ಮಂಗಳವಾರ, ಏಪ್ರಿಲ್ 29, 2025
HomeCrimeದಾವಣಗೆರೆ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ದಾವಣಗೆರೆ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

- Advertisement -

ದಾವಣಗೆರೆ : ಸಿಲಿಕಾನ್‌ ಸಿಟಿಯಲ್ಲಿ ಒಂದೇ ಕುಟುಂಬದ ಐವರ ಸಾವಿನ ಪ್ರಕರಣ ಮಾಸುವ ಮುನ್ನವೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣೆಗರೆಯಲ್ಲಿ ನಡೆದಿದ್ದು, ಘಟನೆಯಿಂದಾಗಿ ಬೆಣ್ಣೆ ನಗರಿಯ ಮಂದಿ ಬೆಚ್ಚಿ ಬಿದ್ದಿದ್ದಾರೆ.

ದಾವಣಗೆರೆಯ ಭರತ್ ಕಾಲೋನಿಯ ಕೃಷ್ಣಾ ನಾಯ್ಕ್, ಸುಮಾ, ಧ್ರುವ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು. ಹಲವು ಸಮಯಗಳಿಂದಲೂ ಕೃಷ್ಣ ನಾಯ್ಕ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಎನ್ನಲಾಗುತ್ತಿದೆ. ಕೃಷ್ಣ ನಾಯ್ಕ್ ಮೊದಲು ಪತ್ನಿ ಮತ್ತು ಮಗನಿಗೆ ವಿಷ ಕುಡಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಆರ್ ಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಮೂವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆರ್ಥಿಕ ಸಂಕಷ್ಟದಿಂದಲೇ ಮೂವರು ಇಹಲೋಕ ತ್ಯೆಜಿಸಿದ್ದಾರೆಯೇ ಅಥವಾ ಬೇರೆ ಯಾವುದಾದ್ರೂ ಕಾರಣವಿದೆಯೇ ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ನನ್ನ ಹೆಸರು ಬಳಸಲು‌ನಿರ್ಬಂಧ ಹೇರಿ: ತಂದೆ-ತಾಯಿ ವಿರುದ್ಧವೇ ನ್ಯಾಯಾಲಯದ ಮೊರೆ ಹೋದ ನಟ

ಇದನ್ನೂ ಓದಿ : ರಾಜ್ಯವನ್ನು ಬೆಚ್ಚಿ ಬೀಳಿಸಲಿದೆ ಆಪರೇಶನ್ ಹಸ್ತ: ಕಾಂಗ್ರೆಸ್ ಸೇರೋ ಜೆಡಿಎಸ್-ಬಿಜೆಪಿ ಶಾಸಕರ್ಯಾರು ಗೊತ್ತಾ?!

( 3 members of the same family commit Suicide in davangere )

https://www.youtube.com/watch?v=YXZ3SBZo3M0
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular