Rape and threat: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬೆದರಿಕೆ: ಆರೋಪಿ ಅರೆಸ್ಟ್‌

ಔರಂಗಾಬಾದ್: (Rape and threat) ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿಯೋರ್ವ ಚಾಕಲೇಟ್ ಕೊಡಿಸುವ ನೆಪದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಡೆದಿದೆ. ಇದೀಗ ಅತ್ಯಾಚಾರ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ವ್ಯಕ್ತಿ ಆಕೆಗೆ ಚಾಕಲೇಟ್‌ ಕೊಡಿಸುತ್ತೇನೆ ಎಂದು ಹೇಳಿ, ತನ್ನ ಹಳೆಯ ಮನೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು ನಂತರ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.

ಆದರೆ ಬಾಲಕಿ ನೋವನ್ನು ತಾಳಲಾರದೇ ತನ್ನ ತಂದೆಗೆ ನಡೆದ ವಿಷಯದ ಬಗ್ಗೆ ಹೇಳಿದ್ದಾಳೆ. ವಿಚಾರವನ್ನು ತಿಳಿದ ಬಾಲಕಿಯ ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅರೋಪಿಯ ವಿರುದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಕ್ಕಳ ರಕ್ಷಣೆಯ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಕಾಮುಕರು ಮಾನವೀಯತೆಯನ್ನು ಮರೆತು ಹುಟ್ಟಿದ ಮಗುವಿನಿಂದ ಹಿಡಿದು, ವಯಸ್ಕರ ವರೆಗೂ ಅತ್ಯಾಚಾರ ನಡೆಸಿ ಕ್ರೌರ್ಯತೆ ಮೆರೆಯುತ್ತಿದ್ದಾರೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದಂತೆ ಸರಕಾರ ಪ್ರಕರಣಗಳನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಯಾವುದೇ ಲಾಭವಾಗುತ್ತಿಲ್ಲ.

ಇದನ್ನೂ ಓದಿ : Dhruv helicopter crash: ಭಾರತೀಯ ನೌಕಾಪಡೆಯ ಧ್ರುವ್‌ ಹೆಲಿಕಾಪ್ಟರ್‌ ಪತನ: ಮೂವರು ಸಿಬ್ಬಂದಿಗಳ ರಕ್ಷಣೆ

ಭಾರತೀಯ ನೌಕಾಪಡೆಯ ಧ್ರುವ್‌ ಹೆಲಿಕಾಪ್ಟರ್‌ ಪತನ: ಮೂವರು ಸಿಬ್ಬಂದಿಗಳ ರಕ್ಷಣೆ

ಮುಂಬೈ: (Dhruv helicopter crash) ನಗರದ ಕರಾವಳಿ ತೀರದಲ್ಲಿ ಭಾರತೀಯ ನೌಕಾಪಡೆಯ ಧ್ರುವ್‌ ಹೆಲಿಕಾಪ್ಟರ್‌ ಪತನಗೊಂಡಿದ್ದು, ಘಟನೆಯಲ್ಲಿ ಮೂವರು ಸಿಬ್ಬಂದಿಗಳ ರಕ್ಷಣೆ ಮಾಡಲಾಗಿದೆ ಎಂದು ಪ್ರಾಥಮಿಕ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

ಭಾರತೀಯ ನೌಕಾಪಡೆಯ ಧ್ರುವ್‌ ಹೆಲಿಕಾಪ್ಟರ್‌‌ ಮುಂಬೈ ಕರಾವಳಿ ತೀರದಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್‌ ನಲ್ಲಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಘಟನೆ ನಡೆದ ತಕ್ಷಣವೇ ಶೋಧ ಮತ್ತು ಪಾರುಗಾಣಿಕಾ ನೌಕಾ ಗಸ್ತು ಮೂಲಕ ಮೂವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ನೌಕಾಪಡೆ ತನ್ನ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Drugs in Iranian boat: ಇರಾನ್ ದೋಣಿ ವಶಕ್ಕೆ ಪಡೆದ ಐಸಿಜಿ: 425 ಕೋಟಿ ರೂ ಮೌಲ್ಯದ ಡ್ರಗ್ಸ್ ಪತ್ತೆ

Rape and threat: Rape of 6-year-old girl, threat: Accused arrested

Comments are closed.