Candy Crush Ban : ಕ್ಯಾಂಡಿಕ್ರಶ್‌ ಪ್ರಿಯರಿಗೆ ಬಿಗ್‌ ಶಾಕ್‌ : ಕರ್ನಾಟಕದಲ್ಲಿ ಕ್ಯಾಂಡಿಕ್ರಶ್‌ ಬ್ಯಾನ್‌ !

ಬೆಂಗಳೂರು : ಮೊಬೈಲ್‌ ಗೇಮ್‌ಗಳಲ್ಲೇ ಕ್ಯಾಂಡಿಕ್ರಶ್‌ ಅತ್ಯಂತ ಜನಪ್ರಿಯ ಗೇಮ್.‌ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಕ್ಯಾಂಡಿಕ್ರಶ್‌ ಆಡುತ್ತಾ ಟೈಂಪಾಸ್‌ ಮಾಡ್ತಾರೆ. ಆದ್ರೆ ಇಂತಹ ಕ್ಯಾಂಡಿಕ್ರಶ್‌ ಪ್ರಿಯರಿಗೆ ರಾಜ್ಯ ಸರಕಾರ ಬಿಗ್‌ಶಾಕ್‌ ಕೊಡಲು ಮುಂದಾಗಿದೆ.

ಇತ್ತೀಚಿನ ದಿಗಳಲ್ಲಿ ಆನ್‌ಲೈನ್‌ ಜೂಜಾಟದಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿಯೂ ಆನ್‌ಲೈನ್‌ ಜೂಜಾಟಕ್ಕೆ ಬ್ರೇಕ್‌ ಹಾಕಬೇಕೆಂಬ ಆಗ್ರಹ ಕೇಳಿಬಂದಿದೆ. ಇದೇ ಕಾರಣಕ್ಕೆ ರಾಜ್ಯ ಸರಕಾರ ಆನ್‌ಲೈನ್‌ ಜೂಜಾಟಕ್ಕೆ ಬ್ರೇಕ್‌ ಹಾಕುವ ಸಲುವಾಗಿ ಮಸೂದೆಯನ್ನು ಮಂಡಿಸಿದೆ.

ಮಸೂದೆ ಮಂಡನೆಯ ಬೆನ್ನಲ್ಲೇ ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿಯೂ ಗಂಭೀರ ಚರ್ಚೆ ನಡೆಯುತ್ತಿದೆ. ಬೆಟ್ಟಿಂಗ್‌ ಆಪ್‌ ಜೊತೆಗೆ ಸ್ಕಿಲ್‌ ಗೇಮ್‌ಗಳನ್ನು ನಿಷೇಧಿಸ ಬೇಕೆಂಬ ಮಾತುಗಳು ಕೇಳಿಬಂದಿವೆ. ರಾಜ್ಯ ಸರಕಾರ ಮಂಡಿಸಿರುವ ಮಸೂದೆ ಜಾರಿಗೆ ಬಂದಿದ್ರೆ ಆದ್ರೆ ಹಣವನ್ನು ಪಣಕ್ಕಿಟ್ಟು ಯಾವೆಲ್ಲಾ ಆಟಗಳು ನಡೆಯುತ್ತವೆಯೋ ಅಂತಹ ಆಟಗಳು ಬ್ಯಾನ್‌ ಆಗಲಿದೆ.

ಇನ್ನು ಶಾಸಕ ಶರತ್‌ ಬಚ್ಚೆಗೌಡ ಕ್ಯಾಂಡಿಕ್ರಶ್‌ ಆಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕ್ಯಾಂಡಿಕ್ರಶ್‌ ಹಣ ಪಾವತಿಸಿ ಆಟವಾಡಲು ಅವಕಾಶವಿದೆ. ಹೀಗಾಗಿ ಇಂತಹ ಆಪ್‌ಗಳ ಬಗ್ಗೆ ಸರಕಾರ ಯಾವ ನಿರ್ಧಾರ ಕೈಗೊಂಡಿದೆ ಅನ್ನೋ ಪ್ರಶ್ನೆಯನ್ನು ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು, ಹಣ ಪಾವತಿಸಿ ಯಾವೆಲ್ಲಾ ಆಟವನ್ನು ಆನ್‌ ಲೈನ್‌ ಮೂಲಕ ಆಡಲು ಅವಕಾಶವಿದೆಯೋ ಅಂತಹ ಆಟವನ್ನು ಬ್ಯಾನ್‌ ಮಾಡಲಾಗುವುದು ಎಂದಿದ್ದಾರೆ.

ಇನ್ಮುಂದೆ ಕ್ಯಾಂಡಿಕ್ರಶ್‌ ಆಟವಾಡೋದಕ್ಕೆ ಯಾವುದೇ ಸಮಸ್ಯೆಯಿಲ್ಲ. ಒಂದೊಮ್ಮೆ ಹಣ ಪಾವತಿಸಿ ಆಟವಾಡಿದ್ರೆ ಜೈಲು ಸೇರೊದು ಗ್ಯಾರಂಟಿ. ಕೇವಲ ಕ್ಯಾಂಡಿಕ್ರಶ್‌ ಮಾತ್ರವಲ್ಲ ಆನ್‌ಲೈನ್‌ ಚೆಸ್‌, ಲೂಡೋ, ಕ್ಯಾರಂ ಸೇರಿದಂತೆ ಅನೇಕ ಆಟಗಳ ಆಪ್‌ ಬ್ಯಾನ್‌ ಆಗೋದು ಗ್ಯಾರಂಟಿ.

ಇದನ್ನೂ ಓದಿ : ಕರ್ನಾಟಕದಲ್ಲಿ ಆನ್ ಲೈನ್ ಜೂಜಾಟಕ್ಕೆ ಬ್ರೇಕ್‌ : ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ಇದನ್ನೂ ಓದಿ : ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ನೀಚ ಮಗ

( Big Shock for Candy crush lovers: Candy crush Ban in Karnataka )

Comments are closed.