ಭಾನುವಾರ, ಏಪ್ರಿಲ್ 27, 2025
Homekarnatakaಕಾಂಗ್ರೆಸ್ ಸರಕಾರಕ್ಕೆ ಜಾತಿಗಣತಿ ಸಂಕಷ್ಟ: ಲಿಂಗಾಯಿತರು - ಒಕ್ಕಲಿಗರಿಂದ ವರದಿ ಸ್ವೀಕರಿಸದಂತೆ ಸರಕಾರಕ್ಕೆ‌ ಒತ್ತಡ

ಕಾಂಗ್ರೆಸ್ ಸರಕಾರಕ್ಕೆ ಜಾತಿಗಣತಿ ಸಂಕಷ್ಟ: ಲಿಂಗಾಯಿತರು – ಒಕ್ಕಲಿಗರಿಂದ ವರದಿ ಸ್ವೀಕರಿಸದಂತೆ ಸರಕಾರಕ್ಕೆ‌ ಒತ್ತಡ

- Advertisement -

ಬೆಂಗಳೂರು : ರಾಜ್ಯದಲ್ಲಿ ಒಂದು ಭಾರಿ ಪಂಚಮಶಾಲಿ ವಿಭಜನೆಗೆ ಮುಂದಾಗಿ ಕೈಸುಟ್ಟಿರೋ ಕಾಂಗ್ರೆಸ್ ಈಗ ಮತ್ತೊಮ್ಮೆ ಜಾತಿ ಗಣತಿ (Karnataka Caste Survey Report) ಎಂಬ ಜೇನುಗೂಡಿಗೆ ಕೈ ಇಟ್ಟಿದೆ. ಸ್ವಪಕ್ಷಿಯರ ವಿರೋಧದ ನಡುವೆಯೂ ಜಾತಿಗಣತಿ ವರದಿ ಸ್ವೀಕರಿಸಿ ಬಿಡುಗಡೆಗೆ ಸಿದ್ಧವಾಗಿರೋ ಸಿಎಂ ಹಾಗೂ ಸರ್ಕಾರಕ್ಕೆ ಸ್ವಪಕ್ಷಿಯರ ಜೊತೆಗೆ ಈಗ ರಾಜ್ಯದ ಎರಡು ಪ್ರಭಲ ಜಾತಿಗಳಿಂದಲೂ ವಿರೋಧ ಎದುರಾಗಿದೆ. ಹೀಗಾಗಿ ಜಾತಿಗಣತಿ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕವಾಗೋ ಸಾಧ್ಯತೆ ಇದೆ.

Karnataka Caste Survey Report Oppose Vokkaligas and Lingayats Trouble for Karnataka Congress Government
Image Credit to Original Source

ಜಾತಿಗಣತಿಗೆ ಈಗ ಶಾಸಕರು ಹಾಗೂ ಸಚಿವರುಗಳ ಜೊತೆ ಕೆಲ ಪ್ರಬಲ ಜಾತಿ ಸಮುದಾಯಗಳ ವಿರೋಧವೂ ವ್ಯಕ್ತವಾಗಿದೆ. ಸದ್ಯ ಸರ್ಕಾರದ ವಿರುದ್ಧ ರಾಜ್ಯದ ಎರಡು ಪ್ರಬಲ ಸಮುದಾಯಗಳು ಒಂದಾಗಿದ್ದು, ಜಂಟಿಯಾಗಿ ಜಾತಿ ಗಣತಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ : ಗೃಹಿಣಿಯರಿಗೆ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ

ವೀರಶೈವ ಲಿಂಗಾಯತ (Lingayats) ಹಾಗೂ ಒಕ್ಕಲಿಗ (Vokkaligas)ಸಮುದಾಯ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದೆ. ಇದೆ 20 ರಂದು ವೀರಶೈವ ಮಹಾಸಭಾ ಹಾಗೂ ರಾಜ್ಯ ಒಕ್ಕಲಿಗ ಸಂಘ ಸಭೆ ನಡೆಸಲು ನಿರ್ಧಾರಿಸಿದ್ದು, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದಾರೆ.

ಜಾತಿ ಗಣತಿ ಬಿಡುಗಡೆ ಮಾಡದಂತೆ ಗುರುವಾರ ಡಿಸಿಎಂ ಡಿಕೆ. ಶಿವಕುಮಾರ್ ಭೇಟಿ ಮಾಡಿರುವ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದಾರೆ.ರಾಜ್ಯ ಒಕ್ಕಲಿಗ ಸಂಘ ಭೇಟಿ ಮಾಡಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಚಾರವನ್ನು ಸಿಎಂ ಗಮನಕ್ಕೆ ತರೋದಾಗಿ ಭರವಸೆ ನೀಡಿದ್ದಾರಂತೆ.

