ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ನಿಧಾನವಾಗಿ ಇಳಿಕೆಯನ್ನು ಕಾಣುತ್ತಿದೆ. ಇದೀಗ ರಾಜ್ಯದಲ್ಲಿ ಹೊಸದಾಗಿ 1,869 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,82,239ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಜೊತೆ ಜೊತೆಗೆ ಸೋಂಕಿನ ಚೇತರಿಸಿ ಕೊಳ್ಳುತ್ತಿರು ವವರ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲೀಗ ಸಕ್ರೀಯ ಕೊರೊನಾ ಪ್ರಕರಣಗಳ ಸಂಖ್ಯೆ 30,082ಕ್ಕೆ ಇಳಿಕೆಯನ್ನು ಕಂಡಿದೆ. ಅಲ್ಲದೇ ರಾಜ್ಯದಲ್ಲಿ ಕಳೆದ ಒಂದು ದಿನಗಳ ಅವಧಿಯಲ್ಲಿ 42 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದುವರೆಗೆ ರಾಜ್ಯದಲ್ಲಿ 36,121 ಮಂದಿ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ : Monkeypox : ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್..!! ಪತ್ತೆಯಾಯ್ತು ಮಂಕಿಪಾಕ್ಸ್
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯನ್ನು ಕಂಡಿದೆ. ರಾಜ್ಯದಲ್ಲಿ ಒಂದೇ ದಿನ 432 ಮಂದಿಗೆ ಕೊರೊನಾ ಸೋಂಕು ದೃಢಫಟ್ಟಿದ್ದು, ಒಟ್ಟು ಸೊಂಕಿತರ ಸಂಖ್ಯೆ 12,21,803ಕ್ಕೆ ಏರಿಕೆಯಾಗಿದೆ. 11,93,848 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹೆಮ್ಮಾರಿ 15,787 ಮಂದಿಯನ್ನು ಬಲಿಪಡೆದಿದೆ. ಕೊರೊನಾ ಸೋಂಕು ತಗ್ಗಿದ್ದರೂ ಕೂಡ ಬೆಂಗಳೂರಲ್ಲಿ 12,167 ಸಕ್ರೀಯ ಕೊರೊನಾ ಪ್ರಕರಣಗಳಿವೆ.

ಇದನ್ನೂ ಓದಿ : ಮುಂದಿನ 100 ದಿನಗಳು ಡೇಂಜರ್ : ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ
ಇನ್ನು ರಾಜ್ಯದ ಬಾಗಲಕೋಟೆ 4, ಬಳ್ಳಾರಿ 11, ಬೆಳಗಾವಿ 97, ಬೆಂಗಳೂರು ಗ್ರಾಮಾಂತರ 46, ಬೆಂಗಳೂರು ನಗರ 432, ಬೀದರ್ 1, ಚಾಮರಾಜನಗರ 15, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 101, ಚಿತ್ರದುರ್ಗ 15, ದಕ್ಷಿಣ ಕನ್ನಡ 218, ದಾವಣಗೆರೆ 21, ಧಾರವಾಡ 24, ಹಾಸನ 173, ಹಾವೇರಿ 14, ಕಲಬುರಗಿ 6, ಕೊಡಗು 51, ಕೋಲಾರ 46, ಕೊಪ್ಪಳ 1, ಮಂಡ್ಯ 37, ಮೈಸೂರು 207, ರಾಯಚೂರು 3, ರಾಮನಗರ 11, ಶಿವಮೊಗ್ಗ 83, ತುಮಕೂರು 92, ಉಡುಪಿ 94, ಉತ್ತರ ಕನ್ನಡ 49, ವಿಜಯಪುರ 2, ಯಾದಗಿರಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.