ನಮ್ಮ ಮೆಟ್ರೋ ದಾಖಲೆ : ಒಂದೇ ದಿನ 7 ಲಕ್ಷ ಮಂದಿ ಪ್ರಯಾಣಿಕರಿಂದ ಪ್ರಯಾಣ

ಸಿಲಿಕಾನ್‌ ಸಿಟಿ ಬೆಂಗಳೂರಿನ ಚೆಲ್ಲಘಟ್ಟದಿಂದ - ವೈಟ್‌ಫೀಲ್ಡ್‌ ವರೆಗಿನ 42 ಕಿ.ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗದ (Purple Line) ರೈಲುಗಳು ಪ್ರಯಾಣ ಆರಂಭಿಸಿವೆ.

ಬೆಂಗಳೂರು : ನಮ್ಮ ಮೆಟ್ರೋ (Namma Metro) ಯೋಜನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ದಿನೇ ದಿನೇ ಜನ ಮೆಚ್ಚುಗೆ ಪಡೆಯುತ್ತಿದೆ. ಇದೀಗ ನಮ್ಮ ಮೆಟ್ರೋದಲ್ಲಿ ಒಂದೇ ದಿನ 7,01,455 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಹೊಸ ದಾಖಲೆಯನ್ನು (Namma Metro New Record) ಸೃಷ್ಟಿಸಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ಚೆಲ್ಲಘಟ್ಟದಿಂದ – ವೈಟ್‌ಫೀಲ್ಡ್‌ ವರೆಗಿನ 42 ಕಿ.ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗದ (Purple Line) ರೈಲುಗಳು ಪ್ರಯಾಣ ಆರಂಭಿಸಿವೆ. ಅಲ್ಲದೇ ಪ್ರಯಾಣಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.

ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿನ ವಾಹನದಟ್ಟಣೆಯ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ನಮ್ಮ ಮೆಟ್ರೋ ಯೋಜನೆ ಇದೀಗ ಚೆಲ್ಲಘಟ್ಟದಿಂದ ವೈಟ್‌ ಫೀಲ್ಡ್‌ ವರೆಗೆ ರೈಲ್ವೆ ಸಂಪರ್ಕ ಆರಂಭಿಸಿದೆ. ಜೊತೆತೆ ಸಿಲ್ಕ್‌ ಬೋರ್ಡ್‌ ವರೆಗೆ ಕೂಡ ನಮ್ಮ ಮೆಟ್ರೋ ಪ್ರಯಾಣ ಬೆಳೆಸಲಿದೆ.

ಇದೀಗ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಅವರು ಟ್ವೀಟ್‌ ಮಾಡಿದ್ದು, ನಮ್ಮ ಮೆಟ್ರೋಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಬುಧವಾರ ಒಂದೇ ದಿನ ನಮ್ಮ ಮೆಟ್ರೋ ರೈಲಿನಲ್ಲಿ 7,01,455 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ನಮ್ಮ ಮೆಟ್ರೋ ಹಸಿರು ಮಾರ್ಗ (Green Line ) ಹಾಗೂ ನೇರಳೆ ಮಾರ್ಗದಲ್ಲಿ (Purple Line) ರೈಲುಗಳು ಸಂಚಾರ ಮಾಡುತ್ತಿವೆ. ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ, ದೀಪಾಂಜಲಿ ನಗರ, ಅತ್ತಿಗುಪ್ಪೆ, ವಿಜಯನಗರ, ಹೊಸಹಳ್ಳಿ, ಮಾಗಡಿ ರಸ್ತೆ, ಸಿಟಿ ರೈಲ್ವೆ ನಿಲ್ದಾಣ, ಕೆಂಪೇಗೌಡ ನಿಲ್ದಾಣ ಮೆಜಿಸ್ಟಿಕ್‌ ವರೆಗೆ ಪ್ರಯಾಣಿಸಲಿದೆ.

ಅಲ್ಲಿಂದ ಸರ್‌ಎಂ ವಿಶ್ವೇಶ್ವರ ನಿಲ್ದಾಣ ಸೆಂಟ್ರಲ್‌ ಕಾಲೇಜು, ಅಂಬೇಡ್ಕರ್‌ ನಿಲ್ದಾಣ ವಿಧಾನಸೌಧ, ಕಬ್ಬನ್‌ ಪಾರ್ಕ್‌, ಎಂ.ಜಿ.ರಸ್ತೆ, ಟ್ರಿನಿಟಿ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆ, ಬೈಯ್ಯಪ್ಪನಹಳ್ಳಿವರೆಗೆ ಸಂಚರಿಸಲಿದೆ.

