ಕರಾವಳಿ, ಮಲೆನಾಡಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್‌ ಪೋನ್‌ : ಹೈಅಲರ್ಟ್‌ ಘೋಷಣೆ

ಮಂಗಳೂರು : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದಾದ್ಯಂತ ಆತಂಕ ಮೂಡಿಸಿದ್ದ ಸ್ಯಾಟಲೈಟ್‌ ಪೋನ್‌ ಇದೀಗ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಸ್ಯಾಟಲೈಟ್‌ ಪೋನ್‌ ಮತ್ತೊಮ್ಮೆ ರಿಂಗಣಿಸಿದೆ. ಈ ಹಿನ್ನೆಲೆಯಲ್ಲೀಗ ಗುಪ್ತಚರ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ.

ಹಬ್ಬಗಳು ಸಮೀಪಿಸುತ್ತಿರುವ ಬೆನ್ನಲ್ಲೇ ವಿದ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಹವಣಿಸುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಕೇಂದ್ರಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿ ಭಾಗದಲ್ಲಿ ಹೈಅಲರ್ಟ್‌ ಘೋಷಣೆ ಮಾಡಲಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದಲೂ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಸ್ಯಾಟಲೈಟ್‌ ಪೋನ್‌ ಭಾರೀ ಸದ್ದು ಮಾಡುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಮುಡಿಪು, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಸ್ಯಾಟಲೈಟ್‌ ಪೋನ್‌ ಕಳೆದೊಂದು ವಾರದ ಹಿಂದೆ ಆಕ್ಟಿವ್‌ ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ತನಿಖೆಯನ್ನು ನಡೆಸುತ್ತಿದೆ. ಆದರೆ ಸ್ಯಾಟಲೈಟ್‌ ಪೋನ್‌ ಬಳಕೆಯನ್ನು ಯಾರು ಮಾಡುತ್ತಿದ್ದಾರೆ ಅನ್ನೋದು ಇನ್ನೂ ಪತ್ತೆಯಾಗಿಲ್ಲ.

ಕಳೆದ ವಿಧಾನಸಭಾ ಅಧಿವೇಶನದಲ್ಲಿಯೂ ಸ್ಯಾಟಲೈಟ್‌ ಪೋನ್‌ ವಿಚಾರ ಪ್ರಸ್ತಾಪವಾಗಿತ್ತು. ಈ ವೇಳೆಯಲ್ಲಿ ಗೃಹ ಸಚಿವರು ಸ್ಪಷ್ಟನೆಯನ್ನು ನೀಡುವ ಕಾರ್ಯವನ್ನು ಮಾಡಿದ್ದಾರೆ. ಆದ್ರೀಗ ಮತ್ತೆ ಸ್ಯಾಟ್‌ ಲೈಟ್‌ ಪೋನ್‌ ರಿಂಗಣಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಇಲಾಖೆ ಅಲರ್ಟ್‌ ಆಗಿದೆ. ಅಲ್ಲದೇ ಕೇಂದ್ರ ಗುಪ್ತಚರ ಇಲಾಖೆ ಕಳೆದೊಂದು ವರ್ಷದಿಂದಲೂ ಸ್ಯಾಟಲೈಟ್‌ ಕರೆಯ ಬಗ್ಗೆ ಕಣ್ಣಿಟ್ಟಿದ್ದು, ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಸ್ಯಾಟಲೈಟ್‌ ಪೋನ್‌ ಕರೆ ಪತ್ತೆಯಾಗಿದೆ ಎನ್ನುವ ಕುರಿತು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಮೈಸೂರು ಕೋರ್ಟ್‌ ನಲ್ಲಿ ಬಾಂಬ್ ಬ್ಲಾಸ್ಟ್ ಕೇಸ್ : NIA ಕೋರ್ಟ್‌ನಿಂದ ಮಹತ್ವದ ತೀರ್ಪು : 3 ಆರೋಪಿಗಳಿಗೆ ಶಿಕ್ಷೆ ಪ್ರಕಟ

ಇದನ್ನೂ ಓದಿ : 75 ಲಕ್ಷಕ್ಕೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ! ತಂದೆ, ಮಗಳಿಗೆ ವಂಚಿಸಿದ ಸ್ನೇಹಿತ

( Satellite phone calls back to coastal and highlands of Karnataka )

Comments are closed.