Karnataka bandh withdrawn: ನಾಳೆ ಕಾಂಗ್ರೆಸ್‌ ನಿಂದ ಕರ್ನಾಟಕ ಬಂದ್‌ ಕರೆ ಹಿಂದಕ್ಕೆ ಪಡೆದ ಡಿಕೆಶಿ

ಬೆಂಗಳೂರು: (Karnataka bandh withdrawn) ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ನಾಳೆ ನಡೆಸಬೇಕಿದ್ದ ಕರ್ನಾಟಕ ಬಂದ್‌ ಕರೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಬಿಜೆಪಿ ನಾಯಕರು ಸೇರಿದಂತೆ ಸಂಪೂರ್ಣ ಸರ್ಕಾರ ಲೂಟಿಯಲ್ಲಿ ತೊಡಗಿದೆ.ಕೇಂದ್ರ ಸರ್ಕಾರದ ಸಚಿವರುಗಳು ರಾಜ್ಯಕ್ಕೆ ಕಮೀಷನ್ ತೆಗೆದುಕೊಳ್ಳಲು ಬರುತ್ತಿದ್ದಾರೆ.‌ ಇದನ್ನೆಲ್ಲ ಕೊಣೆಗಾಣಿಸಲು ನಾವು ಹೋರಾಟ ಮಾಡೋಣ ಎಂದು ಡಿಕೆಶಿ ಕರ್ನಾಟಕ ಬಂದ್‌ ಗೆ ಕರೆ ನೀಡಿದ್ದರು. ಮಾರ್ಚ್ 9 ರಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡೋದು ಬಹುತೇಕ ಖಚಿತವಾಗಿತ್ತು. ಮಾರ್ಚ್ ೯ ರಂದು ಕರ್ನಾಟಕ ಬಂದ್ ಮಾಡೋ ಮೂಲಕ ಜನತೆಗೂ ಬಿಜೆಪಿಯ ಭ್ರಷ್ಟಾಚಾರವನ್ನು ಪರಿಚಯಿಸಲು ಮುಂದಾಗಿದ್ದರು. ಮಾರ್ಚ್ 9 ರಂದು ಮುಂಜಾನೆ 9 ರಿಂದ 11 ಗಂಟೆಯವರೆಗೆ ಎರಡು ತಾಸುಗಳ ಕಾಲ ಕರ್ನಾಟಕ ಬಂದ್‌ ನಡೆಸಲು ಸಿದ್ದತೆಗಳು ನಡೆದಿದ್ದವು.

ಆದರೆ ಪರೀಕ್ಷೆಗಳು ನಡೆಯುತ್ತಿರುವ ಕಾರಣದಿಂದಾಗಿ ಬಂದ್‌ ನಡೆಸುವುದರಿಂದ ನಮಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ. ಈ ಹಿನ್ನಲೆಯನ್ನು ಅವರ ಹಿತ ಮತ್ತು ಆದ್ಯತೆ ನಮಗೆ ಮುಖ್ಯ. ಹೀಗಾಗಿ ಅವರ ಅಭಿಪ್ರಾಯಕ್ಕೆ ಗೌರವ ನೀಡುವುದರ ಮೂಲಕ ನಾವು ಬಂದ್‌ ಕರೆಯನ್ನು ವಾಪಾಸ್‌ ಪಡೆಯಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಮಾರ್ಚ್ 9 ರಂದು ಕರ್ನಾಟಕ ಬಂದ್: ಹೋರಾಟ, ಮುಷ್ಕರ ಕ್ಕೆ ಕರೆಕೊಟ್ಟ ಡಿ.ಕೆ.ಶಿವಕುಮಾರ್‌

ಇದನ್ನೂ ಓದಿ : ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು ಅರ್ಜಿ ತುರ್ತು ವಿಚಾರಣೆ: ಪಕ್ಷಪಾತ ಎಂದು ಸಿಜೆಗೆ ದೂರು ಸಲ್ಲಿಸಿದ ವಕೀಲರು

ಕಾಂಗ್ರೆಸ್‌ ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದ್ದು, ನಾಳೆ ಯಾವುದೇ ಬಂದ್‌ ಇರುವುದಿಲ್ಲ ಎಂದು ಡಿಕೆ ಶಿವಕುಮಾರ್‌ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ನಾಲ್ವರನ್ನು ಬಿಟ್ಟು ಎಲ್ಲರಿಗೂ ಟಿಕೇಟ್: ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಬಿ.ಎಸ್.ಯಡಿಯೂರಪ್ಪ ಹೇಳಿಕೆ

Karnataka bandh withdrawn: DKshi withdraws Karnataka bandh call from Congress tomorrow

Comments are closed.