ನಾಳೆಯಿಂದ ದೇವರಿಗೆ ಪೂಜಾ ಭಾಗ್ಯ….! ಕಂದಾಯ ಇಲಾಖೆಯಿಂದ ಪರಿಷ್ಕೃತ ಆದೇಶ…!!

ಬೆಂಗಳೂರು: ರಾಜ್ಯದಾದ್ಯಂತ ದೇವಾಲಯ, ಮಸೀದಿ, ಚರ್ಚ್, ಗುರುದ್ವಾರ್ ಗಳಲ್ಲಿ ದೇವರ ಪೂಜಾ ಸೇವೆಗಳಿಗೆ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಲಾಕ್ ಡೌನ್ ಜಾರಿಯಾದ ಬಳಿಕ ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ಹೇರಲಾಗಿತ್ತು. ಅನ್ ಲಾಕ್ ಪ್ರಕ್ರಿಯೆಯಲ್ಲಿ ಕೇವಲ ದೇವಾಲಯದ ಬಾಗಿಲು ತೆರೆದು ಅರ್ಚಕರಿಗೆ ಮಾತ್ರ ಪೂಜಾ ಅವಕಾಶ ಕಲ್ಪಿಸಿದ್ದ  ಕಂದಾಯ ಇಲಾಖೆ ಈಗ ದೇವರ ಪೂಜೆಗೆ ಅವಕಾಶ ಕಲ್ಪಿಸಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಶನಿವಾರ ಈ ಬಗ್ಗೆ ಪರಿಷ್ಕೃತ ಆದೇಶ ಹೊರಡಿಸಿದ್ದು, ಕೊವೀಡ್ ಮಾರ್ಗಸೂಚಿಗಳ ಜೊತೆಗೆ ಭಾನುವಾರ ದಿಂದ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಸೇವೆಗಳಿಗೆ ಅವಕಾಶವಿದೆ ಎಂದಿದ್ದಾರೆ.

ಇದನ್ನೂ ಓದಿ : Online ಕ್ಲಾಸ್‌ಗಾಗಿ ಹಳೆ ಮೊಬೈಲ್‌ ಸಂಗ್ರಹ : SSLC ವಿದ್ಯಾರ್ಥಿಗಳಿಗೆ ಸೋಲಾರ್‌ ಲ್ಯಾಂಪ್‌ : ಡಿಡಿಪಿಐ ನಾಗೂರ ವಿಶಿಷ್ಟ ಕಾರ್ಯ

ಆದರೆ ದೇವಾಲಯದಲ್ಲಿ ಜಾತ್ರೆ, ಹಬ್ಬ, ಸಮಾವೇಶ, ಮೆರವಣಿಗೆ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿಲ್ಲ. ಅಲ್ಲದೇ ಪಾರ್ಕ್ ಗಳನ್ನು ತೆರೆಯಲು ಅವಕಾಶವಿದ್ದು, ಸ್ವಿಮ್ಮಿಂಗ್ ಸೇರಿದಂತೆ ಜಲ ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ನೀಡಲಾಗಿಲ್ಲ.

Comments are closed.