Dinesh Karthik or Rishabh Pant : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್: ಎಬಿ ಡಿವಿಲಿಯರ್ಸ್ ಹೇಳಿದ್ದೇನು ?

ಅಡಿಲೇಡ್‌ : Dinesh Karthik or Rishabh Pant : ಟಿ 20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇಂದು ಜಯಗಳಿಸುವ ತಂಡ ಪಾಕಿಸ್ತಾನ ತಂಡವನ್ನು ಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಈ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಗಳಲ್ಲಿ ಯಾರು ಕಣಕ್ಕೆ ಇಳಿಯ ಬೇಕು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತು ಸ್ಪೋಟಕ ಆಟಗಾರ ಎಬಿಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ದಿನೇಶ್ ಕಾರ್ತಿಕ್ ಭಾರತಕ್ಕಾಗಿ ಗುಂಪು ಹಂತದ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿದ್ದರೆ, ಜಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ರಿಷಬ್ ಪಂತ್ ಕಣಕ್ಕೆ ಇಳಿದಿದ್ದರು. ಸೆಮಿಫೈನಲ್‌ಗೆ ಮುಂಚಿತವಾಗಿ, ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಇಂಗ್ಲೆಂಡ್ ವಿರುದ್ಧ ಯಾರು ಆಡಬೇಕು ಎಂಬ ಕುರಿತು ಹೇಳಿಕೆಯನ್ನು ನೀಡಿದ್ದಾರೆ. ಇಬ್ಬರಲ್ಲಿ ಯಾರು ಆಡಬೇಕು ಅನ್ನೋದು ನನಗೆ ಕಷ್ಟ. ಇಬ್ಬರೂ ಕೂಡ ಉತ್ತಮ ಆಟಗಾರರು. ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶರ್ ಮಾತ್ರವಲ್ಲ ಅವರೊಬ್ಬರ ಅನುಭವಿ ಆಟಗಾರ ಎಂದಿದ್ದಾರೆ.

ಇನು ರಿಷಬ್ ಪಂತ್ ಕೂಡ ತಂಡದಲ್ಲಿ ಇರಬೇಕು ಎಂದು ನಾನು ಭಯಸುತ್ತಿದ್ದೇನೆ. ಆದರೆ ಅವರಿಗೆ ತಂಡದಲ್ಲಿ ಯಾವ ಸ್ಥಾನ ನೀಡಬೇಕೆಂದು ಹುಡುಕಾಟ ಮಾಡುತ್ತಿದ್ದೇನೆ. ರಿಷಬ್ ಪಂತ್ ಗಾಗಿ ಯಾರು ಜಾಗ ಮಾಡಿಕೊಡುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಇಬ್ಬರಿಗಾಗಿ ಹೂಡಾ ಹಾಗೂ ಪಾಂಡ್ಯ ದಾರಿ ಮಾಡಿಕೊಡಬಹುದು ಎಂದಿದ್ದಾರೆ.

ಆದಾಗ್ಯೂ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧದ ಭಾರತದ ಮುಂದಿನ ಎರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಅವರನ್ನು ಬದಲಾಯಿಸಲಾಗಿತ್ತು.ರಿಷಬ್ ಪಂತ್ ಆಸ್ಟ್ರೇಲಿಯಾ ದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕಗಳನ್ನು ಗಳಿಸಿದ್ದಾರೆ ಮತ್ತು ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅವರ ಫೈರ್‌ಪವರ್ ಅಗತ್ಯವಿದೆ. ಪಂತ್ ಅವರು ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ, ಅವರು ಅನುಭವವನ್ನು ಹೊಂದಿದ್ದಾರೆ ಮತ್ತು ಯಾವುದೇ ಬೌಲಿಂಗ್ ದಾಳಿಯಿಂದ ಆಟವನ್ನು ತೆಗೆದುಕೊಳ್ಳುವ ವಿಶ್ವಾಸವನ್ನು ಹೊಂದಿದ್ದಾರೆ.

ರಿಷಬ್ ಪಂತ್ ವೇಗದ ಬೌಲಿಂಗ್ ಮತ್ತು ಸ್ಪಿನ್ ಎದುರಿಸಬಲ್ಲರು. ಡಿಕೆ ಅವರ ಅನುಭವ ಬೇಕು ಮತ್ತು ಪಂತ್ ಅವರ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯ ತಂಡಕ್ಕೆ ಅಗತ್ಯವಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಅಂತಿಮ ಪಂದ್ಯಕ್ಕೆ ಮುನ್ನ ಭಾರತ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಬುಧವಾರದ ಸಾಂಪ್ರದಾಯಿಕ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್, ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಪಂತ್ ಭಾರತದ ಪ್ಲೇಯಿಂಗ್ ಇಲೆವೆನ್‌ ಇರ್ತಾರಾ ಇಲ್ಲವೋ ಅನ್ನೋ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ : LIVE Updates | IND vs ENG : ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ : PAK vs NZ T20 Semi-Final: ಟಿ20 ವಿಶ್ವಕಪ್ ಫೈನಲ್’ಗೆ ಪಾಕಿಸ್ತಾನ ಲಗ್ಗೆ, ಭಾನುವಾರ ನಡೆಯುತ್ತಾ ಭಾರತ Vs ಪಾಕ್ ಫೈನಲ್ ?

Dinesh Karthik or Rishabh Pant for T20 world cup Semi final: What AB de Villiers said

Comments are closed.