ಮಹಿಳೆಯರ ಬಟ್ಟೆಯಿಂದ್ಲೇ ಪುರುಷರು ಉದ್ರೇಕಿತರಾಗ್ತಾರೇ ! ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ಬೆಂಗಳೂರು : ಪ್ರಿಯಾಂಕಾ ಗಾಂಧಿ ಬಿಕನಿ ಸೇರಿದಂತೆ ಯಾವುದೇ ಬಟ್ಟೆ ಹೆಣ್ಣುಮಕ್ಕಳ ಸ್ವಾತಂತ್ರ್ಯ ಎನ್ನುವ ಮೂಲಕ ವಿವಾದ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (Renukacharya Controversial Statement) ದೊಡ್ಡ ಎಡವಟ್ಟು ಮಾಡೋ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಹಿಜಾಬ್ ವಿಚಾರಕ್ಕೆ ನೀಡಿದ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ರೇಣುಕಾಚಾರ್ಯ ಹೆಣ್ಣುಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಮಹಿಳೆಯರು ಹಾಕೋ ಬಟ್ಟೆಯಿಂದ ಕೆಲ ಪುರುಷರು ಉದ್ರೇಕಿತರಾಗುತ್ತಾರೆ ಎಂದು ರೇಣುಕಾಚಾರ್ಯ ಹೇಳಿರೋದು ಈಗ ರಾಜ್ಯದ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದ್ದು, ರೇಣುಕಾಚಾರ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಚಿವ ಸ್ಥಾನಕ್ಕಾಗಿ ಲಾಭಿ ಮಾಡೋದರಲ್ಲಿ ಬ್ಯುಸಿಯಾಗಿರೋ ರೇಣುಕಾಚಾರ್ಯ ಈ ಬ್ಯುಸಿಯಲ್ಲೂ ಹಿಜಾಬ್ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಿಯಾಂಕಾ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಮಹಿಳೆಯರು ಬಿಕನಿ ಹಾಕುವುದು ಅವರ ಮೂಲಭೂತ ಹಕ್ಕು ಎಂಬ ಕೀಳು ಮಟ್ಟದ ಹೇಳಿಕೆಯನ್ನು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅಲ್ಲದೇ ಈ ಹೇಳಿಕೆಗಾಗಿ ಪ್ರಿಯಾಂಕಾ ಗಾಂಧಿ ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಎಲ್ಲಿಯವರು? ಅವರ ತಾಯಿ ಎಲ್ಲಿಯವರು ? ಅವರ ತಾಯಿ ಯಾರನ್ನು ಮದುವೆಯಾಗಿದ್ದಾರೆ ? ಇದೆಲ್ಲವೂ ಅವರ ವೈಯಕ್ತಿಕ ವಿಚಾರ ‌‌ ಆದರೆ ಮಹಿಳೆಯರ ಬಿಕನಿ ಬಗ್ಗೆ ಪ್ರಿಯಾಂಕಾ ಹೇಳಿಕೆ ಸರಿಯಲ್ಲ.

ಮಹಿಳೆಯರ ಬಟ್ಟೆಯಿಂದ ಕೆಲ ಪುರುಷರು ಉದ್ರೇಕಿತರಾಗ್ತಾರೇ ಎಂದಿದ್ದಾರೆ.‌ ಮಾತಿನ ಭರದಲ್ಲಿ ರೇಣುಕಾಚಾರ್ಯ ಹೆಣ್ಣುಮಕ್ಕಳ ಬಟ್ಟೆ ಬಗ್ಗೆ ನೀಡಿದ ಹೇಳಿಕೆ ಈಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇದಲ್ಲದೇ ಹಿಜಾಬ್ ಹೋರಾಟದ ಬೆಂಬಲಕ್ಕೆ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಮತ್ತು ಪಿಎಫ್ಐ ಇದೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.ಅಲ್ಲದೇ ಭಾರತಾಂಬೆಯ ಮಕ್ಕಳೆಲ್ಲರೂ ಒಂದೇ. ನಾವು ರಾಜಕಾರಣದಲ್ಲಿ ಕೇಸರಿಕರಣ ಮಾಡಿರಬಹುದು. ಆದರೆ ಶಾಲೆಗಳಲ್ಲಿ ಕೇಸರಿಕರಣ ಮಾಡಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.

ಇನ್ನು ರೇಣುಕಾ ಉದ್ರೇಕಕಾರಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ರೇಣುಕಾಚಾರ್ಯ ಮುತ್ತುರಾಜ. ಆ ಮುತ್ತುರಾಜನ ಬಗ್ಗೆ ನಾನು ಮಾತಾಡಲ್ಲ. ಮುತ್ತುರಾಜ ಅಂದ್ರೇ ನಮ್ಮ ಪಕ್ಕದ ಮನೆಯ ರಾಜ್ ಕುಮಾರ್ ಅಲ್ಲ. ಇವರು ಬಿಜೆಪಿಯ ಮುತ್ತುರಾಜ್ ಎಂದು ಡಿಕೆಶಿ ರೇಣುಕಾ ಕುರಿತು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಹಿಜಾಬ್ ಹಂಗಾಮ ಸೃಷ್ಟಿಯಾಗಿರೋ ಕರ್ನಾಟಕದಲ್ಲಿ ಸದ್ಯ ಪ್ರಿಯಾಂಕಾ ಬಿಕನಿ ಹೇಳಿಕೆ ಹಾಗೂ ರೇಣುಕಾ ಉದ್ರೇಕದ ಮಾತು ಹೊಸ ವಿವಾದ ಹುಟ್ಟುಹಾಕಿದೆ.

ಇದನ್ನೂ ಓದಿ : ಹಿಜಾಬ್‌ ವಿವಾದ : ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ, ರಕ್ತಪಾತಕ್ಕೆ ಅವಕಾಶ ಬೇಡ : ಮಾಜಿ ಸಿಎಂ ಕುಮಾರಸ್ವಾಮಿ

ಇದನ್ನೂ ಓದಿ : ‘ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ’ : ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ

( Honnali MLA MP Renukacharya Controversial Statement)

Comments are closed.