LKG, UKG, ಅಂಗನವಾಡಿ ಕೇಂದ್ರ ಆರಂಭ : ಎರಡು ವರ್ಷದ ಬಳಿಕ ಶಾಲೆಗೆ ಬಂದ ಚಿಣ್ಣರು

ಬೆಂಗಳೂರು : ಕೋವಿಡ್‌ -19 ಸಾಂಕ್ರಾಮಿಕ ರೋಗದಿಂದಾಗಿ ನಿಂತು ಹೋಗಿದ್ದ ಅಂಗನವಾಡಿ ಕೇಂದ್ರ, LKG ಮತ್ತು UKG ತರಗತಿಗಳು ಇಂದಿನಿಂದ ಆರಂಭಗೊಂಡಿವೆ. ರಾಜ್ಯ ಸರಕಾರ ಇತ್ತೀಚಿಗಷ್ಟೇ ಪೂರ್ಣ ಪ್ರಮಾಣದ ಶಾಲಾರಂಭಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿತ್ತು. ಮಾರ್ಗ ಸೂಚಿಯ ಅನ್ವಯ ಶಾಲೆಗಳನ್ನು ತೆರೆಯಲು ಸೂಚಿಸಿದ ಹಿನ್ನೆಲೆಯಲ್ಲಿಂದು ಚಿಣ್ಣರು ಬರೋಬ್ಬರಿ ಎರಡು ವರ್ಷಗಳ ಬಳಿಕ ಶಾಲೆಗೆ ಹಾಜರಾಗಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ರಾಜ್ಯ ಸರಕಾರ ಆರಂಭ ಮಾಡಿತ್ತು. ಇದೀಗ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರಕಾರ ಅನುಮತಿಯನ್ನು ನೀಡಿದೆ. ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿದ್ದರೆ, ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿಲ್ಲ.

ಇದನ್ನೂ ಓದಿ: Government Alert : ಸರಕಾರಿ ನೌಕರರಿಗೆ ಮಹತ್ವದ ಆದೇಶ : ಅನ್ಯ ಮೂಲದ ಆದಾಯ ಘೋಷಣೆ ಕಡ್ಡಾಯ

ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಆಫ್‌ಲೈನ್‌ ತರಗತಿಗಳು ಆರಂಭವಾಗುತ್ತಲೇ, ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ಬಂದ್‌ ಮಾಡಿವೆ. ಕೊರೊನಾ ಕಾರಣದಿಂದಾಗಿ ಶಾಲೆಗೆ ತೆರಳಲು ಸಾಧ್ಯವಾಗದ ವಿದ್ಯಾರ್ಥಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತರಗತಿಗಳನ್ನು ಆರಂಭಿಸುವ ಮೊದಲು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ತರಗತಿಗಳಿಗೆ ಹಾಜರಾಗುವ ಮಕ್ಕಳ ಪಾಲಕರಿಂದ ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಬರುವ ಪ್ರತಿಯೊಂದು ಮಗುವಿನ ಆರೋಗ್ಯದ ಮೇಲೂ ನಿಗಾ ವಹಿಸಲು ಸೂಚಿಸಲಾಗಿದೆ. ಮಕ್ಕಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಶಾಲೆಯ ಆವರಣದೊಳಗೆ ಪ್ರವೇಶ ಮಾಡುವಂತಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ: ಉಪನ್ಯಾಸಕರು ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಧರಿಸುವಂತಿಲ್ಲ: ಡಿಡಿಪಿಯು ಆದೇಶದ ಬಗ್ಗೆ DC ಹೇಳಿದ್ದೇನು ?

ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆಯನ್ನು ಪಡೆದಿರಬೇಕು. ತರಗತಿಗಳಲ್ಲಿ ಮಕ್ಕಳು ಸಾಮಾಜಿಕ ಅಂತರ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗಿರುವ ಮಕ್ಕಳು ಶಾಲೆಗೆ ಬರದಂತೆ ಎಚ್ಚರಿಕೆಯನ್ನು ವಹಿಸಬೇಕು. ಮಕ್ಕಳು ಮನೆಯಿಂದಲೇ ಉಪಹಾರ ಹಾಗೂ ನೀರನ್ನು ತರುವಂತೆ ಸೂಚಿಸಬೇಕು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

(LKG, UKG, Anganwadi Centre opened: Children who came to school after the age of two)

Comments are closed.