Arvind Kejriwal’s Hindutva plea:‘ಕರ್ನಾಟಕಕ್ಕೆ ಮತ್ತೊಂದು ಬ್ರಾಹ್ಮಣ್ಯ ಪಕ್ಷದ ಅಗತ್ಯವಿಲ್ಲ’ : ಅರವಿಂದ ಕೇಜ್ರಿವಾಲ್​ ಹಿಂದುತ್ವ ಮನವಿಗೆ ಚೇತನ್​ ಅಂಹಿಸಾ ಪ್ರತಿಕ್ರಿಯೆ

Arvind Kejriwal’s Hindutva plea : ಗುಜರಾತ್​ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಪ್ರಧಾನಿ ಮೋದಿ ಹಿಂದುತ್ವ ಅಸ್ತ್ರವನ್ನೇ ಬಳಸಿಕೊಂಡು ಗುಜರಾತ್​ ಜನತೆಯ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದಕ್ಕೆ ಮೊದಲ ಹೆಜ್ಜೆ ಎಂಬಂತೆ ಅರವಿಂದ ಕೇಜ್ರಿವಾಲ್​ ನಿನ್ನೆ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿ ಫೊಟೋದ ಜೊತೆಯಲ್ಲಿ ಲಕ್ಷ್ಮೀ ಹಾಗೂ ಗಣಪತಿ ದೇವರ ಪೋಟೋವನ್ನು ಹಾಕಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ಈ ಸಂಬಂಧ ತಾವು ಪ್ರಧಾನಿ ಮೋದಿಗೆ ಮನವಿ ಮಾಡೋದಾಗಿ ಕೂಡ ಹೇಳಿದ್ದರು. ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭಾರತೀಯ ಕರೆನ್ಸಿ ನೋಟುಗಳ ಮೇಲೆ ದೇವರ ಫೋಟೋವನ್ನು ಮುದ್ರಿಸಬೇಕು ಎಂಬ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​ರ ಈ ಆಗ್ರಹವನ್ನು ಆ ದಿನಗಳು ಖ್ಯಾತಿಯ ನಟ ಚೇತನ ಅಂಹಿಸಾ ವಿರೋಧಿಸಿದ್ದಾರೆ.


ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ ನಟ ಚೇತನ್​ ಅಂಹಿಸಾ ಎಎಪಿ ಪಕ್ಷದ ಮುಕ್ಯಸ್ಥರಾದ ಅರವಿಂದ ಕೇಜ್ರಿವಾಲ್​ ಅವರು ಬ್ಯಾಂಕ್​ ನೋಟುಗಳ ಮೇಲೆ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನು ಮುದ್ರಿಸಿ ಎಂದು ಆಗ್ರಹ ನೀಡಿದ್ದಾರೆ. ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಕೂಡಾ ವಾದಿಸಿದ್ದಾರೆ. ಎಷ್ಟು ಅಸಂಬದ್ಧವಾದ ಹೇಳಿಕೆ!


ಇಂತಹ ಅಸಾಂವಿಧಾನಿಕ ಮೂಢನಂಬಿಕೆ ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್​ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯರ ಪಕ್ಷಗಳಿವೆ. ಇನ್ನೊಂದರ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ಪರೋಕ್ಷ ಟಾಂಗ್​ ನೀಡಿದ್ದಾರೆ.


ಪಂಜಾಬ್​ನಲ್ಲಿ ರೈತ ಪರವಾಗಿ ನಿಂತು ವಿಧಾನಸಭಾ ಚುನಾವಣೆಯನ್ನು ಗೆದ್ದಿರುವ ಆಮ್​ ಆದ್ಮಿ ಪಕ್ಷವು ಹಿಂದುತ್ವ ಅಜೆಂಡಾವನ್ನೇ ಬಳಸಿಕೊಂಡು ಗುಜರಾತ್​ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಪ್ಲಾನ್​ನಲ್ಲಿದೆ. ಇದೇ ಕಾರಣದಿಂದಾಗಿ ನಿನ್ನೆ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೋದ ಜೊತೆಯಲ್ಲಿ ಲಕ್ಷ್ಮೀ ಹಾಗೂ ಗನೇಶ ದೇವರ ಫೊಟೋವನ್ನು ಹಾಕಬೇಕು. ಇಂಡೋನೇಷ್ಯಾ ಒಂದು ಮುಸ್ಲಿಂ ರಾಷ್ಟ್ರವಾಗಿದ್ದರೂ ಕೂಡ ಅಲ್ಲಿನ ಕರೆನ್ಸಿಗಳಲ್ಲಿ ಗಣೇಶನ ಫೋಟೋವಿದೆ. ಭಾರತವು ಹಿಂದೂ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ನಮ್ಮಲ್ಲಿ ಯಾಕೆ ಈ ರೀತಿ ಕ್ರಮ ಕೈಗೊಳ್ಳಬಾರದು..? ಎಂದು ಪ್ರಶ್ನಿಸಿದ್ದರು.

ಇದನ್ನು ಓದಿ : Delhi CM: ಹಿಂದುತ್ವ ಅಜೆಂಡಾ: ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದೇನು

ಇದನ್ನೂ ಓದಿ : Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ ಟಿಸಿ ಬಸ್‌ ಸಂಚಾರ ಪುನರಾರಂಭ

‘Karnataka does not need another Brahmin party’: Chetan Amhisa’s response to Arvind Kejriwal’s Hindutva plea

Comments are closed.