BPL Card Cancellation : ಕರ್ನಾಟಕ ಸರಕಾರ ಗ್ಯಾರಂಟಿ ಯೋಜನೆಗಳನ್ನು (Congress Gurantee Yojana) ಜಾರಿಗೆ ತರುತ್ತಿದೆ. ಆದ್ರೆ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯಗೊಳಿಸಿದೆ. ಅದ್ರಲ್ಲೂ ಬಹುತೇಕ ಯೋಜನೆಗಳು ಬಿಪಿಎಲ್ ಕಾರ್ಡುದಾರರಿಗೆ (BPL Card Holders) ಲಭಿಸುತ್ತಿದೆ. ಈ ಹಿನ್ನೆಲೆಯಲ್ಲೀಗ ಕರ್ನಾಟಕ ಸರಕಾರ ಹೊಸ ರೂಲ್ಸ್ (Karnataka Govt New Rules) ಜಾರಿಗೆ ತರುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡುದಾರರು ಇದ್ದು, ಈ ಪೈಕಿ ಕೇವಲ 97.27 ಲಕ್ಷ ಬಿಪಿಎಲ್ ಕಾರ್ಡುದಾರರು ಮಾತ್ರವೇ ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಸರಕಾರ ಮೂರು ತಿಂಗಳ ಕಾಲ ಪಡಿತರ ಸೌಲಭ್ಯ ಪಡೆಯದ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವುದಾಗಿ ಘೋಷಣೆ ಮಾಡಿತ್ತು.

ಇದರ ಬೆನ್ನಲ್ಲೇ ರಾಜ್ಯ ಸರಕಾರ ಮತ್ತೊಂದು ರೂಲ್ಸ್ ಜಾರಿ ಮಾಡಿದೆ. ಬಿಪಿಎಲ್ ಕಾರ್ಡುದಾರರು ಕಾರನ್ನು ಹೊಂದಿದ್ದರೆ ಅಂತಹ ಬಿಪಿಎಲ್ ಕಾರ್ಡು ಗಳನ್ನು ರದ್ದು ಮಾಡಲಾಗುವುದು ಎಂದು ಸಚಿವ ಕೆಎಚ್ ಮುನಿಯಪ್ಪ ಘೋಷಣೆ ಮಾಡಿದ್ದಾರೆ. ಅಲ್ಲದೇ ರಾಜ್ಯ ಸರಕಾರ ಕಾರು ಹೊಂದಿರುವ ಬಿಪಿಎಲ್ ಕಾರ್ಡುದಾರರನ್ನು ಪತ್ತೆ ಹಚ್ಚುತ್ತಿದೆ.
ಇದನ್ನೂ ಓದಿ : 10 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮೀ ಭಾಗ್ಯ
ಬಿಪಿಎಲ್ ಕಾರ್ಡುದಾರರು ಆಧಾರ್ ಕಾರ್ಡ್ ಜೊತೆಗೆ ಕಾರ್ಡ್‌ನ್ನು ಲಿಂಕ್ ಮಾಡುವುದು ಕಡ್ಡಾಯ. ಇನ್ನು ಆಧಾರ್ ಕಾರ್ಡ್ ಪಾನ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವುದರಿಂದ ನೀವು ಕಾರನ್ನು ಹೊಂದಿರುವ ಮಾಹಿತಿ ಸರಕಾರಕ್ಕೆ ಸುಲಭವಾಗಿ ಲಭ್ಯವಾಗಲಿದ್ದು, ಅಂತರ ಪಡಿತರ ಕಾರ್ಡುಗಳನ್ನು ರದ್ದು ಪಡಿಸಲಾಗುತ್ತದೆ.

ಕೇವಲ ವೈಟ್‌ಬೋರ್ಡ್ ಹೊಂದಿರುವ ಕಾರ್ಡುದಾರರಿಗೆ ಮಾತ್ರವೇ ಈ ನಿಯಮ ಅನ್ವಯವಾಗಲಿದೆ. ಆದರೆ ಬಾಡಿಗೆಗೆ ಕಾರನ್ನು ಖರೀದಿ ಮಾಡಿರುವ ಯೆಲ್ಲೋ ಬೋರ್ಡ್‌ದಾರರಿಗೆ ಈ ರೂಲ್ಸ್ ಅನ್ವಯ ಆಗೋದಿಲ್ಲ. ಈ ಕುರಿತು ಸಚಿವರೇ ಖುದ್ದು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್ : ಅನ್ನಭಾಗ್ಯ ಬೆನ್ನಲ್ಲೇ ಸರಕಾರದಿಂದ ಮತ್ತೊಂದು ಯೋಜನೆ
ಒಂದೊಮ್ಮೆ ಬಿಪಿಎಲ್ ಕಾರ್ಡು ಹೊಂದಿದ್ದು, ಸ್ವತಃ ಕಾರು ಹೊಂದಿದ್ದರೆ ನಿಮ್ಮ ಕಾರ್ಡು ರದ್ದಾಗುವುದು ಖಚಿತ. ಕಾರು ಹೊಂದಿರುವ ಬಿಪಿಎಲ್ ಕಾರ್ಡುದಾರರು ಮುಂದೆ ಎಪಿಎಲ್ ಕಾರ್ಡುದಾರರಾಗಿ ಬದಲಾವಣೆ ಆಗಲಿದ್ದಾರೆ. ಇನ್ನು ಬಿಪಿಎಲ್ ಕಾರ್ಡುಗಳಿಗೆ ಆಧಾರ್ ಲಿಂಕ್ ಕಡ್ಡಾಯ ಗೊಳಿಸಲಾಗಿದೆ.
ಒಂದೊಮ್ಮೆ ನಿಮ್ಮ ಪಡಿತರ ಕಾರ್ಡು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗದೇ ಇದ್ರೆ ಅಂತಹ ಬಿಪಿಎಲ್ ಕಾರ್ಡುದಾರರಿಗೆ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಸಿಗುವುದಿಲ್ಲ. ಈ ಕುರಿತು ರಾಜ್ಯ ಸರಕಾರ ಆದೇಶವನ್ನೂ ಹೊರಡಿಸಿದೆ. ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವ ಕಾರಣಕ್ಕೆ ಲಕ್ಷಾಂತರ ಗೃಹಿಣಿಯರು ಇಂದಿಗೂ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ದೊರಕುವುದಿಲ್ಲ.
ಇದನ್ನೂ ಓದಿ : ಸರಕಾರದ ಹೊಸ ರೂಲ್ಸ್ : ನವೆಂಬರ್ 1 ರಿಂದ ಬದಲಾಗಲಿದೆ ಈ ನಾಲ್ಕು ನಿಯಮ
Karnataka Government New Rules Do you have a BPL card ? Is this a car ? In that case your ration card will be cancelled