಬಸವಾಸಿ, ಜೇವರ್ಗಿ, ಖಜೂರಿ, ಧಾರವಾಡ, ಹಾನಗಲ್‌, ಕುಂದಗೋಳ, ಸೈದಾಪುರ, ಬಸವನ ಬಾಗೇವಾಡಿ, ಕಲಬುರಗಿ, ಸಂಕೇಶ್ವರ, ಶ್ರವಣಬೆಳಗೊಳ, ದಾವಣಗೆರೆ, ಸೋಮವಾರಪೇಟೆ, ಹೆಸರಘಟ್ಟ, ರಾಮನಗರಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ವರದಿ ತಿಳಿಸಿದೆ.

ಇದನ್ನೂ ಓದಿ : ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಕಾರಿನ ಮೇಲೆ ಕಲ್ಲು ತೂರಾಟ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : ರಾಜ್ಯದಲ್ಲಿ ಅತಂತ್ರ ಸರಕಾರ : ಏನ್‌ ಹೇಳುತ್ತೆ EXIT POLL

ಸದ್ಯ ಈಗ ಮೋಡ ಸ್ವಚ್ಛವಾದ ಆಕಾಶವಿದ್ದು, ಸಂಜೆ ಮೋಡ ಕವಿದ ವಾಥಾವರಣ ನಿರ್ಮಾಣವಾಗಿ ಮಳೆಯಾಘುವ ಸಾಧ್ಯತೆ ಇದೆ. ರಾಮನಗರ, ಕೋಲಾರ, ಯಾದಗಿರಿ, ತುಮಕೂರಿನ ಹಲವಡೆಯೂ ಮಳೆ ಆಗಿದೆ. ಬೀದರ್‌, ರಾಯಚೂರು, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರಿನ ಅಲ್ಲಲ್ಲಿ ಮಳೆ ಆಗುವ ಸಂಭವ ಇದೆ.

ಇದನ್ನೂ ಓದಿ : Karnataka exit poll 2023 : ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ? ಯಾವ ಪಕ್ಷಕ್ಕೆ ಅಧಿಕಾರ ?

ಇದನ್ನೂ ಓದಿ : ಅನಾರೋಗ್ಯ ಪೀಡಿತರಿಗೆ ಮತದಾನ : ಮಾನವೀಯತೆ ಮೆರೆದ ಬ್ರಹ್ಮಾವರ ತಹಶೀಲ್ದಾರ್‌

Karnataka Rains: Varuna storm in the coast: Heavy rain is likely in the state for the next 3 days

Comments are closed.