ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಕ್ಕೆ ನಡೆಯುವ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲಸದಲ್ಲಿ ಬಂದಿದ್ದ 1000 ಸಾವಿರ ರೂಪಾಯಿ ಹಣ ಹಂಚಿಕೊಳ್ಳುವ ವಿಚಾರಕ್ಕೆ ತನ್ನ ಪ್ರಾಣ ಸ್ನೇಹಿತನನ್ನೆ ಕೊಲೆಗೈದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಬೆಂಗಳೂರಿನ ಕೋಣನಕುಂಟೆಯ ನಿವಾಸಿ ಮಂಜುನಾಥ್ ಎಂಬಾತನೇ ಕೊಲೆಯಾಗಿರುವ ಯುವಕ. ಮಂಜುನಾಥ್ ಸ್ನೇಹಿತ ಆರೋಪಿ ಆಕಾಶ್‌ನನ್ನು ಪೊಲೀಸರು ಬಂದಿದ್ದಾರೆ. ಮಂಜುನಾಥ್ ಹಾಗೂ ಆಕಾಶ್ ಇಬ್ಬರೂ ಸ್ನೇಹಿತರು. ಒಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕೆಲಸದಲ್ಲಿ ಬಂದಿದ್ದ ಸುಮಾರು ಒಂದು ಸಾವಿರ ರೂಪಾಯಿಯನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೇ ಜಗಳ ಉಂಟಾಗಿತ್ತು.
ಜಗಳ ವಿಕೋಪಕ್ಕೆ ತೆರಳುತ್ತಿದ್ದಂತೆಯೇ ಆಕಾಶ್ ಮಂಜುನಾಥನ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮಂಜುನಾಥ್ ಗಂಭೀರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ನಂತರದಲ್ಲಿ ಆಕಾಶ್ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಅನುಮಾನಾಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆಯಲ್ಲಿ ಮಂಜುನಾಥ್‌ನನ್ನು ಆಕಾಶ್ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಕೋಣನಕುಂಟೆ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 174(c) ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲು ಮಾಡಿಕೊಂಡಿದ್ದ ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತ ಶಾಲಾ ಬಾಲಕಿಯ ಕಿಡ್ನಾಪ್ : ಅತ್ಯಾಚಾರವೆಸಗಿದ ಕ್ಯಾಬ್ ಚಾಲಕ
ಇದನ್ನೂ ಓದಿ : ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ
( The murder of a friend for just a thousand rupees )