ಇದನ್ನೂ ಓದಿ : ಮೀಸಲಾತಿ ಸಂಕಷ್ಟ: ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್

ಇನ್ನು ಹಸಿರು ಮಾರ್ಗದಲ್ಲಿ ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಗೊರಗುಂಟೆ ಪಾಳ್ಯ, ಯಶವಂತಪುರ, ಸ್ಯಾಂಡಲ್‌ ಸೋಪ್‌ ಕಾರ್ಖಾನೆ, ಮಹಾಲಕ್ಷ್ಮೀ ಬಡಾವಣೆ, ರಾಜಾಜಿನಗರ, ಶ್ರೀರಾಂಪುರ, ಕುವೇಂಪು ರಸ್ತೆ, ಸಂಪಿಗೆ ರಸ್ತೆ, ಕೆಂಪೇಗೌಡ ನಿಲ್ದಾಣ ಮೆಜಿಸ್ಟಿಕ್.‌

Bangalore Namma metro New record 7 lakh passengers traveled on a single day in Green line and Purpule Line
Image Credit to Original Source

ಅಲ್ಲಿಂದ ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ನ್ಯಾಷನಲ್‌ ಕಾಲೇಜು, ಲಾಲ್‌ ಬಾಗ್‌, ಸೌತ್‌ ಎಂಡ್‌ ಸರ್ಕಲ್, ಜಯನಗರ, ಆರ್‌.ವಿ.ರಸ್ತೆ, ಬನಶಂಕರಿ, ಜೆ.ಪಿ.ನಗರ, ಯಲಚೇನಹಳ್ಳಿಯ ವರೆಗೆ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ.

ಬೆಂಗಳೂರಲ್ಲಿ ಸದ್ಯ ಯೆಲ್ಲೋ, ಪಿಂಕ್‌, ಬ್ಲೂ ಮಾರ್ಗದಲ್ಲಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿದೆ. ಅಲ್ಲದೇ ಆರೆಂಜ್‌ ಮಾರ್ಗ (ಸರ್ಜಾಪುರ ದಿಂದ ಹೆಬ್ಬಾಳ) ದಲ್ಲಿ ನಮ್ಮ ಮೆಟ್ರೋ ರೈಲು ಓಡಿಸಲು ಯೋಜನೆ ಸಿದ್ದಪಡಿಸಲಾಗುತ್ತಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ 4 ದಿನ ವಿದ್ಯುತ್‌ ಕಡಿತ : ಯಾವ ಏರಿಯಾದಲ್ಲಿ, ಯಾವ ದಿನ ಕರೆಂಟ್‌ ಇರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರಲ್ಲಿ ಸದ್ಯ ನಮ್ಮ ಮೆಟ್ರೋ ಯೋಜನೆಯ ಅಡಿಯಲ್ಲಿ ಪೂರ್ವ ಪಶ್ಚಿಮ ಕಾರಿಡಾರ್‌, ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ರೈಲು ಸಂಚರಿಸುತ್ತಿದ್ದು, ಹಲವೆಡೆಗಳಲ್ಲಿ ಸುರಂಗ ಮಾರ್ಗವನ್ನೂ ನಿರ್ಮಿಸಲಾಗಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಅನುಕೂಲಕ್ಕೆ ಮೆಟ್ರೋ ರೈಲು ಓಡಿಸುವ ಯೋಜನೆ ಸರಕಾರದ ಮುಂದಿದೆ.

Bangalore Namma metro New record 7 lakh passengers traveled on a single day in Green line and Purpule Line
Image Credit to Original Source

ಗೊಟ್ಟಗೆರೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣದ ವರೆಗೆ ನಮ್ಮ ಮೆಟ್ತೋ ಮುಂದಿನ ದಿನಗಳಲ್ಲಿ ಪ್ರಯಾಣ ಬೆಳೆಸಲಿದೆ. ನಮ್ಮ ಮೆಟ್ರೋದಲ್ಲಿ ಸದ್ಯ ನಿತ್ಯವೂ 6 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದಾರೆ. ಇದೀಗ7 ಲಕ್ಷ ಮಂದಿ ಪ್ರಯಾಣಿಸಿದ್ದು, ಮುಂದಿನ ದಿನಗಳಲ್ಲಿ ನೆಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಮ್ಮ ಮೆಟ್ರೋ ಪ್ರಯಾಣಕ್ಕೆ ಡಿಮ್ಯಾಂಡ್‌ ಇದ್ದರೂ ಕೂಡ ಬಿಎಂಟಿಸಿಗೆ ಪ್ರಯಾಣಿಕರ ಕೊರತೆ ಕಂಡುಬಂದಿಲ್ಲ.

ಇದನ್ನೂ ಓದಿ : ನಮ್ಮ ಮೆಟ್ರೋದಿಂದ ಐಟಿ ಮಂದಿಗೆ ಗಿಫ್ಟ್: ಕೆಂಗೇರಿಯಿಂದ ವೈಟ್ ಫಿಲ್ಡ್ಕೆ, .ಆರ್. ಪುರಂವರೆಗೆ ಮೆಟ್ರೋ ಪ್ರಯಾಣ

ಸಾಮಾನ್ಯವಾಗಿ ಕಾರು, ಬೈಕುಗಳಲ್ಲಿ ಕಚೇರಿಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಇದೀಗ ಮೆಟ್ರೋ ರೈಲುಗಳನ್ನು ಅವಲಂಬಿಸಿದ್ದಾರೆ. ವಾಹನದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿಯೇ ಆರಂಭಗೊಂಡಿರುವ ನಮ್ಮ ಮೆಟ್ರೋ ಯೋಜನೆಯನ್ನು ಬೆಂಗಳೂರಿನ ಮೂಲೆ ಮೂಲೆಗೂ ವಿಸ್ತರಿಸುವ ಯೋಜನೆ ಸರಕಾರದ ಮುಂದಿದೆ.

Bangalore Namma metro New record 7 lakh passengers traveled on a single day in Green line and Purple Line

Comments are closed.