Karnataka Government Holiday List 2022: 2022ರ ಅಧಿಕೃತ ರಜಾದಿನಗಳಿವು

ಕರ್ನಾಟಕದಲ್ಲಿ 2022ರ ಯಾವ ದಿನಗಳಂದು ರಜೆಗಳಿವೆ? ಪ್ರವಾಸ-ಪ್ರಯಾಣಕ್ಕೆ ಹೋಗಲು ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳಬಹುದು ಎಂದು ಯೋಚಿಸಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ ಕರ್ನಾಟಕ ಸರ್ಕಾರ ಮುಂದಿನ ವರ್ಷದ ರಜಾದಿನಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಮುಂದಿನ ವರ್ಷದ ಅಧಿಕೃತ ರಜಾದಿನಗಳ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ. (Karnataka Government Holiday List 2022)

15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
26-1-2022: ಬುಧವಾರ- ಗಣರಾಜ್ಯೋತ್ಸವ
1-3-202022: ಮಂಗಳವಾರ- ಮಹಾ ಶಿವರಾತ್ರಿ
2-4-2022: ಶನಿವಾರ- ಯುಗಾದಿ ಹಬ್ಬ
14-4-20222: ಗುರುವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
15-4-2022: ಶುಕ್ರವಾರ- ಗುಡ್‌ಫ್ರೈಡೇ
3-5-2022: ಮಂಗಳವಾರ- ಬಸವೇಶ್ವರ ಜಯಂತಿ/ಅಕ್ಷಯ ತೃತೀಯ, ಖುತುಬ್-ಎ-ರಂಜಾನ್
9-8-2022: ಬುಧವಾರ- ಮೊಹರಂ ಕಡೇ ದಿನ
15-8-2022: ಸೋಮವಾರ- ಸ್ವಾತಂತ್ರ್ಯ ದಿನಾಚರಣೆ
31-8-2022: ಬುಧವಾರ- ವರಸಿದ್ಧಿ ವಿನಾಯಕ ವ್ರತ
4-10-2022: ಮಂಗಳವಾರ- ಮಹಾನವಮಿ, ಆಯುಧಪೂಜೆ
5-10-2022: ಬುಧವಾರ- ವಿಜಯದಶಮಿ
24-10-2022: ಸೋಮವಾರ- ನರಕ ಚತುರ್ದಶಿ
26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ
1-11-2022: ಮಂಗಳವಾರ- ಕನ್ನಡ ರಾಜ್ಯೋತ್ಸವ
11-11-2022: ಶುಕ್ರವಾರ- ಕನಕದಾಸ ಜಯಂತಿ

ಸರ್ಕಾರ ಪ್ರಕಟಿಸಿರುವ ರಜಾ ಪಟ್ಟಿಯಲ್ಲಿ ರವಿವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಬಕ್ರೀದ್ (ಜುಲೈ 10), ಮಹಾಲಯ ಅಮಾವಾಸ್ಯೆ (ಸೆಪ್ಟೆಂಬರ್ 25), ಗಾಂಧೀ ಜಯಂತಿ (ಅಕ್ಟೋಬರ್ 2), ಮಹರ್ಷಿ ವಾಲ್ಮೀಕಿ ಜಯಂತಿ/ ಈದ್ ಮಿಲಾದ್ (ಅಕ್ಟೋಬರ್ 9) ಮತ್ತು ಕ್ರಿಸ್ಮಸ್ (ಡಿಸೆಂಬರ್ 25) ಸೇರಿಲ್ಲ. ಮುಸಲ್ಮಾನ ಸಮುದಾಯಕ್ಕೆ ಆಯಾ ನಿಗದಿತ ದಿನಾಂಕದ ಬದಲಿಗೆ ಬೇರೆ ದಿನ ಹಬ್ಬ ಬಂದಲ್ಲಿ ಆ ದಿನ ರಜಾ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ. ಸೆಪ್ಟೆಂಬರ್ 3 ಕೈಲ್ ಮುಹೂರ್ತ ಹಾಗೂ ಡಿಸೆಂಬರ್ 8 ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸ್ಥಳೀಯ ಸಾರ್ವತ್ರಿಕ ರಜಾ ಘೋಷಣೆಯನ್ನು ಕರ್ನಾಟಕ ಸರ್ಕಾರ ಮಾಡಿದೆ. ಇವೆಲ್ಲವನ್ನೂ ಹೊರತುಪಡಿಸಿ ಪರಿಮಿತ ರಜಾ, ಅಂದರೆ ಮನವಿಪೂರ್ವಕ ರಜಾದಿನಗಳು 22 ದಿನಗಳಿವೆ.

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

(Karnataka government holiday list 2022 approved by Karnataka Cabinet)

Comments are closed.