Coriander Leaves : ಕೊತ್ತಂಬರಿ ಸೊಪ್ಪಿನ ಬಳಕೆ ಈ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ ಗೊತ್ತಾ..?

  • ರಕ್ಷಾ ಬಡಾಮನೆ

ಕೊತ್ತಂಬರಿ ಸೊಪ್ಪು ನಮ್ಮೆಲ್ಲರ ಅಡುಗೆಯ ಅವಿಭಾಜ್ಯ ಅಂಗ..ಅದಿಲ್ಲದಿದ್ದರೆ ಯಾವ ಅಡುಗೆಯೂ ರುಚಿಸದು. ಅದಷ್ಟೇ ಅಲ್ಲದೆ ಸಲಾಡ್, ಫಾಸ್ಟ್ ಫುಡ್ ನಂತಹ ತಿನಿಸುಗಳಿಗೆ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಉದುರಿಸುವುದು ಸಾಮಾನ್ಯ ವಿಚಾರ. ಕೊತ್ತಂಬರಿ ಸೊಪ್ಪು ಆಹಾರಗಳಗೆ ರುಚಿ ನೀಡುವುದಷ್ಟೇ ಅಲ್ಲದೆ ಹಲವಾರು ಪೋಷಕಾಂಶಗಳ ಆಗರ.

ಎ,ಇ,ಎ,ಫೋಲಿಕ್ ಆಮ್ಲದಂತಹ ಜೀವಸತ್ವಗಳು, ಕಬ್ಬಿಣಾಂಶ ಮತ್ತು ನಾರಿನ ಅಂಶಗಳು ಕೊತ್ತಂಬರಿ ಸೊಪ್ಪಿನಲ್ಲಿ ಯಥೇಚ್ಛವಾಗಿದೆ. ಈ ಎಲ್ಲಾ ಕಾರಣಗಳಿಂದ ಕೊತ್ತಂಬರಿ ಸೊಪ್ಪು ಆರೋಗ್ಯ ಸಂರಕ್ಷಣೆ ಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೊತ್ತಂಬರಿಯಲ್ಲಿರುವ ಹಲವು ಪೋಷಕಾಂಶಗಳು ಚರ್ಮದಲ್ಲಿ ಸೋಂಕು ಉಂಟುಮಾಡುವುದನ್ನು ತಡೆಯುತ್ತದೆ.

ಉತ್ತಮ ನಂಜುನಿವಾರಕವಾಗಿರುವ ಇದು ತುರಿಕೆ ತರಿಸುವ ಇಸಬು, ಒಣಚರ್ಮ, ಬೂಸಿನಿಂದಾಗುವ ಸೋಂಕು ಮೊದಲಾದ ತೊಂದರೆಗಳನ್ನು ತಡೆಯುತ್ತದೆ. ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಅಂಶ ಮತ್ತು ಸಮೃದ್ಧ ಸುವಾಸನೆ ಇದೆ. ಇವುಗಳು ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗುತ್ತವೆ. ಕೊತ್ತಂಬರಿಯಲ್ಲಿರೋ ಲಿನೋಲಿಕ್ ಆ್ಯಸಿಡ್ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಆರೋಗ್ಯಕ್ಕೆ ಅಗತ್ಯವಿರುವ ಕೊಬ್ಬು ಹೆಚ್ಚಿಸುತ್ತೆ.

ಮಹಿಳೆಯರ ಮಾಸಿಕ ಚಕ್ರದ ದಿನಗಳು ಏರುಪೇರನ್ನು ತಡೆದು ಋತುಚಕ್ರ ಕ್ರಮಬದ್ದವಾಗಿಯೂ ಆಗಿ ನೋವನ್ನು ಕಡಿಮೆಗೊಳಿಸುವಲ್ಲಿ ಕೊತ್ತಂಬರಿ ಸೊಪ್ಪಿನ ಬಳಕೆ ಸೂಕ್ತವಾಗಿದೆ. ಮಧುಮೇಹಿಗಳಿಗೆ ಅಗತ್ಯವಾದ ಇನ್ಸುಲಿನ್ ಅಂಶ ಹೆಚ್ಚಿಸಿ, ರಕ್ತದಲ್ಲಿರೋ ಸಕ್ಕರೆಯಾಂಶವನ್ನು ಕಡಿಮೆ ಮಾಡುತ್ತದೆ. ಅಲ್ಜೈಮೈರ್ ರೋಗಕ್ಕೆ ಅಗತ್ಯವಾದ ವಿಟಮಿನ್ ‘ಕೆ’ ಈ ಸೊಪ್ಪಿನಲ್ಲಿದೆ. ಅನೀಮಿಯಾದಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಹೆಚ್ಚಿನ ಕೊತ್ತಂಬರಿ ಸೊಪ್ಪನ್ನು ಬಳಸಬೇಕು.

ಇದರಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ರಕ್ತಕ್ಕೆ ಅಗತ್ಯ ಪೋಷಕಾಂಶಗಳನ್ನು ಪೂರೈಸಬಲ್ಲದು.ಕಣ್ಣಿನ ಆರೋಗ್ಯಕ್ಕೆ ಕೊತ್ತಂಬರಿ ಒಳ್ಳೆಯದಾಗಿದೆ. ಏಕೆಂದರೆ ಇದರಲ್ಲಿರುವ ವಿಟಮಿನ್ ಎ, ಸಿ ಮತ್ತು ಖನಿಜ ಗಳಾದ ಗಂಧಕ, ಹಲವು ಆರೋಗ್ಯಕರ ಎಣ್ಣೆಗಳು ಉತ್ತಮ ದೃಷ್ಟಿಗೆ ಪೂರಕವಾಗಿವೆ.

ಇದನ್ನೂ ಓದಿ : ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್‌..!! ಪತ್ತೆಯಾಯ್ತು ಮಂಕಿಪಾಕ್ಸ್

ಇದರಿಂದ ಕಣ್ಣುಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ನರಗಳ ದೌರ್ಬಲ್ಯ ತಡೆಗಟ್ಟಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಮದ್ರಾಸ್ ಕಣ್ಣಿನಂಥ ಸಮಸ್ಯೆಗೆ ರಾಮಬಾಣ.

ಗರ್ಭಿಣಿಯಾದ ಹೊಸತರಲ್ಲಿ ಹಲವಾರು ಹೆಂಗಸರಿಗೆ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರ ಅದನ್ನು ಸೇವಿಸಿ ವಾಂತಿಯಿಂದ ಉಪಶಮನ ಪಡೆಯಿರಿ.

ಮೂಗಿನ ರಕ್ತ ಸ್ರಾವವು ತತ್ಕ್ಷಣಕ್ಕೆ ನಿಲ್ಲಲು ಕೊತ್ತಂಬರಿ ಸೊಪ್ಪಿನ ರಸ ಉಪಕಾರಿ. ಕೊತ್ತಂಬರಿಯ ನಿರಂತರ ಸೇವನೆಯಿಂದ ಹೊಟ್ಟೆಯ ಹುಣ್ಣು (ಅಲ್ಸರ್), ಹೊಟ್ಟೆಯ ಉರಿಯೂತ, ದಮ್ಮು, ಕಫಗಳನ್ನು ಕಡಿಮೆಗೊಳಿಸುತ್ತದೆ ಹಾಗೂ ನಮ್ಮ ಯಕೃತ್ತನ್ನು ಕಾಪಾಡುತ್ತದೆ.

Comments are closed.