Karnataka Election 2022 : ಅಧಿಕಾರಕ್ಕೇರಲು ಅವಧಿಪೂರ್ವ ಚುನಾವಣೆ ಮೊರೆ ಹೋದ ಬಿಜೆಪಿ

ಬೆಂಗಳೂರು : ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ (Karnataka Election 2022) ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಮೂರು ರಾಜಕೀಯ ಪಕ್ಷಗಳು ಭರದಿಂದ ಚುನಾವಣೆಗೆ ಸಿದ್ಧತೆ ನಡೆಸಿವೆ. ಈಗಾಗಲೇ ಗೆಲುವಿನ ಲೆಕ್ಕಾಚಾರ, ಗೆಲ್ಲುವ ಅಭ್ಯರ್ಥಿಯ ಆಯ್ಕೆ ಎಲ್ಲವೂ ಆರಂಭವಾಗಿದೆ. ಈ ಮಧ್ಯೆ ಚುನಾವಣೆಗೆ ಪಕ್ಷಗಳ ತಯಾರಿ ಬೆನ್ನಲ್ಲೇ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು. ರಾಜ್ಯದಲ್ಲಿ ಆಡಳಿತದಲ್ಲಿರೋ ಬಿಜೆಪಿ ಸರ್ಕಾರವೂ ಅವಧಿಪೂರ್ಣ ಚುನಾವಣೆ ನಡೆಸಲು ಮಾಸ್ಟರ್ ಪ್ಲ್ಯಾನ್ ನಡೆಸಿದೆಯಂತೆ.

ಸದ್ಯ ಉತ್ತರ ಪ್ರದೇಶ, ಪಂಜಾಬ್, ಗೋವಾ,ಮಣಿಪುರ ಮತ್ತು ಉತ್ತರಾಖಂಡ ಚುನಾವಣೆಗಳು ನಡೆಯುತ್ತಿವೆ. ಈ ಚುನಾವಣೆಯ ಫಲಿತಾಂಶ ಆಧರಿಸಿ ರಾಜ್ಯದಲ್ಲೂ ಅವಧಿಪೂರ್ಣ ಚುನಾವಣೆ ನಡೆಸಲು ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಈ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ 2023 ರ ಮೇ ವರೆಗೆ ವಿಧಾನಸಭೆಯ ಅಧಿಕಾರಾವಧಿ ಇದೆ. ಆದರೆ ಸದ್ಯ ಅವಧಿಗೂ ಆರು ತಿಂಗಳ ಮುಂದೇ ಚುನಾವಣೆ ನಡೆಸೋ ಲೆಕ್ಕಾಚಾರದಲ್ಲಿರೋ ಬಿಜೆಪಿ ಈ ಬಗ್ಗೆ ಸುಳಿವು ಕೊಟ್ಟಿದೆ.

Karnataka Election 2022 elections will be held in December

2022 ರ ಅಂತ್ಯದಲ್ಲಿ ಗುಜರಾತ್ ಹಾಗೂ ಹಿಮಾಲಯ ಪ್ರದೇಶಕ್ಕೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಚುನಾವಣೆ ಜೊತೆ ಕರ್ನಾಟಕದ ಚುನಾವಣೆಯನ್ನು ನಡೆಸಿದರೇ ಸುಲಭವಾಗಿ ಗೆಲ್ಲಬಹುದು ಎಂಬುದು ಕರ್ನಾಟಕದ ಬಿಜೆಪಿ ಲೆಕ್ಕಾಚಾರ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ರಾಜ್ಯದ ರಾಜಕೀಯದ ಮೇಲೆ ಪ್ರಭಾವ ಖಚಿತ ಪರಿಣಾಮ ಬೀರೋದು ಖಚಿತ. ಹೀಗಾಗಿ ಮಾರ್ಚ್ 10ರಂದು ನಡೆಯೋ ಮತ‌ ಎಣಿಕೆಯಲ್ಲಿ ಯೋಗಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇಲ್ಲಿ ಅವಧಿ ಪೂರ್ಣ ಚುನಾವಣೆ ಫಿಕ್ಸ್ ಎನ್ನಬಹುದು.

karnataka-election-2022-will-be-held-in-december
ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ

ರಾಜ್ಯದಲ್ಲಿ ‌ಸದ್ಯ ಹಲವು ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಯಬೇಕಿರೋದು ವಿಳಂಬವಾಗುತ್ತಿದೆ. ಹೀಗಾಗಿ ಒಂದೇ ಸಲ ವಿಧಾನಸಭಾ ಚುನಾವಣೆ ನಡೆಸೋದು ಕೂಡ ಅಷ್ಟು ಸುಲಭವಿಲ್ಲ. ಹೀಗಾಗಿ ಈ ಕಾರಣಗಳಿಂದ ವಿಧಾನಸಭಾ ಚುನಾವಣೆ ಅವಧಿ ನಡೆಯೋದಿಲ್ಲ ಎಂದೇ ಭಾವಿಸಲಾಗುತ್ತಿದೆ. ಅದರೆ ಈ ಬಗ್ಗೆ ಹೈಕಮಾಂಡ್ ಗೆ ವರದಿ ನೀಡಿರೋ ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ವಿರೋಧಿ ವಾತಾವರಣವಿದೆ. ಅಲ್ಲದೆ ಹಿಜಾಬ್, ಹಿಂದೂಪರ ಕಾರ್ಯಕರ್ತನ ಹತ್ಯೆಯಾಗಿದೆ. ಇದೆ ಸಂದರ್ಭದಲ್ಲಿ ಚುನಾವಣೆ ನಡೆಸಿದರೇ ಅದು ಪಕ್ಷಕ್ಕೆ ‌ಸಹಾಯವಾಗಲಿದೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಹೀಗಾಗಿ 2023 ರ ಮೇ ನಲ್ಲಿ ಅಂತ್ಯವಾಗೋ ವಿಧಾನಸಭೆಯನ್ನ 2022 ರ ಡಿಸೆಂಬರ್ (Karnataka Election 2022)ನಲ್ಲೇ ಕೊನೆಗೊಳಿಸಲು ತಂತ್ರ ಹೆಣೆಯಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ : ಸದ್ಯದಲ್ಲೇ ನಿಷೇಧವಾಗುತ್ತಾ ಪಿಎಫ್ಐ : ಸಿಎಂ ಬೊಮ್ಮಾಯಿ ಕೊಟ್ರು ಸುಳಿವು

ಇದನ್ನೂ ಓದಿ : ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸಿಎಂ ಚಾಲನೆ : ಸದ್ದಿಲ್ಲದೇ ಚುನಾವಣೆ ಸಿದ್ದವಾಗುತ್ತಿದೆ ಬಿಜೆಪಿ

( Karnataka Election 2022 elections will be held in December )

Comments are closed.