Kirit Somaiya:ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನು ರೇಲ್ವೈ ನಿಲ್ದಾಣದಲ್ಲಿ ಬಂಧಿಸಿದ ಮಹಾರಾಷ್ಟ್ರ ಪೊಲೀಸರು

ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಭಾರತೀಯ ಜನತಾ ಪಾರ್ಟಿಯ ನಾಯಕ ಹಾಗೂ ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕಿರಿತ್ ಸೋಮಯ್ಯರನ್ನು ಮಹಾರಾಷ್ಟ್ರ ಪೊಲೀಸರು ಕರಾಡಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕೊಲ್ಲಾಪುರಕ್ಕೆ ತೆರಳಲು ಹೊರಟಿದ್ದ ಕಿರಿತ್ ಸೋಮಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಕಿರಿತ್ ಸೋಮಯ್ಯ ಕೊಲ್ಲಾಪುರಕ್ಕೆ ಭೇಟಿ ನೀಡುವುದಕ್ಕೆ ಜಿಲ್ಲಾಧಿಕಾರಿ ತಡೆಯಾಜ್ಞೆ ಹೊರಡಿಸಿದ್ದು, ಸೆ.20 ಹಾಗೂ 21 ರಂದು ಕೊಲ್ಲಾಪುರದಲ್ಲಿ 144 ಸೆಕ್ಷನ್ ಕೂಡ ಜಾರಿ ಮಾಡಿ ಆದೇಶ ಹೊರಡಿಸಿದ್ದರು.

ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ನಾಯಕನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ಥ್ಯಾಕ್ರೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಿರಿತ್ ಸೋಮಯ್ಯ, ನನಗೆ ಮುಂಬೈ ಬಿಟ್ಟು ಹೋಗುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಸರ್ಕಾರಕ್ಕೆ ಯಾರು ಅಧಿಕಾರ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದರು.

ಮಹಾರಾಷ್ಟ್ರ ಸರ್ಕಾರದ ಸಚಿವ ಮುರ್ಸಿಫ್ ಹಸನ್ ಮಾಲಿಕತ್ವದ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಆಲ್ಲಿಗೂ ಭೇಟಿ ನೀಡಲು ಸೋಮಯ್ಯ ನಿರ್ಧರಿಸಿದ್ದರು.

ಹೀಗಾಗಿ ಸೋಮಯ್ಯ ಅವರನ್ನು ಹತ್ತಿಕ್ಕುವ ಪ್ರಯತ್ನವಾಗಿ ರೇಲ್ವೆ ಸ್ಟೇಶನ್ ನಲ್ಲೇ ಬಂಧಿಸಲಾಗಿದೆ. ಇದಕ್ಕೂ ಮುನ್ನ ಕಿರಿತ್ ಸೋಮಯ್ಯ ಮಹಾರಾಷ್ಟ್ರ ರಾಜ್ಯದ ಸಚಿವರ ವಿರುದ್ಧ ಮನಿ ಲ್ರ್ಯಾಂಡ್ರಿಂಗ್ ಆರೋಪ ಕೂಡ ಮಾಡಿದ್ದರು.

( BJP leader Kirit Somaiya detained at Karad railway station)

Comments are closed.