ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅರ್ಧ ಲಾಕ್‌ಡೌನ್ ಜಾರಿ ಮಾಡಲಾ ಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿ ಹೊಸ ನಿಯಮಗಳ ಜಾರಿಯ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಹೊರಡಿಸಿದೆ. ವಿಕೇಂಡ್ ಲಾಕ್ ಡೌನ್ ಜೊತೆಗೆ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯ ವರೆಗೆ ಹೊಸ ನಿಯಮಗಳನ್ನು ಅಳವಡಿಸಿ ಮಾರ್ಗಸೂಚಿ ಹೊರಡಿಸ ಲಾಗಿದೆ. ಅಗತ್ಯ ವಸ್ತುಗಳಾದ ದಿನಸಿ ಸಾಮಗ್ರಿಗಳ ಅಂಗಡಿ, ಹಣ್ಣು, ತರಕಾರಿ, ಹಾಲಿನ ಡೈರಿ, ಮಾಂಸದ ಅಂಗಡಿ, ಔಷಧಿ ಹಾಗೂ ಪ್ರಾಣಿಗಳ ಆಹಾರದ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.
ಹೊಲ್ ಸೇಲ್ ತರಕಾರಿ ಹಾಗೂ ಹಣ್ಣು ಹೂವು ಅಂಗಡಿ ತೆರೆಯ ಬಹುದಾಗಿದೆ. ಹೊಟೇಲ್, ರೆಸ್ಟೋರೆಂಟ್ ಆರಂಭವಾಗಿದ್ದರೂ ಕೂಡ ಕೇವಲ ಪಾರ್ಸಲ್‌ಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಹೊಟೇಲ್ ಮತ್ತು ಲಾಡ್ಜಿಂಗ್ ಗಳಲ್ಲಿ ಹೊರ ಜಿಲ್ಲೆ, ರಾಜ್ಯ, ವಿದೇಶ ದಿಂದ ಬಂದ ಅತಿಥಿಗಳಿಗೆ ಮಾತ್ರವೇ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ. ಉಳಿದಂತೆ ಮದ್ಯದಂಗಡಿಗಳಲ್ಲಿ ಪಾರ್ಸಲ್ ಗೆ ಅವಕಾಶ ಕಲ್ಪಿಸಲಾಗಿದೆ.
ಬ್ಯಾಂಕಿಂಗ್ ಸೇವೆ, ಎಟಿಎಂ ಇನ್ಶುರೆನ್ಸ್ ಕಂಪನಿ, ಪೇಪರ್, ಟಿವಿ, ಮೀಡಿಯಾ ಕಂಪನಿ, ಇ -ಕಾಮರ್ಸ್ ಸೇವೆಯ ಕಚೇರಿ, ಶೇರ್ ಮಾರ್ಕೇಟ್, ಸೇವಾ ಕಚೇರಿ, ಕೋಲ್ಡ್ ಸ್ಟೋರೆಜ್, ವೇರ್ ಹೌಸ್ , ಖಾಸಗಿ ಸೆಕ್ಯೂರಿಟಿ ಏಜೆನ್ಸಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್, ಕಟ್ಟಡ ನಿರ್ಮಾಣ ಸಾಮಾಗ್ರಿ ಮಾರಾಟ ಮಾಡುವ ಅಂಗಡಿಗೆ ತೆರೆಯಲು ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಎಲ್ಲಾ ಸೇವೆಗಳನ್ನು ಬಂದ್ ಮಾಡಿ ಸರಕಾರ ಆದೇಶಿಸಿದೆ.