Karnataka Caste Survey Report Oppose Vokkaligas and Lingayats Trouble for Karnataka Congress Government
Image credit to Original Source

ಇದನ್ನೂ ಓದಿ : ರೈತರು ಸಾಲ ಮರು ಪಾವತಿ ಮಾಡುವಂತಿಲ್ಲ: ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರಕಾರ

ಗುರುವಾರವೇ ಒಕ್ಕಲಿಗರ ಸಂಘದ ಪದಾಧಿಕಾರಿಗಳು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪರನ್ನ ಮಾಡಿದ್ದು ಸಿಎಂರನ್ನು ಒಟ್ಟಾಗಿ ಭೇಟಿ ಮಾಡಿ ಜಾತಿಗಣತಿ ಸ್ವೀಕರಿಸದಂತೆ ಮನವೊಲಿಸುವ ನಿರ್ಧಾರ ಮಾಡಿದ್ದಾರಂತೆ. ಹಾಗಿದ್ದರೇ, ಈಗಾಗಲೇ ಸಿದ್ಧವಾಗಿರುವ ಜಾತಿಗಣತಿಗೆ ಒಕ್ಕಲಿಗ ಹಾಗೂ ಲಿಂಗಾಯತ್ ವೀರಶೈವ ಸಮುದಾಯದ ಸದಸ್ಯರು ಯಾಕೆ ವಿರೋಧಿಸುತ್ತಿದ್ದಾರೆ ಅನ್ನೋದನ್ನು ನೋಡೋದಾದರೇ,

  1. ಸರ್ವೇ ಆಗಿರೋದು ಜಾತಿ ಗಣತಿಯದ್ದಲ್ಲ, ಶೈಕ್ಷಣಿಕ ವರದಿಯ ಸರ್ವೇ ಆಗಿದೆ. ಇದನ್ನು ಬೇರೆ ಉದ್ದೇಶಕ್ಕೆ ಬಳಸೋದು ಸರಿಯಲ್ಲ.
  2. ಶೈಕ್ಷಣಿಕ ವರದಿಯ ಸರ್ವೇಯನ್ನು ನಾವು ಒಪ್ಪು ವುದಿಲ್ಲ, 8 ವರ್ಷಗಳ ಹಿಂದೆ ಆಗಿರೋ ಸರ್ವೇಯನ್ನು ಹಾಗೂ ವರದಿಯನ್ನು ಈ ಸ್ವೀಕರಿಸುವುದು ಸಮಂಜಸವಲ್ಲ.
  3. ಈಗ ಪರಿಸ್ಥಿತಿ ಬದಲಾಗಿದೆ ಇದರ ಆಧಾರದ ಮೇಲೆ ಶೈಕ್ಷಣಿಕ ಸರ್ವೇ ಮತ್ತೊಮ್ಮೆ ಆಗಬೇಕು.
  4. ರಾಜ್ಯದ ಎಲ್ಲಾ ಕಡೆಗಳಲ್ಲಿ ಮನೆ ಮನೆಗೆ ಹೋಗಿ ಸರ್ವೇ ಮಾಡಲಾಗಿಲ್ಲ. ಕೆಲವು ಕಡೆ ಮಾತ್ರ ಹೋಗಿ ಸರ್ವೇ ಮಾಡಲಾಗಿದೆ. ಇದು ಸರಿಯಲ್ಲ.
  5. ಹಳ್ಳಿಗಳ ಭಾಗದಲ್ಲಿ ಸರ್ವೇಯನ್ನೇ ಮಾಡಿಲ್ಲ, ಹಳ್ಳಿಗಳ ಭಾಗದಲ್ಲಿ ನಮ್ಮ ಸಮುದಾಯದವರು ಹೆಚ್ಚಿದ್ದಾರೆ.ಇದರಿಂದ ಜನರಿಗೆ ಅನ್ಯಾಯವಾಗುತ್ತದೆ.
  6. ಸರ್ಕಾರ ಜಾತಿ ಗಣತಿ ಮಾಡಲೇ ಬೇಕು ಅಂದ್ರೆ ಹೊಸದಾಗಿ ಪ್ರತಿಯೊಂದು ಕಡೆ ಹೋಗಿ ಮಾಹಿತಿ ಕಲೆ ಹಾಕಬೇಕು. ಆದರೆ ಇದನ್ನು ಒಪ್ಪಲಾಗದು.
  7. ಜಾತಿ ಗಣತಿಗೆ ನಮ್ಮ ವಿರೋಧ ಇಲ್ಲ ಆದ್ರೆ, ಹೊಸ ಜಾತಿ ಗಣತಿಯನ್ನ ಬಿಡುಗಡೆ ಮಾಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿರುವ ಎರಡು ಜಾತಿಯ ಸಂಘಟನೆಯ ಮುಖ್ಯಸ್ಥರು ಈಗಿರುವ ವರದಿಯನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್‌ ಗಿಫ್ಟ್‌

ಆದರೆ ಸಿಎಂ ಸಿದ್ಧರಾಮಯ್ಯನವರು ಜಾತಿ ಗಣತಿ ವರದಿ ಸ್ವೀಕರಿಸಲು ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ಒಪ್ಪಿಗೆಯೂ ದೊರೆತಿದೆಯಂತೆ. ಆದರೆ ಆಂತರಿಕವಾಗಿ ಕಾಂಗ್ರೆಸ್ ನ ಶಾಸಕರು ,ಸಚಿವರುಗಳೇ ಈ ವರದಿಯನ್ನು ವಿರೋಧಿಸುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಕಾಂಗ್ರೆಸ್ ಗೆ ಜಾತಿಗಣತಿ ಕಂಟಕ ಹೊಸ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

Karnataka Caste Survey Report Oppose Vokkaligas and Lingayats Trouble for Karnataka Congress Government

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular