ಸೋಮವಾರ, ಏಪ್ರಿಲ್ 28, 2025
HomeCrimeMurugha Sharanaru Statement : ನನ್ನ ಕೊಠಡಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವೇ ಇಲ್ಲ, ದೌರ್ಜನ್ಯ ಎಸಗಿಲ್ಲ :...

Murugha Sharanaru Statement : ನನ್ನ ಕೊಠಡಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವೇ ಇಲ್ಲ, ದೌರ್ಜನ್ಯ ಎಸಗಿಲ್ಲ : ಮುರುಘಾ ಶ್ರೀ ಹೇಳಿಕೆ

- Advertisement -

ಬೆಂಗಳೂರು : ಚಿತ್ರದುರ್ಗದ ಮುರುಘಾ ಸ್ವಾಮಿ (Murugha Sharanaru Statement) ವಿರುದ್ಧ ಫೋಕ್ಸೋ ಪ್ರಕರಣ ಸಾಕಷ್ಟು ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದ್ದು, ಡಿವೈಎಸ್ಪಿ ಅನಿಲ್ ರಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಮಧ್ಯೆ ಸ್ವಾಮಿ ನೀಡಿದ ಕಿರುಕುಳದ ಬಗ್ಗೆ ಇಬ್ಬರು ಅಪ್ರಾಪ್ತ ಬಾಲಕಿಯರು ಹೇಳಿಕೆ ನೀಡಿದ್ದರೇ ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಮುರುಘಾಶ್ರೀ ಹೇಳಿಕೆ ನೀಡಿರುವುದು ಚಾರ್ಜಶೀಟ್ ನಲ್ಲಿ ದಾಖಲಾಗಿದೆ.

ತಮ್ಮ ಮೇಲಿನ ಆರೋಪದ ಬಗ್ಗೆ ತನಿಖೆ ವೇಳೆ ಆರೋಪಿ ಮುರುಘಾಶ್ರೀ ಹೇಳಿಕೆ ನೀಡಿದ್ದಾರೆ. 4-5ವರ್ಷಗಳಿಂದ ವಾರ್ಡನ್ ಆಗಿ ರಶ್ಮಿ ನೇಮಕ ಆಗಿದೆ. ರಶ್ಮಿ ಯಾವಾಗಿನಿಂದ ಮಠದಲ್ಲಿದ್ದರು ಎಂಬುದು ಗೊತ್ತಿಲ್ಲ. ಹಾಸ್ಟೆಲ್, ವಿದ್ಯಾರ್ಥಿನಿಯರಿಗೆ ಸಂಬಂಧಿತ ವಿಚಾರ ಮ್ಯಾನೇಜರ್ ಪರಮಶಿವಯ್ಯ ಜತೆ ಚರ್ಚಿಸುತ್ತಿದ್ದರು. ಹಾಸ್ಟೆಲ್ ವಿದ್ಯಾರ್ಥಿನಿಯರು ನಮಗೆ ಪ್ರೀತಿಯಿಂದ ಅಪ್ಪಾಜಿ ಎನ್ನುತ್ತಾರೆ. ನಮ್ಮ ಖಾಸಗಿ ಕೊಠಡಿಗೆ ಯಾರಿಗೂ ಪ್ರವೇಶ ಇಲ್ಲ. ಸ್ವಚ್ಚತೆಯ ಕೆಲಸಕ್ಕೆ ನಾವು ಮಕ್ಕಳನ್ನು ಬಳಸಲ್ಲ. ಸಂತ್ರಸ್ತ ವಿದ್ಯಾರ್ಥಿನಿಯರ ಬಗ್ಗೆ ನನಗೆ ವೈಯಕ್ತಿಕ ಪರಿಚಯ ಇಲ್ಲ. ಗುಂಪಿನಲ್ಲಿ ಬಂದು ವಿದ್ಯಾರ್ಥಿಗಳು ಭೇಟಿ ಆಗುತ್ತಿದ್ದರು. ಭೇಟಿಗೆ ಬಂದವರಿಗೆ ಹಣ್ಣು, ಡ್ರೈಫ್ರೂಟ್ಸ್, ಚಾಕೊಲೇಟ್ ಗಳನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದೆವು. ಮತ್ತು ಬರುವ ಪದಾರ್ಥ ಬೆರೆಸಿ ಮಕ್ಕಳಿಗೆ ನೀಡಿಲ್ಲ. ಮದ್ಯಪಾನ ಮಾಡುವ ಅಭ್ಯಾಸ ನಮಗೆ ಇಲ್ಲ. ಕೆಲ ಹೆಣ್ಣು ಮಕ್ಕಳ ಬಗ್ಗೆ ನಮಗೆ ಸಂಪರ್ಕ‌ ಕಲ್ಪಿಸಿ ಮಾತಾಡಿದ್ದು ತಿಳಿದಿಲ್ಲ ಎಂದಿದ್ದಾರೆ.

ಅಲ್ಲದೇ ನಮ್ಮ ಖಾಸಗಿ ಕೊಠಡಿ ಸ್ವಚ್ಛತೆಗೆ ಮಹಾಲಿಂಗ, ಕರಿಬಸಪ್ಪ, ಪ್ರಜ್ವಲ್ ಎಂಬುವರನ್ನು ಮಾತ್ರ ಉಪಯೋಗಿಸುತ್ತಿದ್ದೆವು. 23/07/2022 ರಿಂದ 28/07/2022ರವರೆಗೆ ಭಕ್ತರ ಕೋರಿಕೆಯಂತೆ ಮಾರಿಷಸ್ ದೇಶಕ್ಕೆ ತೆರಳಿದ್ದೆವು.ಆಗ ಅಕ್ಕಮಹಾದೇವಿ ಹಾಸ್ಟೆಲ್ ನ ಇಬ್ಬರು ಮಕ್ಕಳು ಕಾಣೆ ಆಗಿದ್ದರು. ಮಠದ ಆಡಳಿತಾಧಿಕಾರಿ ಆಗಿದ್ದ ಎಸ್ ಕೆ ಬಸವರಾಜನ್, ಪತ್ನಿ ಸೌಭಾಗ್ಯ ಕಾಟನ್ ಪೇಟೆ ಠಾಣೆಗೆ ತೆರಳಿ ತಮ್ಮ ಸುಪರ್ದಿಗೆ ಪಡೆದಿದ್ದಾರೆ. 1994ರಿಂದ 2007ರವರೆಗೆ ಬಸವರಾಜನ್ ಮಠದ ಆಡಳಿತಾಧಿಕಾರಿ ಆಗಿದ್ದರು. ಆಗ MLA, MLC ಚುನಾವಣೆಗೆ ಸ್ಪರ್ದಿಸಿ ಮಠದ ಹಣ ದುರುಪಯೋಗ. ಮಠದ ಹಣದಿಂದ ಆಸ್ತಿ ಖರೀಧಿಸಿ ಮಠಕ್ಕೆ ವಂಚನೆ. ಹೀಗಾಗಿ, ಮಠದ ಆಡಳಿತಾಧಿಕಾರಿ ಸ್ಥಾನದಿಂದ ವಜಾ ಮಾಡಲಾಗಿತ್ತು. 2022ರಲ್ಲಿ ಮಠದ ವಿರುದ್ಧದ ಸಿವಿಲ್‌ ದಾವೆ ಹಿಂಪಡೆಯುವ ಭರವಸೆ ನೀಡಿದ್ದರು. 2022ರ ಡಿಸೆಂಬರ್ ನಲ್ಲಿ ಮಠದ ಆಡಳಿತಾಧಿಕಾರಿಯಾಗಿ ನೇಮಿಸಿದೆ.

ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕ ವಾಗಿ ಬಳಸಿಕೊಂಡಿಲ್ಲ. ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು.ಷಡ್ಯಂತ್ರ, ಪ್ರಚೋದಿತವಾಗಿದ್ದು ಸತ್ಯಕ್ಕೆ ದೂರಾಗಿವೆ. ಈ ದೇಶದ ಕಾನೂನು ಗೌರವಿಸುವ ದೃಷ್ಠಿಯಿಂದ ಸ್ವಿಚ್ಛೆಯಿಂದ ನಿಮ್ಮೆದುರು ಹಾಜರಾಗಿದ್ದೇನೆ ಎಂದು ಚಿತ್ರದುರ್ಗದ ಮುರುಘಾ ಸ್ವಾಮಿ ಹೇಳಿಕೆ ನೀಡಿದ್ದಾರೆ. ಇನ್ನು ಈ ಹೇಳಿಕೆ ಒಳಗೊಂಡ ಚಾರ್ಜಶೀಟ್ ನ್ನು ಡಿವೈಎಸ್ಪಿ ಅನಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ಸ್ಥಳ ಮಹಜರು ವೇಳೆ 2ಮೊಬೈಲ್, 4 ಜತೆ ಕಪನಿ, 10 ಲಂಗೋಟಿ ವಶಕ್ಕೆ ಪಡೆದಿರುವ ಪೊಲೀಸರು ಇದರಲ್ಲಿ ಕೆಲವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಿದ್ದಾರೆ.

ಇದನ್ನೂ ಓದಿ : Shiva Murthy Murugha Sharanaru : ಮುರುಘಾಶ್ರೀ ಕೋಣೆಯ ರಹಸ್ಯ ಬಯಲು : ಚಾರ್ಜ್ ಶೀಟ್ ನಲ್ಲೇನಿದೆ ?

ಇದನ್ನೂ ಓದಿ : Bus Accident : ಬಸ್‍ಗಳ ನಡುವೆ ಭೀಕರ ಅಪಘಾತ ; ಮೂವರು ಸಾವು, 17 ಮಂದಿಗೆ ಗಾಯ

Karnataka Chargesheet filed against rape-accused Chitradurga seer Shivamurthy Murugha Sharanaru Statement

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular