Flying Buses: ಶೀಘ್ರದಲ್ಲೇ ಬಸ್ಸುಗಳು ಹಾರಾಡಲಿವೆ..ಕೇಂದ್ರ ಸಚಿವ ನಿತಿನ್ ಗಡ್ಕರಿ ಕನಸು ಬಿತ್ತಿದ್ದು ಹೀಗೆ

ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಜನರ ಅನುಕೂಲಕ್ಕಾಗಿ ಪ್ರಯಾಗರಾಜ್‌ನಲ್ಲಿ ಶೀಘ್ರದಲ್ಲೇ “ಫ್ಲೈಯಿಂಗ್ ಬಸ್‌ಗಳು” ಕಾರ್ಯ (Flying Buses) ನಿರ್ವಹಿಸಲು ಪ್ರಾರಂಭಿಸಲಿವೆ ಎಂದು ಮಂಗಳವಾರ ಹೇಳಿದ್ದಾರೆ. ಕ್ಷಿಪ್ರ ಸಾರಿಗೆಗೆ ನಗರ ಚಲನಶೀಲತೆ ಪರಿಹಾರವಾಗಿ ಓವರ್‌ಹೆಡ್ ಬಸ್‌ನಂತಹ  ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಸುಳಿವು ನೀಡಿದ ಸಚಿವರು, ಈ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಬಗ್ಗೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (UP Elections 2022) ಅವರಿಗೂ ತಿಳಿಸಿದ್ದೇನೆ ಎಂದು ಆಶ್ವಾಸನೆ ನೀಡಿದ್ದಾರೆ.

ಬಿಜೆಪಿಯ ಸಿದ್ಧಾರ್ಥ್ ನಾಥ್ ಸಿಂಗ್ ಸ್ಪರ್ಧಿಸುತ್ತಿರುವ ಅಲಹಾಬಾದ್ ಪಶ್ಚಿಮ ಕ್ಷೇತ್ರದ ಝಲ್ವಾ ಕ್ರಾಸಿಂಗ್ ಬಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯಾಗ್‌ರಾಜ್‌ಗೆ ಸಮುದ್ರ ವಿಮಾನ ಸೇವೆಯನ್ನು ಪ್ರಾರಂಭಿಸುವ ಕನಸು ನನಗೂ ಇದೆ ಎಂದು ಹೇಳಿದರು. ದೆಹಲಿಯಿಂದ ಪ್ರಯಾಹ್‌ರಾಜ್‌ಗೆ ಆಗಮಿಸುವಾಗ ಮೊದಲು ಸಂಗಮದ ನೀರಿನಲ್ಲಿ ಇಳಿದೆ ಬರುವ ಸೌಭಾಗ್ಯ ದೊರೆಯಲಿದೆ ಎಂದು ಕನಸು ಬಿತ್ತಿದರು.ಈ ಕನಸನ್ನ ಶೀಘ್ರದಲ್ಲೇ ನನಸು ಮಾಡಲಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಈಗ ಚಾಲನೆಯಲ್ಲಿರುವ ವಾಹನಗಳಲ್ಲೂ ಹೈಡ್ರೋಜನ್ ಇಂಧನವನ್ನು ಬಳಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ ಕಬ್ಬು ಸಮೃದ್ಧವಾಗಿದೆ. ಇದರ ಸಹಾಯದಿಂದ ಎಥೆನಾಲ್ ಅನ್ನು ವಾಹನಗಳಿಗೆ ಇಂಧನವಾಗಿ ಬಳಸಲಾಗುವುದು. ಎಥೆನಾಲ್ ಬಳಕೆಯಿಂದಾಗಿ ಒಂದು ಲೀಟರ್ ಪೆಟ್ರೋಲ್‌ಗೆ ₹100ಕ್ಕಿಂತ ಹೆಚ್ಚಿದ್ದ ವಾಹನ ಇಂಧನದ ಬೆಲೆ ₹68ಕ್ಕೆ ಇಳಿಯಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕನಸುಗಳನ್ನು ಭರಪೂರವಾಗಿ ಬಿತ್ತಿದರು. ಉತ್ತರ ಪ್ರದೇಶ ಚುನಾವಣೆಯ ಹಿನ್ನೆಯಲ್ಲಿ ಅವರ ಭರವಸೆಗಳು ಹೇಗೆ ಕೆಲಸ ಮಾಡಲಿವೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ಇದನ್ನೂ ಓದಿ: Hijab Row Opinion: ಬ್ರಾಹ್ಮಣ ಸಮುದಾಯದಂತೆ ಮುಸ್ಲಿಂ ಸಮುದಾಯ ‘ಓಪನ್ ಅಪ್’ ಆಗುವುದು ಯಾವಾಗ?

(Flying Buses in Prayagraj says Union Minister Nitin Gadkari)

Comments are closed.