ರಾಜ್ಯದಲ್ಲಿ ಅತಂತ್ರ ಸರಕಾರ : ಏನ್‌ ಹೇಳುತ್ತೆ EXIT POLL

ಬೆಂಗಳೂರು : Karnataka Exit Poll Result Live : : ಕರ್ನಾಟಕ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ನ್ಯೂಸ್‌ ನೆಕ್ಸ್ಟ್‌, ‌ಜನ್‌ ಕೀ ಬಾತ್‌, ಸುವರ್ಣ ನ್ಯೂಸ್‌, ಸಿಜಿಎಸ್‌ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇನ್ನು ಟೈಮ್ಸ್‌ ನೌ, ಎಬಿಪಿ ಹಾಗೂ ಝೀ ನ್ಯೂಸ್ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಆದರೆ ರಿಪಬ್ಲಿಕ್‌ ಟಿವಿ, ಟಿವಿ 9, ಹಿಂದೂಸ್ಥಾನ್‌ ಟೈಮ್ಸ್‌ ನಡೆಸಿರುವ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ. ಹಾಗಾದ್ರೆ ಯಾವ ಸಮೀಕ್ಷೆಯಲ್ಲಿ ಯಾವ ಪಕ್ಷಗಳಿಗೆ ಎಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ ಅನ್ನೋ ಮಾಹಿತಿ ಇಲ್ಲಿದೆ.

ನ್ಯೂಸ್‌ ನೆಕ್ಸ್ಟ್‌ (News Next) ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ 105- 115 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್‌ ಈ ಬಾರಿ 80 – 90 ಸ್ಥಾನ, ಜೆಡಿಎಸ್‌ 30-40 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಪಕ್ಷೇತರರು 4-6 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಜೀ ನ್ಯೂಸ್‌ ಮ್ಯಾಟ್ರಿಜ್‌ (Zee News Matrize Agency) : ಮತದಾನೋತ್ತರ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ 108 ರಿಂದ 118, ಬಿಜೆಪಿ 79 – 89 ಮತ್ತು ಜೆಡಿಎಸ್‌ 25 – 35 ಸ್ಥಾನ ಹಾಗೂ ಇತರರು 2-6 ರಿಂದ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಜನ್‌ ಕೀ ಬಾತ್‌ – ಸುವರ್ಣ ನ್ಯೂಸ್ (Janki Bath / Suvarna News) ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಯಿದೆ. ಬಿಜೆಪಿ 94- 117 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್‌ 91 -106 ಸ್ಥಾನ, ಜೆಡಿಎಸ್‌ 14-24 ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಪಡೆದುಕೊಳ್ಳಲಿದ್ದಾರೆ.

ಸಿಜಿಎಸ್‌ (CGS ) ಸಮೀಕ್ಷೆಯಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದಿದೆ. ಬಿಜೆಪಿ 114, ಕಾಂಗ್ರೆಸ್ 86‌ ಜೆಡಿಎಸ್ 21 ‌ ಹಾಗೂ ಇತರರು 3 ಸ್ಥಾನಗಳನ್ನು ಪಡೆಯಲಿದ್ದಾರೆ.

ರಿಪಬ್ಲಿಕ್‌ – ಪಿ ಮಾರ್ಕ್‌ (Republic Tv- P MARQ) ನೀಡಿರುವ ಸಮೀಕ್ಷೆಯ ಪ್ರಕಾರ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಬಿಜೆಪಿ 85-100, ಕಾಂಗ್ರೆಸ್‌ 94-108 ಜೆಡಿಎಸ್ 24-32‌ ಹಾಗೂ ಪಕ್ಷೇತರರು 2-6 ಸ್ಥಾನಗಳನ್ನು ಪಡೆಯಲಿದ್ದಾರೆ.

ಪೋಲ್‌ ಸ್ಟಾರ್ಟ್‌ ( POLL start ) ಸಮೀಕ್ಷೆಯಲ್ಲಿಯೂ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ. ಬಿಜೆಪಿ 88-98 ಸ್ಥಾನ, ಕಾಂಗ್ರೆಸ್‌ 99-109 ಸ್ಥಾನ ಹಾಗೂ ಜೆಡಿಎಸ್ 21-26 ಸ್ಥಾನಗಳನ್ನು ಪಡೆಯಲಿದೆ.

ಟಿವಿ 9 (TV 9 Bhartvarsha ) ನಡೆಸಿರುವ ಸಮೀಕ್ಷೆಯ ಪ್ರಕಾರ ಬಿಜೆಪಿ 88-98. ಕಾಂಗ್ರೆಸ್‌ 99-100 ಸ್ಥಾನಗಳನ್ನು ಪಡೆಯಲಿದ್ರೆ ಜೆಡಿಎಸ್‌ 21-26, ಹಾಗೂ ಪಕ್ಷೇತರರು 2-6 ಸ್ಥಾನಗಳನ್ನು ಪಡೆದುಕೊಳ್ಳಲಿದ್ದಾರೆ.

ಹಿಂದೂಸ್ಥಾನ್‌ ಟೈಮ್ಸ್‌ (HT Times ) ಸಮೀಕ್ಷೆಯಲ್ಲಿಯೂ ಯಾವುದೇ ಪಕ್ಷಕ್ಕೂ ಕೂಡ ಸ್ಪಷ್ಟ ಬಹುಮತ ಲಭಿಸುವುದಿಲ್ಲ ಎಂದಿದೆ. ಬಿಜೆಪಿ 85-100, ಕಾಂಗ್ರೆಸ್ 94-108‌ ಹಾಗೂ ಜೆಡಿಎಸ್ 24-32‌ ಸ್ಥಾನ ಹಾಗೂ ಪಕ್ಷೇತರರು 2-6 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಟೈಮ್ಸ್‌ ನೌ (Times Now) ನಡೆಸಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಸಷ್ಟ ಬಹುಮತ ಪಡೆಯಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಹೊರಹೊಮ್ಮಲಿದೆ ಎಂದು ಹೇಳಿದೆ. ಕಾಂಗ್ರೆಸ್ 106-120 ಸ್ಥಾನಗಳನ್ನು ಪಡೆಯಲಿದ್ರೆ, ಬಿಜೆಪಿ 78-92 ಸ್ಥಾನ ಹಾಗೂ ಜೆಡಿಎಸ್‌ 20-26 ಹಾಗೂ ಇತರರು 2-4 ಸ್ಥಾನಗಳನ್ನು ಪಡೆಯಲಿದ್ದಾರೆ.

ಎಬಿಪಿ (ABP) ಸಮೀಕ್ಷೆಯಲ್ಲಿಯೂ ಕಾಂಗ್ರೆಸ್‌ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 100-112 ಸ್ಥಾನಗಳನ್ನು ಪಡೆಯಲಿದ್ರೆ, ಬಿಜೆಪಿ 85-95 ಸ್ಥಾನ ಹಾಗೂ ಜೆಡಿಎಸ್‌ 21-29 ಹಾಗೂ ಇತರರು 2-6 ಸ್ಥಾನಗಳನ್ನು ಪಡೆಯಲಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಕೈಕೊಟ್ಟ ಮತಯಂತ್ರ : ಕುಕ್ಕೆಕಟ್ಟೆಯಲ್ಲಿ ರಕ್ಷಿತ್‌ ಶೆಟ್ಟಿ ಮತದಾನ

ಇದನ್ನೂ ಓದಿ : Karnataka exit poll 2023 : ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ? ಯಾವ ಪಕ್ಷಕ್ಕೆ ಅಧಿಕಾರ ?

Karnataka Exit Poll Result Live Karnataka Assembly Election 2023

Comments are closed.