ಕೋವಿಡ್‌ ಲಸಿಕೆಯನ್ನುಮನೆ ಮನೆಗೆ ತೆರಳಿ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ : ದೇಶದ ಸ್ಥಿತಿಗತಿಗಳನ್ನುಗಮನಿಸಿದರೆ, ಈ ಸಮಯದಲ್ಲಿ ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡಲು ಸಾಧ್ಯವಿಲ್. ಅಲ್ಲದೇ ಈಗಿರುವ ಲಸಿಕೆ ನೀತಿಯನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಂಗವಿಕಲರು ಮತ್ತು ಸಮಾಜದಲ್ಲಿರುವ ದುರ್ಬಲ ವರ್ಗದವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲು ನಿರ್ದೇಶನ ನೀಡುವಂತೆ ಕೋರಿ ಯುವ ವಕೀಲರ ಸಂಘ ಸಲ್ಲಿಸಿದ್ದ ಮನವಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್‌, ‘ಪ್ರಸ್ತುತ ದೇಶದಾದ್ಯಂತ ಲಸಿಕೆ ನೀಡಿಕೆ ಪ್ರಗತಿಯಲ್ಲಿದ್ದು, ಶೇ 60ಕ್ಕಿಂತ ಹೆಚ್ಚು ಮಂದಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ’ ಎಂದು ಹೇಳಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರಿಗಷ್ಟೇ ಜಿಲ್ಲಾಧಿಕಾರಿಗಳ ಭವನಕ್ಕೆ ಪ್ರವೇಶ

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರ ಪೀಠ, ‘ದೇಶದಲ್ಲಿ ಒಂದು ಪ್ರದೇಶಕ್ಕಿಂತ ಇನ್ನೊಂದು ಪ್ರದೇಶದ ಪರಿಸ್ಥಿತಿ ಭಿನ್ನವಾಗಿದೆ. ಲಡಾಖ್‌, ಉತ್ತರ ಪ್ರದೇಶದಲ್ಲಿರುವ ಪರಿಸ್ಥಿತಿ, ಕೇರಳಕ್ಕಿಂತ ಭಿನ್ನವಾಗಿದೆ. ‌

ಇದನ್ನೂ ಓದಿ: 2 ಅಲೆಗಿಂತ 7 ಪಟ್ಟು ಹೆಚ್ಚು ಮಕ್ಕಳನ್ನು ಕಾಡುತ್ತೆ ಕೊರೊನಾ 3ನೇ ಅಲೆ : ತಜ್ಞರ ವರದಿ ಆತಂಕ

ಹಳ್ಳಿಗಳಿಗಿಂತ ನಗರ ಪ್ರದೇಶಗಳ ಪರಿಸ್ಥಿತಿ ಬೇರೆಯೇ ಇದೆ. ಇಂಥ ವಿಶಾಲ ರಾಷ್ಟ್ರದಲ್ಲಿರುವ ಪ್ರತಿ ರಾಜ್ಯದಲ್ಲೂ ವಿವಿಧ ರೀತಿಯ ಸಮಸ್ಯೆಗಳಿವೆ. ಇಂಥ ವೈವಿಧ್ಯಮಯ ಸನ್ನಿವೇಶಗಳಿರುವ ದೇಶಕ್ಕೆ ಒಂದೇ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

(Not possible to give covid vaccination by going house : Supreme court)

Comments are closed.