IPL 2023 Ravindra Jadeja : ಗುಡ್ ನ್ಯೂಸ್, ಐಪಿಎಲ್ ನಲ್ಲಿ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ಕಂಬ್ಯಾಕ್

(IPL 2023 Ravindra Jadeja)ಟೀಂ ಇಂಡಿಯಾದ ಖ್ಯಾತ ಆಲ್ರೌಂಡರ್ ಸಿಎಸ್‌ಕೆ ಯ ಮಾಜಿ ನಾಯಕ ರವೀಂದ್ರ ಜಡೇಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ದ ಮುನಿಸಿಕೊಂಡಿರುವ ಜಡೇಜಾ ಮುಂದಿನ ಐಪಿಎಲ್ ನಲ್ಲಿ ಚೆನ್ನೈ ತಂಡದಿಂದ ದೂರವಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಈ ನಡುವಲ್ಲೇ ರವೀಂದ್ರ ಜಡೇಜಾ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾನು ಚೆನ್ನೈ ತಂಡಕ್ಕೆ ಮರಳುವ ಕುರಿತು ಸುಳಿವು ನೀಡಿದ್ದು, ಈ ಕುರಿತು ವಿಡಿಯೋವೊಂದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

(IPL 2023 Ravindra Jadeja)ಆರಂಭದಿಂದಲೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಕಾಣಿಸಿಕೊಂಡಿದ್ದ ರವೀಂದ್ರ ಜಡೇಜಾ ಕಳೆದ ಬಾರಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೇ ಉಳಿದುಕೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ ಸದ್ಯದಲ್ಲೇ ಐಪಿಎಲ್ ಗೆ ನಿವೃತ್ತಿ ಘೋಷಣೆ ಮಾಡುವ ಹಿನ್ನೆಲೆಯಲ್ಲಿ ಜಡೇಜಾ ಅವರಿಗೆ ನಾಯಕತ್ವದ ಹೊಣೆಯನ್ನ ವಹಿಸಲಾಗಿತ್ತು. ಆದರೆ ಐಪಿಎಲ್ ನಲ್ಲಿ ರವೀಂದ್ರ ಜಡೇಜಾ ನಾಯಕನಾಗಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ. ಅವರು ಗಾಯದ ನೆಪವೊಡ್ಡಿ ಕಳೆದ ಬಾರಿ ಅರ್ಧದಲ್ಲಿಯೇ ಐಪಿಎಲ್ ತೊರೆದಿದ್ದರು. ಐಪಿಎಲ್ 2023ರಲ್ಲಿ ಜಡೇಜಾ ಚೆನ್ನೈ ತೊರೆದು ಇತರ ತಂಡವನ್ನು ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಎಲ್ಲಾ ಊಹಾಪೋಹಗಳಿಗೆ ರವೀಂದ್ರ ಜಡೇಜಾ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಹಸಿರು ಬಣ್ಣದ ಡ್ರೆಸ್ ನಲ್ಲಿ ಓಡುತ್ತಾ ತಾಲೀಮು ಮಾಡುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಾವು ಸಿಎಸ್ ಕೆ ತಂಡದಲ್ಲಿಯೇ ಉಳಿಯುತ್ತೇವೆ ಎಂಬ ಸುಳಿವು ನೀಡಿದ್ದಾರೆ. 2023 ಕ್ಕೆ ಐಪಿಎಲ್‌ ಆಟ ಪ್ರಾರಂಭವಾಗಲಿದ್ದು,ಪಂದ್ಯದ ಡೆಟ್‌ ಪಿಕ್ಸ್‌ ಆಗಬೇಕಾಗಿದೆ ಅಷ್ಟೇ. ಇನ್ನೇನು ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ 16 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ವೇಳೆಯಲ್ಲಿ ಸುಮಾರು 650 ಆಟಗಾರರ ಹರಾಜನ್ನು ಹಾಕಲಾಗುತ್ತದೆ. ಇದರಲ್ಲಿ ಆಯ್ಕೆಯಾದವರು 2023 ರ ಐಪಿಎಲ್‌ ನಲ್ಲಿ ಆಡಲಿದ್ದಾರೆ. ರವೀಂದ್ರ ಜಡೇಜಾ ಒಂದೊಮ್ಮೆ ಸಿಎಸ್ ಕೆ ತಂಡದಿಂದ ದೂರವಾಗಲು ಬಯಸಿದ್ರೆ ಹರಾಜಿನಲ್ಲಿ ಭಾಗಿಯಾಗಬಹುದಾಗಿದೆ.

ಇದನ್ನೂ ಓದಿ: IND vs PAK Playing XI : ಪಾಕಿಸ್ತಾನ ವಿರುದ್ಧದ ಮೆಗಾ ಮ್ಯಾಚ್‌ಗೆ ಕೌಂಟ್‌ಡೌನ್, ಹೀಗಿರಲಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ:MCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ

ಟೀಂ ಇಂಡಿಯಾದ ಖ್ಯಾತ ಆಲ್ ರೌಂಡರ್ ಎನಿಸಿಕೊಂಡಿರುವ ರವೀಂದ್ರ ಜಡೇಜಾ ಖರೀದಿಗೆ ಸಾಕಷ್ಟು ತಂಡಗಳು ಮನಸ್ಸು ಮಾಡಿದ್ದವು. ಆದ್ರೆ ಕಳೆದ ಬಾರಿ ಸಿಎಸ್ ಕೆ ತಂಡ ಜಡೇಜಾ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿತ್ತು. ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಲ್ ಇತಿಹಾಸದಲ್ಲಿಯೇ ಕಳೆದ ಬಾರಿ ಹೀನಾಯ ಪ್ರದರ್ಶನವನ್ನು ಕಂಡಿತ್ತು. ಜೊತೆಗೆ ಜಡೇಜಾ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿರಲಿಲ್ಲ.

IPL 2023: Ravindra Jadeja announced his come back Into CSK team

Comments are closed.